ಐತಿಹಾಸಿಕ ಇಳಿಕೆ ಕಂಡ ಬಂಗಾರದ ಬೆಲೆ : ಚಿನ್ನ ಪ್ರಿಯರಿಗೆ ಇಲ್ಲಿದೆ ಗುಡ್ ನ್ಯೂಸ್

ಬೆಂಗಳೂರು : ದುಬಾರಿಯಾಗಿದ್ದ ಚಿನ್ನಾಭರಣಗಳ ಬೆಲೆಯಲ್ಲಿ ಭಾರಿ ಇಳಿಕೆಯನ್ನು ಕಂಡಿದೆ. ಕಳೆದೊಂದು ವಾರದ ಅವಧಿಯಲ್ಲಿ ಒಟ್ಟು 10 ಗ್ರಾಂ ಚಿನ್ನದ ದರದಲ್ಲಿ 260 ರೂಪಾಯಿ ಇಳಿಕೆಯನ್ನು ಕಾಣುವ ಮೂಲಕ ಐತಿಹಾಸಿಕ ಇಳಿಕೆಯನ್ನು ಕಂಡಿದೆ.

ಕೊರೋನಾ ವೈರಸ್​ ಹರಡುವಿಕೆಯ ಹಿನ್ನೆಲೆಯಲ್ಲಿ ಆರ್ಥಿಕ ವ್ಯವಹಾರಗಳು ನೆಲಕಚ್ಚಿತ್ತು. ಇದು ಚಿನ್ನಾಭರಣ ಮಾರುಕಟ್ಟೆಯ ಮೇಲೆ ಪರಿಣಾಮವನ್ನು ಬೀರಿತ್ತು. ಜನರು ಚಿನ್ನದ ಮೇಲೆ ಹೂಡಿಕೆಯನ್ನು ಮಾಡಲು ಮನಸ್ಸು ಮಾಡಿದ್ದರಿಂದಾಗಿ ಬಂಗಾರ ಬಲು ದುಬಾರಿಯಾಗಿತ್ತು.

ಕೊರೊನಾ ಲಾಕ್ ಡೌನ್ ತೆರವಿನ ಬೆನ್ನಲ್ಲೇ ಆರ್ಥಿಕ ಚಟುವಟಿಕೆಗಳು ಗರಿಗೆದರುತ್ತಿರೋ ಹಿನ್ನೆಲೆಯಲ್ಲೀಗ ಚಿನ್ನದ ಬೆಲೆಯಲ್ಲಿ ಇಳಿಕೆಯನ್ನು ಕಾಣುತ್ತಿದೆ. ಕಳೆದ ಸೋಮವಾರದಿಂದ ಶನಿವಾರದವರೆಗೆ ಚಿನ್ನದ ದರ ಮೂರು ದಿನ ಏರಿಕೆ ಕಂಡು ಎರಡು ದಿನ ಇಳಿಕೆ ಕಂಡಿದೆ. ಈ ಮೂಲಕ 10ಗ್ರಾಂ ಆಭರಣ ಚಿನ್ನ ಕಳೆದ ವಾರ ಒಟ್ಟು 260 ರೂಪಾಯಿ ಇಳಿಕೆ ಕಂಡಂತಾಗಿದೆ.

ಈಗ ವಾರದ ಆರಂಭದಲ್ಲಿ ಚಿನ್ನದ ದರ ಭಾರೀ ಇಳಿಕೆ ಕಂಡಿದೆ. ಆಭರಣ ಚಿನ್ನ 10 ಗ್ರಾಂಗೆ 960 ರೂಪಾಯಿ ಇಳಿಕೆ ಕಾಣುವ ಮೂಲಕ 46,900 ರೂಪಾಯಿ ಆಗಿದೆ. ಇನ್ನು, ಶುದ್ಧ ಚಿನ್ನ 10 ಗ್ರಾಂಗೆ 1050 ರೂಪಾತಿ ಇಳಿಕೆ ಕಾಣುವ ಮೂಲಕ 51,160 ರೂಪಾಯಿ ಇದೆ.

ಇನ್ನು ಬೆಳ್ಳಿಯ ದರದಲ್ಲಿಯೂ ಇಳಿಕೆಯಾಗಿದ್ದು, ಕಳೆದೊಂದು ವಾರದ ಅವಧಿಯಲ್ಲಿ 2,100 ರೂಪಾಯಿ ಇಳಿಕೆಯನ್ನು ಕಾಣುವ ಮೂಲಕ 62,750 ರೂಪಾಯಿಗೆ ತಲುಪಿದೆ.

Comments are closed.