ಲಾಕ್ ಡೌನ್ ಮಾರ್ಗಸೂಚಿ ಪ್ರಕಟ : ಏನಿರುತ್ತೆ ? ಏನಿರಲ್ಲ ?

0

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಒಂದು ವಾರಗಳ ಕಾಲ ಲಾಕ್ ಡೌನ ಆದೇಶವನ್ನು ಜಾರಿ ಮಾಡಲಾಗಿದ್ದು, ಸರಕಾರ ಮಾರ್ಗಸೂಚಿಯನ್ನು ಪ್ರಕಟಿಸಿಸಿದೆ. ಜುಲೈ 14ರ ರಾತ್ರಿ 8 ಗಂಟೆಯಿಂದಲೇ ಲಾಕ್ ಡೌನ್ ಆದೇಶ ಜಾರಿಗೆ ಬರುತ್ತಿದ್ದು, ಜುಲೈ 22ರ ಬೆಳಗ್ಗೆ 5 ಗಂಟೆಯ ವರೆಗೆ ಆದೇಶ ಜಾರಿಯಲ್ಲಿರುತ್ತದೆ.

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಲಾಕ್ ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಆದೇಶಿಸಲಾಗಿದೆ. ಆದರೆ ಅಗತ್ಯವಸ್ತುಗಳ ಪೂರೈಕೆ, ದಿನಸಿ ಅಂಗಡಿಗಳು, ಮದ್ಯ ಮಾರಾಟ ( ಪಾರ್ಸೆಲ್) ವ್ಯವಸ್ಥೆಗೆ ಅವಕಾಶವನ್ನು ಕಲ್ಪಿಸಲಾಗಿದೆ.

ಹಾಗಾದ್ರೆ ಒಂದು ವಾರದ ಲಾಕ್ ಡೌನ್ ಆದೇಶದಲ್ಲಿ ಏನಿರುತ್ತೆ ? ಏನಿರಲ್ಲ ? ಅನ್ನುವ ಮಾಹಿತಿ ಇಲ್ಲಿದೆ.

Leave A Reply

Your email address will not be published.