ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಇಬ್ಬರಿಗೆ ಸೋಂಕು : ಕೊರೊನಾ ಹಾಟ್ ಸ್ಪಾಟ್ ಆಯ್ತು ಬಂಟ್ವಾಳ

0

ಮಂಗಳೂರು : ಕೊರೊನಾ ವೈರಸ್ ಸೋಂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದೆ. ನಿನ್ನೆಯಷ್ಟೇ ವೃದ್ದ ಮಹಿಳೆಯೋರ್ವರು ಕೊರೊನಾಕ್ಕೆ ಬಲಿಯಾಗುತ್ತಲೇ ಇಂದು ಬಂಟ್ವಾಳ ಹಾಗೂ ಬೋಳೂರಿನ ಇಬ್ಬರು ವೃದ್ದರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕೊರೊನಾ ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿದೆ. ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ 69 ವರ್ಷದ ವೃದ್ದ ಹಾಗೂ ಬೋಳೂರು ಗ್ರಾಮದ 62 ವರ್ಷದ ವೃದ್ದನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ನಿನ್ನೆಯಷ್ಟೇ ಬೋಳೂರಿನ ವೃದ್ದ ಮಹಿಳೆಯೋರ್ವರಿಗೆ ಕೊರೊನಾ ಸೋಂಕುರಿವುದು ದೃಢಪಟ್ಟಿತ್ತು. ಬಂಟ್ವಾದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಇದೀಗ 5ಕ್ಕೆ ಏರಿಕೆಯಾಗಿದೆ. ಈ ಪೈಕಿ 3 ಮಂದಿ ಸಾವನ್ನಪ್ಪಿದ್ದಾರೆ.

Leave A Reply

Your email address will not be published.