ಕೋವಿಡ್ ಟೆಸ್ಟ್ ದರದಲ್ಲಿ ಇಳಿಕೆ : ಕೊನೆಗೂ ಎಚ್ಚೆತ್ತ ರಾಜ್ಯ ಸರಕಾರ

0

ಬೆಂಗಳೂರು : ಕೊರೊನಾ ವೈರಸ್ ಸೋಂಕಿನಿಂದಾಗಿ ಜನರು ಕಂಗೆಟ್ಟಿದ್ದಾರೆ. ಈ ನಡುವಲ್ಲೇ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಟೆಸ್ಟ್ ಗೆ ದುಬಾರಿ ಹಣವನ್ನು ವಸೂಲಿ ಮಾಡುತ್ತಿದ್ದವು. ಆದ್ರೀಗ ರಾಜ್ಯ ಸರಕಾರ ಕೋವಿಡ್ ಟೆಸ್ಟ್ ದರದಲ್ಲಿ ಇಳಿಕೆ ಮಾಡಿದ್ದು, ಪಿಪಿಇ ಕಿಟ್ ದರ ಹಾಗೂ ಆ್ಯಂಟಿಜೆನ್ ಟೆಸ್ಟ್ ದರವನ್ನು ನಿಗದಿ ಪಡಿಸಿದೆ.

ಈ ಹಿಂದೆ ಕೋವಿಡ್ ಟೆಸ್ಟ್ ಗೆ ಖಾಸಗಿ ಆಸ್ಪತ್ರೆಗಳು 2,250 ರೂಪಾಯಿಯನ್ನು ಪಡೆಯುತ್ತಿದ್ದು, ಈ ದರದವನ್ನು ಪ್ರಸ್ತುತ 2,000 ರೂಪಾಯಿಗೆ ಇಳಿಕೆ ಮಾಡಲಾಗಿದೆ. ಇನ್ನು RT-PCR ಪರೀಕ್ಷೆ, ಪಿಪಿಇ ಕಿಟ್ ಗೆ 2,000 ರೂಪಾಯಿಗಿಂತ ಹೆಚ್ಚು ಹಣವನ್ನು ಪಡೆಯುವಂತಿಲ್ಲ. ಮಾತ್ರವಲ್ಲದೇ ಆ್ಯಂಟಿಜನ್ ಟೆಸ್ಟ್ ಗೆ ಕೇವಲ 700 ರೂಪಾಯಿ ಶುಲ್ಕ ಪಡೆಯುವಂತೆ ಆರೋಗ್ಯ ಇಲಾಖೆ ದರ ನಿಗದಿ ಪಡಿಸಿ ಆದೇಶ ಹೊರಡಿಸಿದೆ.

Leave A Reply

Your email address will not be published.