ರಕ್ಷಾ ಬಡಾಮನೆ
ಸೌತ್ ಇಂಡಿಯನ್ ಅಡುಗೆಯಲ್ಲಿ ನುಗ್ಗೆಕಾಯಿಗೆ ವಿಶೇಷ ಸ್ಥಾನಮಾನ. ನುಗ್ಗೆ ಕಾಯಿಯ ಸಂಬಾರ್ ಎಲ್ಲರಿಗೂ ಖಷಿಕೊಡುತ್ತೆ. ಹಲವರು ನುಗ್ಗೆಕಾಯಿ ಮಾತ್ರವಲ್ಲ ಅದರ ಸೊಪ್ಪನ್ನು ಪಲ್ಯವಾಗಿಯೂ, ಕೆಲವರು ಉಪ್ಪಿನಕಾಯಿ ತಯಾರಿಸಿಯೋ ತಿನ್ನುತ್ತಾರೆ. ನುಗ್ಗೆ ಕಾಯಿಯಷ್ಟೇ ಅಲ್ಲ, ಎಲೆ, ಹೂವು ಕೂಡ ತನ್ನಿಲು ಬಹುಯೋಗ್ಯ. ನುಗ್ಗೆ ಕಾಯಿಯಲ್ಲಿ ಜೀವಸತ್ವ 2, ಬೀಟಾ ಕ್ಯಾರೊಟೀನ್ ಅಂಶ ಹಣ್ಣು, ತರಕಾರಿಗಳಿ ಗಿಂತಲೂ ಅಧಿಕ ಪ್ರಮಾಣದಲ್ಲಿದೆ.

ಸಾಮಾನ್ಯವಾಗಿ 100 ಗ್ರಾಂ ನುಗ್ಗೆಕಾಯಿಯಲ್ಲಿ 86.9 ಗ್ರಾಂ, ಸಸಾರ ಜನಕ 2.5 ಗ್ರಾಂ. ತೇವಾಂಶ, ಮೇದಸ್ಸು 0.1 ಗ್ರಾಂ, ಖನಿಜಾಂಶ 2.0 ಗ್ರಾಂ, ನಾರಿನಾಂಶ 4.8 ಗ್ರಾಂ, ,ಕಾರ್ಬೋಹೈಡ್ರೇಟ್ 3.7 ಗ್ರಾಂ, ಫಾಸ್ಪರಸ್ 100 ಮಿಲಿಗ್ರಾಂ, ಕ್ಯಾಲ್ಸಿಯಂ 0.30 ಮಿಲಿಗ್ರಾಂ ಕಬ್ಬಣ 5.2 ಮಿಲಿಗ್ರಾಂ, ಥಿಯಾಮಿನ್ 0.05 ಮಿಲಿಗ್ರಾಂ, ಸಿ-ಜೀವಸತ್ವ 120 ಮಿಲಿಗ್ರಾಂ, ರಿಬೋಫ್ಲಮಿನ್ 0.07 ಮಿಲಿಗ್ರಾಂ, ನಿಕೋಟಿನ್ ಆಮ್ಲ 0.20 ಮಿಲಿಗ್ರಾಂ, ಎ – ಜೀವಸತ್ವ 184 ಐ.ಯು ಅನ್ನು ಒಳಗೊಂಡಿದ್ದು, ಆರೋಗ್ಯಕ್ಕೆ ಉತ್ತಮವೆನಿಸಿದೆ.

ನುಗ್ಗೆ ನುಗ್ಗೆಸೊಪ್ಪಿನಲ್ಲಿ ದೇಹಕ್ಕೆ ಅಗತ್ಯವಾದ ಅನೇಕ ಪೋಷಕಾಂಶ ಗಳು ದೃಷ್ಠಿ, ರಕ್ತ, ಮೂಳೆ ಹಾಗೂ ಚರ್ಮದ ಆರೋಗ್ಯಕ್ಕೆ ಸಹಾಯ ವಾಗಿದೆ. ನುಗ್ಗೆಯಲ್ಲಿ ಪಾಲಿಫೀನಾಲ್ಸ್‍ಗಳು ಅಧಿಕವಾಗಿದ್ದು, ಆಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿರುವುದರಿಂದ ಹೃದಯ ಸಂಬಂಧಿ ರೋಗಗಳು ಮತ್ತು ಕ್ಯಾನ್ಸರ್ ಮುಂತಾದ ಸಮಸ್ಯೆಗಳನ್ನು ನಿಯಂತ್ರಿಸು ವಲ್ಲಿ ಸಹಕಾರಿಯಾಗಿದೆ.

ನುಗ್ಗೆ ಕಾಯಿಯ ವಿವಿಧ ಭಾಗಗಳು ಸೋಂಕು, ಮಲಬದ್ಧತೆ, ಸಂಧಿವಾತ, ಕಫಾ, ಜೀರ್ಣಾಂಗಗಳ ತೊಂದರೆ ಮೂತ್ರಕೋಶ ತೊಂದರೆ, ಲೈಂಗಿಕ ಸಮಸ್ಯೆ,, ಇತ್ಯಾದಿಗಳಲ್ಲಿ ಬಳಸುತ್ತಾರೆ. ಸೌಂದರ್ಯವರ್ಧಕಗಳಲ್ಲಿಯೂ ಕೂಡಾ ನುಗ್ಗೆಯನ್ನು ಉಪಯೋಗಿ ಸಲಾಗುತ್ತದೆ. ಹೆಚ್ಚಾಗಿ ಬಳಸಲಾಗುವ ನುಗ್ಗೆಕಾಯಿ ಮಾತ್ರವಲ್ಲದೆ ಸುಲಭವಾಗಿ ದೊರೆಯುವ ನುಗ್ಗೆಸೊಪ್ಪು ಮತ್ತು ಹೂವನ್ನು ಸೇವಿಸುವುದು ಆರೋಗ್ಯವನ್ನು ಕಾಪಾಡಲು ಪರಿಣಾಮಕಾರಿಯಾಗಿ.

ಭಾರತೀಯರು ಹೇರಳ ಪ್ರಮಾಣದಲ್ಲಿ ನುಗ್ಗೆ ಕಾಯಿಲೆ ಬಹುಪ್ರಿಯ ವಾಗಿರೋ ತರಕಾರಿ. ನಮ್ಮ ದೇಹದಲ್ಲಿರೊ ಸಕ್ಕರೆಯ ಮಟ್ಟವನ್ನು ಮತ್ತು ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ. ನುಗ್ಗೆಕಾಯಿಯನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ರಕ್ತದಲ್ಲಿ ಸಕ್ಕರೆಯ ಮಟ್ಟ ಸಮತೋಲನದಲ್ಲಿರುತ್ತದೆ. ನುಗ್ಗೆಯಲ್ಲಿರುವ ಕೆಲವು ಪೋಷಕಾಂಶ ಗಳು ಈ ಕಾರ್ಯಕ್ಕೆ ನರವು ನೀಡುತ್ತವೆ. ಅಲ್ಲದೇ ಅಧಿಕ ರಕ್ತದ ಒತ್ತಡವನ್ನೂ ನಿಯಂತ್ರಿಸಿ ಹೃದಯದ ಆರೋಗ್ಯವನ್ನು ವೃದ್ದಿಸುತ್ತವೆ. ರಕ್ತದ ಸ್ನಿಗ್ಧತೆ ಎಷ್ಟಿರಬೇಕೋ ಅಷ್ಟು ಮಟ್ಟಿಗೆ ಇರುವಂತೆ ಮಾಡುವ ಮೂಲಕ ರಕ್ತದ ಹರಿವನ್ನು ಆರೋಗ್ಯಕರವಾಗಿಸುತ್ತದೆ ಹಾಗೂ ಈ ಮೂಲಕ ದೇಹದ ಎಲ್ಲಾ ಕಾರ್ಯಗಳು ಆರೋಗ್ಯಕರವಾಗಿ ನಡೆಯಲು ಸಾಧ್ಯವಾಗುತ್ತದೆ.

ನುಗ್ಗೆಕಾಯಿ ಮೂಳೆಗಳಿಗೆ ಸತತವಾಗಿ ಕ್ಯಾಲ್ಸಿಯಂ ಪೂರೈಕೆಯಾಗು ತ್ತದೆ. ಮಾತ್ರವಲ್ಲ ಕಬ್ಬಿಣದ ಅಂಶವೂ ನುಗ್ಗೆಕಾಯಿಯಲ್ಲಿ ಅಗತ್ಯ ವಾಗಿದೆ. ಕ್ಯಾಲ್ಸಿಯಂ ಕೊರತೆಯಿಂದ ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿ ಶಿಥಿಲಗೊಂಡು ಕೊಂಚವೇ ಒತ್ತಡಕ್ಕೆ ಒಳಗಾದರೂ ಸುಲಭ ವಾಗಿ ತುಂಡಾಗುವಂತಿರುತ್ತವೆ. ಈ ಸ್ಥಿತಿಗೆ ಓಸ್ಟಿಯೋ ಪೋರೋಸಿಸ್ ಎಂದು ಕರೆಯುತ್ತಾರೆ. ಒಂದು ವೇಳೆ ಈ ಸ್ಥಿತಿಯೊಂದಿಗೆ ಮೂಳೆಸಂಧು ಗಳಲ್ಲಿ ನೋವಾಗಿದ್ದರೆ ಈ ಭಾಗದಲ್ಲಿ ಹೆಚ್ಚಾದ ಸವೆತ ಕಾರಣವಗಿರು ತ್ತದೆ. ಈ ಸ್ಥಿತಿಗೆ ಓಸ್ಟಿಯೋ ಆರ್ಥ್ರೈಟಿಸ್ ಎಂದು ಕರೆಯುತ್ತಾರೆ.

ನುಗ್ಗೆ ಮತ್ತು ನುಗ್ಗೆ ಸೊಪ್ಪನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಈ ಎರಡೂ ಸ್ಥಿತಿಗಳು ಎದುರಾಗದಂತೆ ರಕ್ಷಣೆ ಸಿಗುತ್ತದೆ. ಹಾಗಾಗಿ, ಒಂದು ವೇಳೆ ನಿತ್ಯವೂ ಸಾಂಬಾರಿನಲ್ಲಿ ಟಿಂಬರ್ ಕಂಡುಬಂದರೆ ಇನ್ನು ಮೇಲೆ ಗೊಣಗದಿರಿ, ನಿಮ್ಮ ಮೂಳೆಗಳನ್ನು ಗಟ್ಟಿಗೊಳಿಸುತ್ತಿದೆ ಎಂಬುದಕ್ಕಾದರೂ ಸೇವಿಸಿ ನುಗ್ಗೇಕಾಯಿ ಮತ್ತು ನುಗ್ಗೇಸೊಪ್ಪಿನಲ್ಲಿ ವಿಟಮಿನ್ ಬಿ ಗಳಾದ ಥಿಯಾಮಿನ್, ರೈಬೋಫ್ಲೇವಿನ್ ಮತ್ತು ನಿಯಾಸಿನ್ ಉತ್ತಮ ಪ್ರಮಾಣದಲ್ಲಿವೆ. ಈ ಪೋಷಕಾಂಶಗಳು ಹಲವು ರೀತಿಯಿಂದ ಆರೋಗ್ಯವನ್ನು ವೃದ್ದಿಸುತ್ತವೆ. ಅಲ್ಲದೇ ಇದರಲ್ಲಿ ರುವ ಫೋಲಿಕ್ ಆಮ್ಲ ಗರ್ಭಿಣಿಯರಿಗೆ ಅತಿ ಹೆಚ್ಚು ಪ್ರಯೋಜನಕಾರಿ ಯಾಗಿದೆ. ಅಲ್ಲದೇ ನುಗ್ಗೆಕಾಯಿಯಲ್ಲಿ ವಿಟಮಿನ್ ಎ ಸಹಾ ಸಮೃದ್ದ ವಾಗಿದ್ದು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ ಹಾಗೂ ಚರ್ಮದ ಪುನಃಶ್ಚೇತನಕ್ಕೂ ನೆರವಾಗುತ್ತದೆ.

ಲೈಂಗಿಕ ಆರೋಗ್ಯವನ್ನು ವೃದ್ದಿಸಲು ನುಗ್ಗೆಕಾಯಿ ರಾಮಭಾಣ. ನುಗ್ಗೇಕಾಯಿ ಮತ್ತು ಸೊಪ್ಪಿನಲ್ಲಿ ಉತ್ತಮ ಪ್ರಮಾಣದ ಸತು ಇದೆ. ಇದು ಪುರುಷರಲ್ಲಿ ವೀರ್‍ಯಾಣುಗಳನ್ನು ಉತ್ತಮ ಪ್ರಮಾಣದಲ್ಲಿ ಮತ್ತು ಉತ್ತಮ ಗುಣಮಟ್ಟದಲ್ಲಿರುವಂತೆ ಉತ್ಪಾದಿಸಲು ನೆರವಾಗುತ್ತದೆ. ಅಲ್ಲದೇ ಮಹಿಳೆಯರಲ್ಲಿಯೂ ಫಲವತ್ತತೆ ಹೆಚ್ಚಿಸಲು ಸತು ತುಂಬಾ ಅವಶ್ಯಕ. ನುಗ್ಗೆಯ ಮರದ ತೊಗಟೆಯಲ್ಲಿರುವ ಕೆಲವು ಪೋಷಕಾಂಶ ಗಳಿಗೆ ನಪುಂಸಕತ್ವವನ್ನು ನಿವಾರಿಸುವ ಗುಣವಿದೆ. ಅಲ್ಲದೇ ಶೀಘ್ರ ಸ್ಖಲನ ಮತ್ತು ವೀರ್ಯದ ಸಾಂದ್ರತೆಯನ್ನು ಹೆಚ್ಚಿಸಲು ನೆರವಾಗುತ್ತವೆ. ತನ್ಮೂಲಕ ಸಂತಾನಫಲ ಪಡೆಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ನುಗ್ಗೆ ಕಾಯಿಯಲ್ಲಿರುವ ಪೋಷಕಾಂಶಗಳು ಜೀರ್ಣಕ್ರಿಯೆಗೆ ಸಹಕರಿ ಸುವ ಮೂಲಕ ಜೀರ್ಣಕ್ರಿಯೆಗೆ ಸಂಬಂಧಿಸಿದ ಹಲವಾರು ತೊಂದರೆ ಗಳಿಂದ ರಕ್ಷಣೆ ಒದಗಿಸುತ್ತದೆ. ಹೊಟ್ಟೆಯಲ್ಲಿ ಹುಣ್ಣುಗಳು, ಮಲಬದ್ದತೆ, ಆಮ್ಲೀಯತೆ, ಹುಳಿತೇಗು, ಹೊಟ್ಟೆಯುರಿ, ಕೊಲೈಟಿಸ್ ಮೊದಲಾದ ಹತ್ತು ಹಲವು ತೊಂದರೆಗಳಿಂದ ರಕ್ಷಣೆ ಒದಗಿಸುತ್ತದೆ. ಅಲ್ಲದೇ ಜಠರ ಕ್ಕೆ ಸಂಬಂಧಿಸಿದ ಕ್ಯಾನ್ಸರ್ ನಿಂದಲೂ ರಕ್ಷಣೆ ದೊರಕುತ್ತದೆ. ಅಲ್ಲದೇ ನುಗ್ಗೇಕಾಯಿ ನೈಸರ್ಗಿಕ ಬ್ಯಾಕ್ಟೀರಿಯಾ ನಿರೋಧಕವಾಗಿದ್ದು ಆಹಾರ ದಲ್ಲಿ ಸೋಂಕುಕಾರಕ ಬ್ಯಾಕ್ಟೀರಿಯಾಗಳು ಕಂಡುಬಂದರೆ ಇವನ್ನು ನಿವಾರಿಸಿ ಸ್ವಚ್ಛಗೊಳಿಸುವ ಮೂಲಕ ಜೀರ್ಣಾಂಗಗಳ ಆರೋಗ್ಯ ವನ್ನೂ ಕಾಪಾಡುತ್ತದೆ.

ಸಿಡುಬು (ಚಿಕನ್ ಪಾಕ್ಸ್) ಎದುರಾಗುವುದರಿಂದ ರಕ್ಷಣೆ ನೀಡುತ್ತದೆ. ಸಾಮಾನ್ಯವಾಗಿ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ವಿಶೇಷವಾಗಿ ನುಗ್ಗೆ ಸೊಪ್ಪನ್ನು ಸೇವಿಸುವಂತೆ ತಜ್ಞರು ಸಲಹೆ ಮಾಡುತ್ತಾರೆ. ಏಕೆಂದರೆ ಈ ಅವಧಿಯಲ್ಲಿ ಸಿಡುಬಿನ ವೈರಾಣುಗಳು ಗಾಳಿಯಲ್ಲಿ ಹೆಚ್ಚಾಗಿ ಹಾರಾಡುತ್ತಿರುತ್ತವೆ ಹಾಗೂ ರೋಗ ನಿರೋಧಕ ಶಕ್ತಿ ಈ ರೋಗಕ್ಕೆ ಇದುವರೆಗೆ ನಿರೋಧಕ ವ್ಯವಸ್ಥೆಯನ್ನು ಕೈಗೊಂಡಿರದೇ ಇದ್ದವರಲ್ಲಿ ಸುಲಭವಾಗಿ ಸೋಂಕು ಉಂಟುಮಾಡುತ್ತದೆ. ನುಗ್ಗೆ ಸೊಪ್ಪಿನಲ್ಲಿ ಈ ವೈರಾಣುಗಳ ದಾಳಿಯನ್ನು ಎದುರಿಸಿ ದೇಹವನ್ನು ರಕ್ಷಿಸುವ ಗುಣವಿದೆ. ತನ್ಮೂಲಕ ಸಿಡುಬು ಎದುರಾಗದಂತೆ ಕಾಪಾಡುತ್ತದೆ.

ನುಗ್ಗೆ ಕಾಯಿ ಮಧುಮೇಹಿಗಳಿಗೆ ಸೂಕ್ತವಾಗಿದೆ. ಶ್ವಾಸಸಂಬಂಧಿ ತೊಂದರೆಗಳನ್ನು ಕಡಿಮೆಗೊಳಿಸುತ್ತದೆ .ಒಂದು ವೇಳೆ ನಿಮಗೆ ಕೆಮ್ಮು, ಕಫ ಅಥವಾ ಕಟ್ಟಿರುವ ಮೂಗು ಮೊದಲಾದ ತೊಂದರೆಗಳಿದ್ದರೆ ತಕ್ಷಣ ನುಗ್ಗೇಸೊಪ್ಪಿನ ಸೂಪ್ ತಯಾರಿಸಿ ಕುಡಿಯಿರಿ. ಇದರಲ್ಲಿರುವ ಉರಿಯೂತ ನಿವಾರಕ ಗುಣಗಳು ಹಲವಾರು ಬಗೆಯ ಶ್ವಾಸ ಸಂಬಂಧಿ ತೊಂದರೆಗಳಿಂದ ರಕ್ಷಣೆ ಒದಗಿಸುತ್ತವೆ. ಇದರಲ್ಲಿರುವ ಪೋಷಕಾಂಶಗಳು ಶ್ವಾಸ ವ್ಯವಸ್ಥೆಯಲ್ಲಿ ಸಂಗ್ರಹವಾಗಿದ್ದ ಕಲ್ಮಶ ಗಳನ್ನು ನಿವಾರಿಸಿ ಮಾರ್ಗಗಳನ್ನು ತೆರವುಗೊಳಿಸುತ್ತವೆ.