ಕೊರೊನೊ ಅಟ್ಟಹಾಸಕ್ಕೆ ತತ್ತರಿಸಿದ ಗಲ್ಪ್ ರಾಷ್ಟ್ರಗಳು : ಇರಾನ್ ನಲ್ಲಿ 54 ಮಂದಿಯನ್ನು ಬಲಿಪಡೆದ ಕೊರೊನಾ

0

ದುಬೈ : ಕೊರೊನಾ ವೈರಸ್ ಮಹಾಮಾರಿ ಇದೀಗ ಗಲ್ಫ್ ರಾಷ್ಟ್ರಗಳಲ್ಲಿ ಅಟ್ಟಹಾಸ ಮೆರೆಯುತ್ತಿದೆ. ಇರಾನ್, ಇರಾಕ್, ಕುವೈತ್, ಬೆಹರಿನ್, ಯುಎಇ, ಓಮಾನ್, ಕತ್ತಾರ್ ದೇಶಗಳಲ್ಲಿಯೂ ಕೊರೊನಾ ವ್ಯಾಪಿಸಿದೆ.

ಇರಾನ್ ದೇಶವೊಂದರಲ್ಲೇ ಬರೋಬ್ಬರಿ 54 ಮಂದಿಯನ್ನು ಬಲಿ ಪಡೆದಿದ್ದು, ನೂರಾರು ಮಂದಿ ಕರೋನಾ ಸೋಂಕಿನಿಂದ ಬಳಲುತ್ತಿದ್ದಾರೆ. ಈ ಕುರಿತ ನ್ಯೂಸ್ ನೆಕ್ಸ್ಟ್ ವಿಸ್ತ್ರತ ವರದಿ ಇಲ್ಲಿದೆ.

ಚೀನಾದಲ್ಲಿ ಕಾಣಿಸಿಕೊಂಡು ಸಾವಿರಾರು ಮಂದಿಯ ಮಾರಣ ಹೋಮಕ್ಕೆ ಕಾರಣವಾಗಿದ್ದ ಕೊರೊನಾ (ಕೋವಿದ್ 19) ವೈರಸ್ ಇದೀಗ ಗಲ್ಪ್ ರಾಷ್ಟ್ರಗಳ ನೆಮ್ಮದಿ ಕೆಡಿಸಿದೆ. ದಿನೇ ದಿನೇ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಅರಬ್ ರಾಷ್ಟ್ರಗಳಲ್ಲಿ ತೀವ್ರ ಕಟ್ಟೆಚ್ಚರವಹಿಸಲಾಗುತ್ತಿದೆ.

ಅರಬ್ ರಾಷ್ಟ್ರಗಳ ಪೈಕಿ ಇರಾನ್ ದೇಶದಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್ ಕಾಣಿಸಿಕೊಂಡಿತ್ತು. ಇದೀಗ ನೂರಾರು ಜನರಿಗೆ ಕೊರೊನಾ ಸೋಂಕು ವ್ಯಾಪಿಸಿದೆ. ಇರಾನ್ ದೇಶದಲ್ಲಿ 978 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ರೆ, 54 ಮಂದಿ ಈಗಾಗಲೇ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ.

ಇರಾನ್ ರಾಷ್ಟ್ರದ ಉಪ ಅಧ್ಯಕ್ಷೆ ಮೊಸೊಮ್ಮೆ ಇಬ್ತೇಕರ್ ಅವರಿಗೂ ಕೊರೊನಾ ಸೋಂಕು ತಗಲುಗಿದೆ. ಇನ್ಕುನು ವೈತ್ ದೇಶದಲ್ಲಿ 41, ಇರಾಕ್ ನಲ್ಲಿ 13, ಬೆಹರಿನ್ ನಲ್ಲಿ 41, ಯುಎಇಯಲ್ಲಿ 21, ಓಮಾನ್ ನಲ್ಲಿ 6 ಹಾಗೂ ಕತ್ತಾರ್ ಒಬ್ಬರಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ.

ಕೊರೊನಾ ಭೀತಿಯಿಂದಾಗಿ ಅರಬ್ ರಾಷ್ಟ್ರಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿವೆ. ದೇಶದ ಜನರಿಗೆ ಪೂರೈಸಲು ಮಾಸ್ಕ್ ಗಳ ಕೊರತೆ ಉಂಟಾಗಿರೋ ಹಿನ್ನೆಲೆಯಲ್ಲಿ ಹೊರದೇಶಗಳಿಂದಲೂ ಮಾಸ್ಕ್ ತರಿಸಿಕೊಳ್ಳಲಾಗುತ್ತಿದೆ. ವಿದೇಶಗಳಿಂದ ಬರುವ ಹಲವು ವಿಮಾನಗಳಿಗೂ ನಿರ್ಬಂಧ ಹೇರಲಾಗುತ್ತಿದೆ. ಕೊರೊನಾ ಸೋಂಕು ಇನ್ನಷ್ಟು ವ್ಯಾಪಿಸೋ ಭೀತಿಯಲ್ಲಿ ಆರೋಗ್ಯ ಇಲಾಖೆ ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿದೆ.

Leave A Reply

Your email address will not be published.