ಕೊರೊನಾ ಸೋಂಕಿತರ ಸಂಖ್ಯೆಗೆ ಬೆಚ್ಚಿಬಿದ್ದ ಕರುನಾಡು ! ಬೆಂಗಳೂರು 1235, ದ.ಕ. 147, ಉಡುಪಿ 45 ಮಂದಿಗೆ ಸೋಂಕು

0

ಬೆಂಗಳೂರು : ಕೊರೊನಾ ವೈರಸ್ ಸೋಂಕು ದಿನೇ ದಿನೇ ಜನರ ನಿದ್ದೆಗೆಡಿಸುತ್ತಿದೆ, ಅದ್ರಲ್ಲೂ ಸಿಲಿಕಾನ್ ಸಿಟಿಯ ಮಂದಿ ಒಂದೇ ದಿನ ದಾಖಲಾದ ಕೊರೊನಾ ಸೋಂಕಿತರ ಸಂಖ್ಯೆಗೆ ಬೆಚ್ಚಿಬಿದ್ದಿದೆ. ಬೆಂಗಳೂರಲ್ಲಿಂದು 1,235 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ರೆ, ರಾಜ್ಯದಲ್ಲಿ 1,925 ಕೊರೊನಾ ಪ್ರಕರಣಗಳು ದೃಢಪಟ್ಟಿದೆ. ರಾಜ್ಯದಲ್ಲಿಂದು 38 ಮಂದಿಯನ್ನು ಬಲಿ ಪಡೆದಿರುವ ಮಹಾಮಾರಿ ದಿನೇ ದಿನೇ ಆತಂಕವನ್ನು ತಂದೊಡ್ಡುತ್ತಿದೆ.

ಬೆಂಗಳೂರು ಜನರಿಗೆ ಕೊರೊನಾ ಬಿಗ್ ಶಾಕ್ ಕೊಟ್ಟಿದೆ. ಸಿಲಿಕಾನ್ ಸಿಟಿಯಲ್ಲಿ ದಾಖಲೆಯ ಪ್ರಮಾಣದಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿದ್ದು, ಇಂದು ಒಂದೇ ದಿನ 1,235 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜಧಾನಿಯಲ್ಲಿ ಕೊರೊನಾ ಸೋಂಕಿಗೆ ತುತ್ತಾದವರ ಸಂಖ್ಯೆ 9580ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲಿಂದು 16 ಮಂದಿಯನ್ನು ಕೊರೊನಾ ಮಹಾಮಾರಿ ಬಲಿ ಪಡೆದಿದೆ. ಈ ಮೂಲಕ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ145ಕ್ಕೆ ಏರಿಕೆಯಾಗಿದೆ.

ಇನ್ನು ಕರಾವಳಿ ಜಿಲ್ಲೆಯಲ್ಲಿಯೂ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯನ್ನು ಕಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಇಂದು ಬರೋಬ್ಬರಿ 147 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1,234ಕ್ಕೆ ಏರಿಕೆಯನ್ನು ಕಂಡಿದೆ. ಇನ್ನು ಉಡುಪಿ ಜಿಲ್ಲೆಯಲ್ಲಿಯೂ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯನ್ನು ಕಂಡಿದ್ದು, 45 ಮಂದಿಗೆ ಹೊಸದಾಗಿ ಕರೊನಾ ಸೋಂಕು ಪತ್ತೆಯಾಗಿದೆ.

ಉಳಿದಂತೆ ಬಳ್ಳಾರಿಯಲ್ಲಿ 90, ವಿಜಯಪುರ 51, ಕಲಬುರಗಿ 49, ಧಾರವಾಡ 45, ಬೀದರ್ 29, ಮೈಸೂರು 25, ಕೊಪ್ಪಳ 22, ಉತ್ತರ ಕನ್ನಡ 21, ಚಾಮರಾಜನಗರ 19, ಹಾವೇರಿ 15, ಹಾಸನ 14, ಚಿಕ್ಕಬಳ್ಳಾಪುರ 13, ಕೋಲಾರ 13, ಬೆಳಗಾವಿ 11, ರಾಯಚೂರು 10, ಮಂಡ್ಯ 10, ಚಿಕ್ಕಮಗಳೂರು 9, ಶಿವಮೊಗ್ಗ 8, ಗದಗ 7, ರಾಮನಗರ 6, ಬಾಗಲಕೋಟೆ 4, ಚಿತ್ರದುರ್ಗ ಜಿಲ್ಲೆಯಲ್ಲಿ 3 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 23,474ಕ್ಕೆ ಏರಿಕೆಯನ್ನು ಕಂಡಿದೆ. ಈ ಪೈಕಿ ಇಂದು 603 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 13,250 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಕೊರೊನಾ ಮಹಾಮಾರಿ ಇದುವರೆಗೆ ರಾಜ್ಯದಲ್ಲಿ 373 ಮಂದಿಯನ್ನು ಬಲಿ ಪಡೆದಿದೆ.

Leave A Reply

Your email address will not be published.