ಡೆಡ್ಲಿ ಕೊರೊನಾಕ್ಕೆ ರಾಜ್ಯದಲ್ಲಿ ಮೂರನೇ ಬಲಿ : ತುಮಕೂರಲ್ಲಿ ಶಿರಾ ಮೂಲದ 65 ವರ್ಷದ ವ್ಯಕ್ತಿ ಸಾವು

0

ತುಮಕೂರು : ಮಹಾಮಾರಿ ಕೊರೊನಾ ರಾಜ್ಯದಲ್ಲಿ ಮೂರನೇ ಬಲಿ ಪಡೆದಿದೆ. ತುಮಕೂರಿನಲ್ಲಿ ಶಿರಾ ಮೂಲದ 65 ವರ್ಷದ ವ್ಯಕ್ತಿಯೋರ್ವ ಡೆಡ್ಲಿ ಕೊರೊನಾಕ್ಕೆ ಬಲಿಯಾಗಿದ್ದಾನೆ. ತುಮಕೂರು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ತಿಳಿಸಿದ್ದಾರೆ.

ಮಾರ್ಚ್ 5 ರಂದು ವ್ಯಕ್ತಿ ದೆಹಲಿಗೆ ತೆರಳಿ ಮಾರ್ಚ್ 14 ರಂದು ಶಿರಾಕ್ಕೆ ವಾಪಾಸಾಗಿದ್ದ. ಈತನ ಜೊತೆಗೆ 13 ಮಂದಿ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದ. ನಂತರದಲ್ಲಿ ತನ್ನೂರಿಗೆ ವಾಪಾಸಾಗಿದ್ದ ನಂತರ ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮಾರ್ಚ್ 24ರಂದು ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಇಂದು ಸಾವನ್ನಪ್ಪಿದ್ದಾರೆ. ತುಮಕೂರಿನಲ್ಲಿ ಕೊರೊನಾಕ್ಕೆ ಬಲಿಯಾಗುತ್ತಿದ್ದಂತೆಯೇ ಶಿರಾದಾದ್ಯಂತ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ.


ರಾಜ್ಯದಲ್ಲಿ ಈ ಹಿಂದೆ ಸಾವನ್ನಪ್ಪಿದ ಇಬ್ಬರೂ ವ್ಯಕ್ತಿಗಳು ಕೂಡ ವಿದೇಶಿ ಪ್ರವಾಸವನ್ನು ಕೈಗೊಂಡಿದ್ದರು. ಆದರೆ ಶಿರಾದ ವ್ಯಕ್ತಿ ವಿದೇಶಿ ಪ್ರವಾಸ ಕೈಗೊಂಡಿಲ್ಲ. ದೆಹಲಿಗೆ ತೆರಳಿದಾಗಲೇ ಕೊರೊನಾ ಸೋಂಕು ಹರಡಿರುವ ಸಾಧ್ಯತೆಯಿದೆ. ದೆಹಲಿಗೆ ತೆರಳಿದ್ದಾಗ ರೂಮ್ ಸಿಗದ ಹಿನ್ನೆಲೆಯಲ್ಲಿ ಮಸೀದಿಯಲ್ಲಿಯೇ ಉಳಿದುಕೊಂಡಿದ್ದಾನೆ. ಆತ ಊರಿಗೆ ಬಂದ ನಂತರವೂ ಕೂಡ ಊರಿನಲ್ಲೆಲ್ಲಾ ಓಡಾಡಿದ್ದಾರೆ. ಶಿರಾದ ವ್ಯಕ್ತಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಈತನ 3 ಮಂದಿ ಪತ್ನಿ ಹಾಗೂ 16 ಮಂದಿ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಗಿದ್ದ 13 ಮಂದಿಗೂ ಕೂಡ ಸೋಂಕು ಹರಡಿರುವ ಸಾಧ್ಯತೆಯಿದೆ. ಮಾತ್ರವಲ್ಲ ಗ್ರಾಮದಲ್ಲಿ ಸುತ್ತಾಡಿರುವುದರಿಂದ ಇನ್ನಷ್ಟು ಮಂದಿಗೆ ಹರಡುವ ಸಾಧ್ಯತೆಯಿದೆ. ಈಗಾಗಲೇ ಜಿಲ್ಲಾಡಳಿತ ಈತನ 3 ಪತ್ನಿ 16 ಮಂದಿ ಮಕ್ಕಳು ಸೇರಿದಂತೆ ಒಟ್ಟು 33 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Leave A Reply

Your email address will not be published.