ಕೊರೊನಾ ಎಫೆಕ್ಟ್ : ಕುವೈತ್ ನಲ್ಲಿ ಸಾರ್ವತ್ರಿಕ ರಜೆ ಘೋಷಣೆ, ಸಂಪೂರ್ಣ ಬಂದ್

0

ಕುವೈತ್ : ಕೊರೊನಾ ಮಹಾಮಾರಿ ಗಲ್ಫ್ ರಾಷ್ಟ್ರಗಳು ತತ್ತರಿಸಿ ಹೋಗುವಂತೆ ಮಾಡುತ್ತಿದೆ. ಅದ್ರಲ್ಲೂ ಕುವೈತ್ ರಾಷ್ಟ್ರದಲ್ಲಿ 72 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಅಲ್ಲದೇ ಸೋಂಕು ಇನ್ನಷ್ಟು ವ್ಯಾಪಿಸೋ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕುವೈತ್ ಸಚಿವಾಲಯ ಎರಡು ವಾರಗಳ ಕಾಲ ಸಾರ್ವತ್ರಿಕ ರಜೆ ಘೋಷಿಸಿದೆ. ಮಾತ್ರವಲ್ಲ ಪ್ರಾದೇಶಿಕ ಹಾಗೂ ಅಂತರಾಷ್ಟ್ರೀಯ ವಿಮಾನ ಸೇವೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಕುವೈತ್ ನಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿದ್ದಂತೆಯೇ ಸಾಕಷ್ಟು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿತ್ತು. ಶಾಲೆಗಳಿ ರಜೆ ಘೋಷಣೆ ಮಾಡಿತ್ತು. ವಿದೇಶಿ ಪ್ರಯಾಣ ಕೈಗೊಳ್ಳದಂತೆ ಜನರಲ್ಲಿ ಮನವಿ ಮಾಡಿದ ಬೆನ್ನಲ್ಲೇ ಸುಮಾರು 14 ರಾಷ್ಟ್ರಗಳಿಗೆ ವಿಮಾನ ಸೇವೆಯನ್ನು ಬಂದ್ ಮಾಡಿತ್ತು.

ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರದಂತೆಯೂ ಎಚ್ಚರಿಕೆಯನ್ನು ನೀಡಿತ್ತು. ಸೋಂಕು ಪೀಡಿತರಿಗೆ ವಿಶೇಷ ಚಿಕಿತ್ಸೆಯ ವ್ಯವಸ್ಥೆಯನ್ನೂ ಕಲ್ಪಿಸಿದೆ. ಆದರೆ ಕುವೈತ್ ನಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕುವೈತ್ ಮಾರ್ಚ್ 12 ರಿಂದ ಮಾರ್ಚ್ 29ರ ವರೆಗೆ ಸಾರ್ವತ್ರಿಕ (ಸರಕಾರಿ ಮತ್ತು ಖಾಸಗಿ) ರಜೆ ಘೋಷಿಸಿದೆ. ಅಂಗಡಿ, ರೆಸ್ಟೋರೆಂಟ್, ಮಾಲ್, ಸಿನಿಮಾ ಥಿಯೇಟರ್, ಪಾರ್ಕ್ ಸೇರಿದಂತೆ ಎಲ್ಲಾ ಕಡೆ ನಿಷೇಧ ಹೇರಲಾಗಿದೆ. ಮಾತ್ರವಲ್ಲ ಎಲ್ಲಾ ವಾಣಿಜ್ಯ ವಿಮಾನಯಾನ ಸೇವೆಯನ್ನು ಸಂಪೂರ್ಣವಾಗಿ ರದ್ದು ಮಾಡಿದೆ. ಈ ಕುರಿತು ಕುವೈತ್ ಸ್ಥಳೀಯ ವಾಹಿನಿ ವರದಿ ಮಾಡಿದೆ.

Leave A Reply

Your email address will not be published.