ಶೀಘ್ರವೇ ಒಂದಾಗ್ತಿದ್ದಾರೆ ಲಕ್ಷ್ಮೀಬಾರಮ್ಮಾ ಜೋಡಿ…! ಚಂದನ್-ಕವಿತಾ ಮದುವೆಗೆ ಮುಹೂರ್ತ ಫಿಕ್ಸ್…!!

ಲಕ್ಷ್ಮೀಬಾರಮ್ಮಾ ಧಾರಾವಾಹಿಯ ಮೂಲಕ ಕರುನಾಡಿನ ಹೆಂಗಳೆಯರ ಮನಗೆದ್ದ ಚಂದನ್ ಮತ್ತು ಕವಿತಾ ರಿಯಲ್ ಲೈಫ್ ನಲ್ಲೂ ಒಂದಾಗ್ತಿರೋದು ಈಗ ಹಳೆಸುದ್ದಿ. ಪ್ರೇಕ್ಷಕರ,ಸ್ನೇಹಿತರ ಕಣ್ಣುತಪ್ಪಿಸಿ ಲವ್ವಿ-ಡವ್ವಿ ನಡೆಸಿದ್ದ  ಈ ಜೋಡಿ ಏಪ್ರಿಲ್ 1 ರಂದು ಅಧಿಕೃತ ಘೋಷಣೆ ಜೊತೆ ರಿಂಗ್ ಬದಲಾಯಿಸಿಕೊಂಡಿದ್ದು ಆಗಲೇ ಮದುವೆ ಮುಹೂರ್ತವೂ ಫಿಕ್ಸ್ ಆಗಿದೆ.

ಹೌದು ಲಕ್ಷ್ಮೀಬಾರಮ್ಮಾ ಸೀರಿಯಲ್ ನಲ್ಲಿ ಅನುರೂಪದ ಜೋಡಿ ಎನ್ನಿಸಿದ್ದ ಕವಿತಾ ಹಾಗೂ ಚಂದನ್ ನಿಜವಾಗ್ಲೂ ಮದುವೆಯಾದ್ರೆ ಚೆನ್ನಾಗಿರುತ್ತೆ ಅಂತ ಅಂದುಕೊಂಡ ಹೆಣ್ಮಕ್ಕಳು ತುಂಬ ಜನ. ಅಂತ ಹೆಂಗಳೆಯರ ಹಾರೈಕೆ ನಿಜವಾಗಿದ್ದು, ಪರಸ್ಪರ ಪ್ರೀತಿಸಿದ ಕವಿತಾ ಹಾಗೂ ಚಂದನ್ ರಿಯಲ್ ಲೈಫ್ ನಲ್ಲೂ ಏಳುಹೆಜ್ಜೆ ಒಟ್ಟಿಗೆ ನಡೆಯಲಿದ್ದಾರೆ.

ಪ್ರೀತಿಯನ್ನು ಎಲ್ಲರಿಂದಲೂ ಮುಚ್ಚಿಟ್ಟು ಕೊನೆಗೆ ಕುಟುಂಬದ ಒಪ್ಪಿಗೆ ಪಡೆದು ಏಪ್ರಿಲ್ 1 ರಂದು ರಿಂಗ್ ಬದಲಾಯಿಸಿಕೊಂಡ ಈ ಜೋಡಿ ಇದೇ ಬರುವ ಮೇ 13 ಹಾಗೂ 14 ರಂದು ಹೊಸಬದುಕಿಗೆ ಕಾಲಿರಿಸಲಿದ್ದಾರೆ. ಚಂದನ್ ಮೈಸೂರು ಮೂಲದವರಾದರೂ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಅದ್ದೂರಿ ವಿವಾಹ ಮಹೋತ್ಸವ ಜರುಗಲಿದೆ.

ಕೊರೋನಾ ಎರಡನೇ ಅಲೆ ಹಾಗೂ ಸರ್ಕಾರದ ನೀತಿ ನಿಯಮಗಳ ಅಡ್ಡಿ ಇರೋದರಿಂದ ಆದಷ್ಟು ಬೇಗ ಮದುವೆ ಮಾಡಿ ಮುಗಿಸಲು ಎರಡು ಕುಟುಂಬದವರು ನಿರ್ಧರಿಸಿದ್ದು, ಅದಕ್ಕಾಗಿ ಮೇ 13 -14 ಮುಹೂರ್ತವನ್ನೇ ಆಯ್ಕೆಮಾಡಲಾಗಿದೆ.

ಎಂಗೇಜಮೆಂಟ್ ಗೂ ಮೊದಲೇ ಫ್ರೀವೆಡ್ಡಿಂಗ್ ಪೋಟೋಶೂಟ್ ಮುಗಿಸಿರೋ ಈ ಜೋಡಿ ಈಗಾಗಲೇ ಶಾಪಿಂಗ್ ನಲ್ಲಿ ಬ್ಯುಸಿಯಾಗಿದ್ದು, ಮದುವೆ ಸಿದ್ಧತೆ ಆರಂಭಿಸಿದೆ. ಕೊರೋನಾ ಹಿನ್ನೆಲೆಯಲ್ಲಿ ಎರಡು ಕುಟುಂಬದ ಆಪ್ತರು ಹಾಗೂ ಸಿನಿರಂಗದ, ಕಿರುತೆರೆ ಲೋಕದ ಕೆಲ ಗಣ್ಯರಿಗೆ ಮಾತ್ರ ಆಹ್ವಾನ ನೀಡಲು ಕವಿತಾ ಚಂದನ್ ನಿರ್ಧರಿಸಿದ್ದಾರಂತೆ.

ಸದ್ಯ ಎಂಗೇಜಮೆಂಟ್  ಹಾಗೂ ಮದುವೆಗಾಗಿ ಚಂದನ್ ಸೀರಿಯಲ್ ಗಳಿಂದ ಬಿಡುವು ಪಡೆದಿದ್ದು, ಮದುವೆ ಬಳಿಕ ಮತ್ತೆ ಇಬ್ಬರೂ ಹಲವು ಸೀರಿಯಲ್ ನಲ್ಲಿ ಬ್ಯುಸಿಯಾಗಲಿದ್ದಾರೆ. ಒಟ್ಟಿನಲ್ಲಿ ಮತ್ತೊಮ್ಮೆ ಕನ್ನಡ ಕಿರುತೆರೆ ಲೋಕದಲ್ಲಿ ಮಂಗಳವಾದ್ಯ ಮೊಳಗಲಿದ್ದು, ಪ್ರೇಕ್ಷಕರ ಪ್ರೀತಿ ಚಿನ್ನು ಹಾಗೂ ಚಂದನ್ ಸಪ್ತಪದಿ ತುಳಿಯಲಿದ್ದಾರೆ.  

Comments are closed.