ನಾಳೆಯಿಂದ ಮದ್ಯಮಾರಾಟ ಆರಂಭ: ಒಬ್ಬರು ಎಷ್ಟು ಡ್ರಿಂಕ್ಸ್ ಖರೀದಿಸಬಹುದು ಗೊತ್ತಾ ?

0

ಬೆಂಗಳೂರು : ಲಾಕ್ ಡೌನ್ 3.0 ನಾಳೆಯಿಂದ ಆರಂಭಗೊಳ್ಳಲಿದೆ. ಲಾಕ್ ಡೌನ್ ನಡುವಲ್ಲೇ ಮದ್ಯ ಮಾರಾಟಕ್ಕೆ ಕೇಂದ್ರ ಸರಕಾರ ಅವಕಾಶವನ್ನು ಕಲ್ಪಿಸಿದೆ. ಆದರೆ ಮದ್ಯ ಖರೀದಿಯ ಮೇಲೆ ಸರಕಾರ ಹಲವು ಷರತ್ತುಗಳನ್ನು ವಿಧಿಸಿದೆ.

ಮದ್ಯಪಾನ ಆರೋಗ್ಯಕ್ಕೆ ಹಾನಿಕರ

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಬಾಗಿಲು ಮುಚ್ಚಿದ್ದ ಮದ್ಯದ ಅಂಗಡಿಗಳು ನಾಳೆಯಿಂದ ಆರಂಭಗೊಳ್ಳಲಿದೆ. ಆದರೆ ಕೊರೊನಾ ಸೋಂಕು ವ್ಯಾಪಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸರಕಾರ ಹಲವು ನಿಯಮಗಳನ್ನು ಜಾರಿಗೆ ತಂದಿದೆ. ಮದ್ಯ ಮಾರಾಟ ಆರಂಭವಾಗುತ್ತಿರೋ ಹಿನ್ನೆಲೆಯಲ್ಲಿ ಮದ್ಯ ಮಾರಾಟಗಾರರು ಭರ್ಜರಿ ತಯಾರಿಯನ್ನು ನಡೆಸುತ್ತಿದ್ದಾರೆ. ಬಾರ್ ಹಾಗೂ ಪಬ್ ಗಳನ್ನು ತೆರೆಯೋದಕ್ಕೆ ನಿಷೇಧವನ್ನು ಹೇರಲಾಗಿದ್ದು, ವೈನ್ ಶಾಪ್ ಗಳಲ್ಲಿ ಮಾತ್ರವಲೇ ಮದ್ಯ ಮಾರಾಟ ಮಾಡಲಾಗುತ್ತದೆ. ಆದರೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹಲವು ಷರತ್ತುಗಳನ್ನು ವಿಧಿಸಿದ್ದು, ಮದ್ಯ ಖರೀದಿಯ ಮೇಲೂ ನಿಯಂತ್ರಣ ಹೇರಿದೆ.

  • ಮದ್ಯ ಮಾರಾಟಗಾರರು ಕಡ್ಡಾಯವಾಗಿ ಗ್ಲೌಸ್ ಹಾಗೂ ಮಾಸ್ಕ್ ಗಳನ್ನು ಬಳಸಲೇ ಬೇಕು.
  • ಮದ್ಯದಂಗಡಿಯ ಮುಂಭಾಗದಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಲೇ ಬೇಕು.
  • ಒಬ್ಬ ಗ್ರಾಹಕ ಕೇವಲ 2.3 ಲೀಟರ್ ಮದ್ಯ ಖರೀದಿಗಷ್ಟೇ ಅವಕಾಶವನ್ನು ಕಲ್ಪಿಸಲಾಗಿದೆ.
  • 4 ಪುಲ್ ಬಾಟಲ್ ಬಿಯರ್ ಹಾಗೂ 6 ಪಿಂಟ್ ಬಾಟಲ್ ಬಿಯರ್ ಖರೀದಿ ಮಾಡಬಹುದಾಗಿದೆ.
  • ಯಾವುದೇ ಕಾರಣಕ್ಕೂ ಮದ್ಯ ಮಾರಾಟದ ಕೌಂಟರ್ ನಲ್ಲಿ ಮದ್ಯ ಹೊರತುಪಡಿಸಿ ನೀರು ಸೇರಿದಂತೆ ಯಾವುದೇ ಪದಾರ್ಥಗಳನ್ನು ಮಾಡುವಂತಿಲ್ಲ.
  • ಮದ್ಯದಂಗಡಿಯ ಮುಂಭಾಗದಲ್ಲಿ ಬ್ಯಾರಿಕೇಡ್ ಅಳವಡಿಕೆ ಕಡ್ಡಾಯ.
  • ಬ್ಯಾರಿಕೇಡ್ ಒಳಗೆ ಕೇವಲ 5 ಮಂದಿಗಷ್ಟೇ ಸಾಲಿನಲ್ಲಿ ನಿಲ್ಲು ಅವಕಾಶವಿದೆ.
  • ಪೊಲೀಸರ ಭದ್ರತೆಯ ಜೊತೆ ಮದ್ಯದಂಗಡಿಯ ಮಾಲೀಕರೇ ತಮ್ಮ ಖರ್ಚಿನಲ್ಲಿ ಕಡ್ಡಾಯವಾಗಿ ಭದ್ರತಾ ಸಿಬ್ಬಂಧಿ ನೇಮಕ ಮಾಡಿಕೊಳ್ಳಬೇಕು.

ಮದ್ಯದಂಗಡಿಗಳಿಗೆ ಸರಕಾರ ಷರತ್ತುಬದ್ದವಾಗಿ ಮದ್ಯ ಮಾರಾಟಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲೇ ಬೇಕು. ನಿಯಮವನ್ನು ಉಲ್ಲಂಘಿಸುವ ಮದ್ಯದಂಗಡಿಗಳ ವಿರುದ್ದ ಕಠಿಣ ಕ್ರಮಕೈಗೊಳ್ಳುವುದಾಗಿ ಸರಕಾರ ಎಚ್ಚರಿಸಿದೆ.

https://youtu.be/2aKMhY1Df7s
Leave A Reply

Your email address will not be published.