ಕೊರೊನಾ ಗೆದ್ದವರಲ್ಲೇ ಮತ್ತೆ ಒಕ್ಕರಿಸಿದೆ ಹೆಮ್ಮಾರಿ !

0

ಕೋಲಾರ : ಕೊರೊನಾ ಸೋಂಕಿನಿಂದ ಗುಣಮುಖರಾದವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದ್ರೀಗ ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿಯೇ ಮತ್ತೆ ಹೆಮ್ಮಾರಿ ಒಕ್ಕರಿಸಿಕೊಳ್ಳುತ್ತಿದೆ. ಕೊರೊನಾ ಅಟ್ಯಾಕ್ ಇದೀಗ ಆರೋಗ್ಯ ಇಲಾಖೆಯ ಅಧಿಕಾರಿಗಳ ನಿದ್ದೆಗೆಡಿಸಿದೆ.

ಹೌದು, ಇಂತಹದ್ದೊಂದು ಘಟನೆ ನಡೆದಿರೋದು ಕೋಲಾರ ಜಿಲ್ಲೆಯಲ್ಲಿ. ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂದ ಇದುವರೆಗೆ ಬರೋಬ್ಬರಿ 284 ಮಂದಿ ಗುಣಮುಖರಾಗಿದ್ದಾರೆ. ಆದರೆ ಈ ಪೈಕಿ ಮುಳಬಾಗಿಲಿನ ಮಹಿಳೆಯೋರ್ವರಿಗೆ ಮತ್ತೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ಮತ್ತೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅಲ್ಲದೇ ಮಹಿಳೆಗೆ ಕೊರೊನಾ ಮತ್ತೆ ಹೇಗೆ ಬಂದಿದೆ ಅನ್ನುವ ಕುರಿತು ಆರೋಗ್ಯಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಕೊರೊನಾ ಗೆದ್ದವರಿಗೆ ಸೋಂಕು ಒಕ್ಕರಿಸಿರುವುದು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ನಿದ್ದೆಗೆಡಿಸಿದೆ. ಈ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲಾಡಳಿತ ಕೊರೊನಾ ಸೋಂಕಿನಿಂದ ಗುಣಮುಖರಾದವರ ಮೇಲೆ ನಿಗಾ ಇರಿಸಿದ್ದು, ಕ್ವಾರಂಟೈನ್ ಹಾಗೂ ಹೋಮ್ ಕ್ವಾರಂಟೈನ್ ಗೆ ಮಾಡಲು ಮುಂದಾಗಿದೆ. ಅಲ್ಲದೇ ಗುಣಮುಖರಾದವರನ್ನೇ ಮತ್ತೆ ಕೊರೊನಾ ತಪಾಸಣೆಗೆ ಒಳಪಡಿಸಲು ನಿರ್ಧರಿಸಿದೆ.

ಮುಳಬಾಗಿಲ ಮಹಿಳೆಯ ಪ್ರಕರಣ ಇದೀಗ ತಲ್ಲಣ ಮೂಡಿಸಿದೆ. ಮಹಿಳೆಯ ದೇಹದಲ್ಲಿ ಕೊರೊನಾ ವೈರಸ್ ಸೋಂಕು ಉಳಿದುಕೊಂಡಿದ್ಯಾ, ಇಲ್ಲಾ ಬೇರೆಯವರಿಂದ ಸೋಂಕು ಹರಡಿದ್ಯಾ ಅನ್ನುವ ಕುರಿತು ವೈದ್ಯಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಕೋಲಾರ ಜಿಲ್ಲಾಡಳಿತಕ್ಕೆ ಮಹಿಳೆಯ ಪ್ರಕರಣ ತಲೆನೋವು ತರಿಸಿದ್ದು, ಗುಣಮುಖರಾದವರೂ ಕೂಡ ಎಚ್ಚರಿಕೆಯಿಂದ ಇರುವುವಂತೆ ಜಿಲ್ಲಾಡಳಿತ ಸೂಚನೆಯನ್ನು ನೀಡಿದೆ.

Leave A Reply

Your email address will not be published.