ಭಾರತದ ವಾಯುನೆಲೆ ಸೇರಿದ ರಫೇಲ್ ವಿಮಾನ : ಭಾರತೀಯ ಸೇನೆಗೆ ಬಂತು ಆನೆಬಲ

0

ನವದೆಹಲಿ : ಫ್ರಾನ್ಸ್ ನಿರ್ಮಿತ ಅತ್ಯಾಧುನಿಕ ರಫೇಲ್ ಯುದ್ಧ ವಿಮಾನ ಕೊನೆಗೂ ಭಾರತದಕ್ಕೆ ಬಂದಿದೆ. ಹರ್ಯಾಣ ಅಂಬಾಲಾ ವಾಯುನೆಲೆಗೆ ಆಗಮಿಸಿದ್ದ 5 ರಫೇಲ್ ಯುದ್ದ ವಿಮಾನಗಳನ್ನು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಬರಮಾಡಿಕೊಂಡಿದ್ದಾರೆ. ರಫೇಲ್ ಆಗಮನ ಇದೀಗ ವಿರೋಧಿಗಳಿಗೆ ನಡುಕ ಶುರುವಾಗಿದೆ.

ಮೊದಲ ಹಂತದಲ್ಲಿ ಫ್ರಾನ್ಸ್‌ನಿಂದ ಎರಡು ವಿಮಾನಗಳು 2 ಸೀಟರ್ ತರಬೇತಿ ವಿಮಾನಗಳಾಗಿದ್ದು, 3 ಸಿಂಗಲ್ ಸೀಟರ್ ಫೈಟರ್ ಜೆಟ್ ಸೇರಿ ಐದು ರಫೇಲ್‌ ಯುದ್ಧ ವಿಮಾನಗಳು ಇಂದು ಮಧ್ಯಾಹ್ನ ಅಂಬಾಲ ವಾಯುನೆಲೆಗೆ ಬಂದಿಳಿದಿವೆ. ಫ್ರಾನ್ಸ್ ಮೂಲದ ಡಸಾಲ್ಟ್ ಕಂಪೆನಿ ಈ ಅತ್ಯಾಧುನಿಕ ರಫೆಲ್ ಯುದ್ದ ವಿಮಾನಗಳನ್ನು ನಿರ್ಮಾಣ ಮಾಡಿವೆ.

ಜುಲೈ 27ರಂದು ಫ್ರಾನ್ಸ್ ನಿಂದ ಭಾರತದತ್ತ ಮುಖಮಾಡಿದ್ದ ರಾಫೆಲ್ ಯುದ್ದ ವಿಮಾನ 7 ತಾಸಿನ ಪ್ರಯಾಣದ ಬಳಿಕ ಯುಎಇನಲ್ಲಿ ಲ್ಯಾಂಡ್ ಆಗಿತ್ತು. ನಂತರ ಪೈಲೆಟ್ ಗಳು ವಿಶ್ರಾಂತಿಯನ್ನು ಪಡೆದು, ಇಂದು ಬೆಳಗ್ಗೆ 11.44ರ ಹೊತ್ತಿಗೆ ಮತ್ತೆ ಟೆಕ್ ಆಪ್ ಆಗಿದ್ದ ರೆಫೆಲ್ ಯುದ್ದ ವಿಮಾನಗಳು ಹರ್ಯಾಣ ಅಂಬಾಲ ಏರ್ ಬೇಸ್ ಗೆ ಬಂದಿಳಿವೆ.

ಯುಎಇಯ ಅಲ್ ದಫ್ರಾ ನೆಲೆಯಿಂದ ಟೇಕ್ ಆಫ್ ಆದ ಬಳಿಕ ರಾಫೆಲ್ ಯುದ್ಧ ವಿಮಾನಗಳು ಪಶ್ಚಿಮ ಅರೇಬಿಯನ್ ಸಮುದ್ರದಲ್ಲಿ ಕರ್ತವ್ಯನಿಯೋಜನೆಗೊಂಡಿರುವ ಭಾರತೀಯ ಯುದ್ಧ ನೌಕೆ ಐಎನ್ಎಸ್ ಕೋಲ್ಕತಾ ಜೊತೆ ಮೊದಲ ಸಂಪರ್ಕ ಸಾಧಿಸಿದ್ದವು. ಐಎನ್ಎಸ್ ಕೋಲ್ಕತಾ ನೌಕೆಯಲ್ಲಿದ್ದ ಡೆಲ್ಟಾ 63 ತಮ್ಮನ್ನು ತಾವು ಪರಿಚಯಿಸಿಕೊಂಡು ಇಂಡಿಯನ್ ಓಶನ್ ಗೆ ಸ್ವಾಗತ ಎಂದು ಹೇಳಿದರು.

ಈ ವೇಳೆ ಉತ್ತರಿಸಿದ ರಾಫೆಲ್ ಲೀಡರ್ ಪೈಲಟ್, ತುಂಬಾ ಧನ್ಯವಾದಗಳು. ಸಮುದ್ರ ಗಡಿಯನ್ನು ಕಾಪಾಡುವ ಭಾರತೀಯ ಯುದ್ಧನೌಕೆಗಳು ಹೆಚ್ಚು ಧೈರ್ಯ ತುಂಬುತ್ತವೆ ಎಂದು ಹೇಳಿದರು. ಇದಕ್ಕೆ ಸ್ಪಂಧಿಸಿದ ಡೆಲ್ಟಾ 63 ನೀವು ವೈಭವವಾಗಿ ಭಾರತೀಯ ವಾಯುಗಡಿ ಪ್ರವೇಶಿಸಿದ್ದೀರಿ. ಯಶಸ್ವಿಯಾಗಿ ಲ್ಯಾಂಡಿಂಗ್ ಕೂಡ ಆಗಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಅಂಬಾಲ ವಾಯುನೆಲೆ ಸುತ್ತಮುತ್ತಲಿನ 3 ಕಿ.ಮೀ. ಪ್ರದೇಶವನ್ನು ‘ಡ್ರೋನ್‌ರಹಿತ ವಲಯ’ ಎಂದು ಘೋಷಿಸಲಾಗಿದೆ. ಭದ್ರತಾ ವ್ಯವಸ್ಥೆ ಉಲ್ಲಂಘಿಸಿದ ಯಾರೇ ಆದರೂ ಕಠಿಣ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಂಬಾಲ ಕಂಟೋನ್ಮೆಂಟ್‌ ಡಿಎಸ್ಪಿ ಎಚ್ಚರಿಕೆ ನೀಡಿದ್ದಾರೆ.

ಫ್ರಾನ್ಸ್‌ನಿಂದ ಹೊರಟು ಯುಎಇಯ ಅಲ್‌-ಧಫ್ರಾ ವಾಯು ನೆಲೆಯಲ್ಲಿ ವಿಶ್ರಾಂತಿಗೆ ತಂಗಿದ್ದ ರಾಫೆಲ್ ಪೈಲಟ್‌ಗಳು ಭಾರತದತ್ತ ಮುಖಮಾಡಿದ್ದರು. ಮಾರ್ಗ ಮಧ್ಯೆಯೇ 30 ಸಾವಿರ ಅಡಿ ಎತ್ತರದಲ್ಲಿ ಯುದ್ಧ ವಿಮಾನಗಳಿಗೆ ಇಂಧನ ಪೂರೈಸಲಾಗಿದೆ. ಭಾರತದ ಮಟ್ಟಿಗೆ ಇದೊಂದು ಮಹತ್ವದ ಸಾಧನೆಯೇ ಆಗಿದೆ. ಫ್ರಾನ್ಸ್‌ನ ವಾಯುಪಡೆಯ ನೆರವಿನ ಜತೆಯಲ್ಲಿ ಇಂಧನ ಪೂರೈಸಲಾಗಿದೆ.

Leave A Reply

Your email address will not be published.