ಕೊರೊನಾ ವಿಚಾರದಲ್ಲಿ ಪಿಡಿಓಗಳ ನಿರ್ಲಕ್ಷ್ಯ : ಹೋಮ್ ಕ್ವಾರಂಟೈನ್ ಮಾಹಿತಿ ನೀಡಿದವರಿಗೆ ಧಮಕಿ

0

ಮಂಗಳೂರು : ಕೋರೋನಾ ಮಹಾಮಾರಿಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ವಿದೇಶದಿಂದ ಬಂದವರಿಗೆ ಕಡ್ಡಾಯ ಹೋಮ್ ಕ್ವಾರಂಟೈನ್ ಪಾಲಿಸುವಂತೆ ಸರಕಾರ ಖಡಕ್ ಆದೇಶ ಹೊರಡಿಸಿದೆ. ಆದರೆ ಕೆಲ ಪಿಡಿಓಗಳು ಹೋಮ್ ಕ್ವಾರಂಟೈನ್ ನಲ್ಲಿದ್ದವರು ಹೊರಗಡೆ ಓಡಾಡುತ್ತಿದ್ದವರ ಬಗ್ಗೆ ಮಾಹಿತಿ ನೀಡಿದ್ರೆ ಮಾಹಿತಿ ನೀಡಿದವರ ವಿರುದ್ದವೇ ಕ್ರಮಕೈಗೊಳ್ಳೋದಾಗಿ ಬೆದರಿಕೆ ಹಾಕಿದ್ದಾರೆ.

ಕೊರೊನಾ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದ್ದರೂ ಕೂಡ ಬಹುತೇಕ ಪಿಡಿಓಗಳು ನಿಯಮ ಪಾಲನೆ ಮಾಡುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಹೋಮ್ ಕ್ವಾರಂಟೈನ್ ನಲ್ಲಿ ಇರುವವರ ಮನೆಯ ಮುಂದೆ ನಾಮಫಲಕವನ್ನೇ ಅಳವಡಿಸಿಲ್ಲ. ಅಲ್ಲದೇ ಹಲವರು ಮನೆಯ ಹೊರಗೆಲ್ಲಾ ಓಡಾಡುತ್ತಿದ್ದಾರೆ. ಈ ಬಗ್ಗೆ ಆತಂಕಗೊಂಡಿದ್ದ ಗ್ರಾಮಸ್ಥರು ಕಲ್ಲಮುಂಡ್ಕೂರು ಪಿಡಿಓಗೆ ದೂರು ನೀಡಿದ್ದಾರೆ. ಆದರೆ ಪಿಡಿಓ ಹೋಮ್ ಕ್ವಾರಂಟೈನ್ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡೋ ಬದಲು, ದೂರು ನೀಡಿದವರ ಮೇಲೆಯೇ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸೋದಾಗಿ ಬೆದರಿಕೆ ಹಾಕಿದ್ದಾರೆನ್ನುವ ಆರೋಪ ಕೇಳಿಬಂದಿದೆ. ಹೀಗಾಗಿ ಕೊರೊನಾ ವಿಚಾರವಾಗಿ ನಿರ್ಲಕ್ಷ್ಯವಹಿಸುವ ಪಿಡಿಓಗಳ ವಿರುದ್ದ ಕ್ರಮಕೈಗೊಳ್ಳಬೇಕೆಂಬ ಮಾತುಗಳು ಕೇಳಿಬರುತ್ತಿದೆ.

ಕೊರೊನಾ ವಿಚಾರವಾಗಿ ಸಿಟಿಯಲ್ಲಿರೋವಷ್ಟು ಮಹತ್ವ ಪೂರ್ಣವಾದ ಮಾಹಿತಿ ಹಳ್ಳಿ ಜನಕ್ಕೆ ಸಿಗುತ್ತಿಲ್ಲ. ಸರ್ಕಾರ ವಿದೇಶದಿಂದ ಬಂದಿರೋ ಜನ ಏನ್ ಮಾಡ್ಬೇಕು. ಯಾವ ರೀತಿ ಇರ್ಬೆಕು. ಏನೆಲ್ಲಾ ಟೆಸ್ಟ್ ಗಳನ್ನ ಮಾಡ್ಬೇಕು ಅನ್ನೋ ಸಲಹೆಗಳನ್ನು ಕಟ್ಟುನಿಟ್ಟಾಗಿ ನೀಡಿದೆ. ಹೀಗಿದ್ದರೂ ‌ಹಳ್ಳಿ ಜನರಿಗೆ ಈ ಬಗ್ಗೆ ಮಾಹಿತಿ ತಲುಪುತ್ತಿಲ್ಲ. ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ಸರಕಾರ ಜವಾಬ್ದಾರಿಯನ್ನು ವಹಿಸಿದ್ದರೂ ಕೂಡ ಕೆಲ ಪಿಡಿಓಗಳು ತನ್ನ ಕರ್ತವ್ಯವನ್ನು ಪಾಲಿಸುತ್ತಿಲ್ಲವೆಂಬ ದೂರುಗಳಿವೆ.

 ಸರಕಾರದ ಆದೇಶದಲ್ಲೇನಿದೆ ?
  • ವಿದೇಶದಿಂದ ಬಂದವರನ್ನು ಕಡ್ಡಾಯವಾಗಿ 14 ದಿನಗಳ ಕಾಲ ಹೋಮ್ ಕ್ವಾರಂಟೈನ್ ನಲ್ಲಿ ಇರಿಸಲೇ ಬೇಕು.
  • ಹೋಮ್ ಕ್ವಾರಂಟೈನ್ ನಲ್ಲಿ ಇರುವವರ ಮನೆಯ ಮುಂದೆ ನಾಮ ಫಲಕ ಅಳವಡಿಸಿ ಜನರಿಗೆ ಜಾಗೃತಿ ಮೂಡಿಸಬೇಕು.
  • 14 ದಿನಗಳ ಕಾಲ ಹೋಮ್ ಕ್ವಾರಂಟೈನ್ ನಲ್ಲಿ ಇರುವವರು ಕಡ್ಡಾಯವಾಗಿ ಹೊರಗೆ ಬರುವಂತಿಲ್ಲ.
  • ಮನೆಯಿಂದ ಹೊರಗೆ ಬಂದ್ರೆ 107ಕ್ಕೆ ಕರೆ ಮಾಡಬಹುದು. ಇಲ್ಲಾ ಪೊಲೀಸರಿಗೂ ದೂರ ನೀಡಲು ಅವಕಾಶ ಕಲ್ಪಿಸಲಾಗಿದೆ.
  • ಹೋಮ್ ಕ್ವಾರಂಟೈನ್ ನಲ್ಲಿದ್ದವರು ಮನೆಯಿಂದ ಹೊರ ಬಂದರೆ ಅವರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಾಗಲಿದೆ.
  • ಹೋಮ್ ಕ್ವಾರಂಟೈನ್ ಇರುವ ಮನೆಯ ಸುತ್ತಲೂ ಯಾರೂ ಕೂಡ ಸುಳಿಯದಂತೆ ಮುನ್ನೆಚ್ಚರಿಕೆಯನ್ನು ವಹಿಸಬೇಕು.
  • ಆಯಾಯಾ ಪಿಡಿಓಗಳು ಜನರ ಬಳಿಗೆ ತೆರಳಿ ಕೊರೊನಾ ಸೋಂಕು ಹರಡುವ ಕುರಿತು ಮುಂಜಾಗೃತಾ ಕ್ರಮಗಳನ್ನು ವಹಿಸಲೇ ಬೇಕು. ಇಷ್ಟೆಲ್ಲಾ ನಿಯಮಗಳಿದ್ದರೂ ಕೂಡ ಪಿಡಿಓ ಹಾಗೂ ಆರೋಗ್ಯ ಇಲಾಖೆ ನಿರ್ಲಕ್ಷ್ಯವಹಿಸುತ್ತಿದೆ. ಈ ಕುರಿತು ಜಿಲ್ಲಾಡಳಿತ ಸೂಕ್ತಕ್ರಮಕೈಗೊಳ್ಳಬೇಕಿದೆ.
Leave A Reply

Your email address will not be published.