ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ ‘ಕೆಜಿಎಫ್-2’

0

ಕೆಜಿಎಫ್…ಕನ್ನಡ ಸಿನಿಮಾ ಇತಿಹಾಸದಲ್ಲಿಯೇ ಹೊಸ ಇತಿಹಾಸ ನಿರ್ಮಿಸಿದ ಸಿನಿಮಾ. ರಾಕಿಂಗ್ ಸ್ಟಾರ್ ಯಶ್ ನಟಿಸಿದ್ದ ಕೆಜಿಎಫ್ ಚಾಪ್ಟರ್ -1 ಭಾರತೀಯ ಚಿತ್ರರಂಗದಲ್ಲೇ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು.

ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಲಂ ಭಾಷೆಗಳಲ್ಲಿ ಬಿಡುಗಡೆಯಾಗಿದ್ದ ಕೆಜಿಎಫ್ ಚಾಪ್ಟರ್ 1 ಸಿನಿಮಾ ಭಾರತೀಯ ಚಿತ್ರರಸಿಕರು ಸ್ಯಾಂಡಲ್ ವುಡ್ ಸಿನಿಮಾವನ್ನು ಕೊಂಡಾಡುವಂತೆ ಮಾಡಿತ್ತು.

ರಾಕಿ ಬಾಯ್ ಆಗಿ ಮಿಂಚಿದ್ದ ರಾಕಿಂಗ್ ಸ್ಟಾರ್ ಯಶ್ ಫೈಟಿಂಗ್, ಡೈಲಾಗ್, ಆಕ್ಟಿಂಗ್ ಗೆ ಫಾನ್ಸ್ ಫಿದಾ ಆಗಿದ್ರು.

ಕೆಜಿಎಫ್ -1 ಎವರ್ ಗ್ರೀನ್ ಹಿಟ್ ಆಗುತ್ತಲೇ ಕೆಜಿಎಫ್ ಚಾಫ್ಟರ್-2 ಸಿನಿಮಾ ಯಾವಾಗ ಬರುತ್ತೇ ಅಂತಾ ಕಾದು ಕುಳಿತಿದ್ರು.

ಸುಮಾರು 2 ವರ್ಷಗಳ ಪರಿಶ್ರಮದಲ್ಲಿ ಕೆಜಿಎಫ್ -2 ಸಿನಿಮಾ ಸಿದ್ದವಾಗುತ್ತಿದ್ದು, ಕಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಬರಲಿದೆ.

ಕೆಜಿಎಫ್ ಚಿತ್ರ ತನ್ನ ಮೊದಲ ಭಾಗದಲ್ಲಿ ಸೃಷ್ಟಿಸಿದ ಹವಾ ಇದೀಗ ‘ಕೆಜಿಎಫ್ ಚಾಪ್ಟರ್ -2’ಮೇಲಿನ ನಿರೀಕ್ಷೆಗಳನ್ನು ಹೆಚ್ಚಿಸಿದೆ.

ಸ್ಯಾಂಡಲ್ ವುಡ್ ಮಾತ್ರವಲ್ಲದೇ ಬಾಲಿವುಡ್, ಕಾಲಿವುಡ್, ಟಾಲಿವುಡ್ ಹಾಗೂ ಮಾಲಿವುಡ್ ನಲ್ಲಿಯೂ ಕೆಜಿಎಫ್ ಚಾಪ್ಟರ್ -2 ಚಿತ್ರಕ್ಕೆ ಬಾರೀ ಡಿಮ್ಯಾಂಡ್ ಬಂದಿದೆ.

ಕೆಜಿಎಫ್ -2 ಬಿಡುಗಡೆಗೂ ಮುನ್ನವೇ ದಾಖಲೆಯ ಮೇಲೆ ದಾಖಲೆ ಬರೆಯುತ್ತಿದೆ. ಕೆಜಿಎಫ್ -2 ತನ್ನ ವಿತರಣೆಯ ಹಕ್ಕಿನಿಂದಲೇ ಭರ್ಜರಿ ಮೊತ್ತವನ್ನು ಗಳಿಸುವತ್ತ ಹೊರಟಿದೆ.

ಕನ್ನಡದ ಚಿತ್ರವೊಂದು ಇತರ ಭಾಷೆಗಳಲ್ಲಿ ಇದೇ ಮೊದಲ ಬಾರಿಗೆ ದಾಖಲೆಯ ಮೊತ್ತಕ್ಕೆ ಬಿಕರಿಯಾಗುತ್ತಿದೆ. ಟಾಲಿವುಡ್ ನಲ್ಲಿ ಕೆಜಿಎಫ್ ಚಾಪ್ಟರ್ -2 ಚಿತ್ರದ ವಿತರಣೆಯ ಹಕ್ಕಿಗಾಗಿ ಹಲವು ಸಂಸ್ಥೆಗಳು ಸ್ಪರ್ಧೆಗಿಳಿದಿದೆ.

ಕೆಜಿಎಫ್ ನ ವಿತರಣೆಯ ಹಕ್ಕನ್ನು 30ರಿಂದ 40 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಕೆಜಿಎಫ್ -2 ಸಿನಿಮಾದಲ್ಲಿ ರಾಕಿ ಬಾಯ್ ಗೆ ಎದುರಾಳಿಯಾಗಿರೋ ಅಧೀರನಾಗಿ ಬಾಲಿವುಡ್ ಸ್ಟಾರ್ ಸಂಜಯ್ ದತ್ತ ಹಾಗೂ ರವೀನಾ ಟೆಂಡನ್ ಕಾಣಿಸಿಕೊಳ್ಳಲಿದ್ದಾರೆ.

ಹೀಗಾಗಿ ಚಿತ್ರ ಹಲವು ಕೂತೂಹಲಕ್ಕೆ ಕಾರಣವಾಗಿದೆ. ಕನ್ನಡ ತಮಿಳು, ಮಲಯಾಲಂ ಹಾಗೂ ಹಿಂದಿ ಭಾಷೆಯ ವಿತರಣೆಯ ಹಕ್ಕು ಇನ್ನಷ್ಟು ಡಿಮ್ಯಾಂಡ್ ಆಗೋ ಸಾಧ್ಯತೆಯಿದೆ.

ಕೆಜಿಎಫ್-2 500 ಕೋಟಿ ರೂಪಾಯಿ ಬಂಡವಾಳ ನಿರೀಕ್ಷೆಯನ್ನು ಇಟ್ಟುಕೊಂಡಿದ್ದು, ಇದೀಗ ವಿತರಣೆಯ ಹಕ್ಕಿನಿಂದಲೇ 100 ಕೋಟಿಗೂ ಅಧಿಕ ಮೊತ್ತಕ್ಕೆ ಸೇಲ್ ಆಗೋ ನಿರೀಕ್ಷೆ ಮಾಡಲಾಗುತ್ತಿದೆ.

Leave A Reply

Your email address will not be published.