ಪೆಟ್ರೋಲ್ ಬೆಲೆ ಏರಿಕೆಗೆ ಖಂಡನೆ….! ಸೈಕಲ್ ನಲ್ಲಿ ಸಂಸತ್ತಿಗೆ ಬಂದ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ !!

ದೇಶದಾದ್ಯಂತ ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಸೈಕಲ್ ಜಾಥಾ ಹಾಗೂ ಪ್ರತಿಭಟನೆ ನಡೆಸುತ್ತಿದೆ. ಈ ಪ್ರತಿಭಟನೆಯ ಅಂಗವಾಗಿ ಕರ್ನಾಟಕದ ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ನ ಸಂಸದ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಸೈಕಲ್ ಏರಿ ಸಂಸತ್ ತಲುಪಿದ್ದಾರೆ.

ದೆಹಲಿಯ ಕಾವೇರಿ ಅಪಾರ್ಟಮೆಂಟ್ ನಲ್ಲಿರುವ ನಿವಾಸದಿಂದ ಸಂಸತ್ ಭವನದವರೆಗೆ ಡಿ.ಕೆ.ಸುರೇಶ್ ಸೈಕಲ್ ಚಲಾಯಿಸಿದ್ದಾರೆ. ಡಿ.ಕೆ.ಸುರೇಶ್ ಪ್ರತಿಭಟನೆಗೆ ಇತರ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದ್ದಾರೆ.

ಪ್ರಧಾನಿ ಮೋದಿಯವರು ದೇಶ ಹಿಂದೆಂದೂ ಕಂಡರಿಯದ ಇತಿಹಾಸ ಸೃಷ್ಟಿಸಿದ್ದಾರೆ. ಪೆಟ್ರೋಲ್ ಬೆಲೆ 100 ರೂಪಾಯಿ ಎಂಬ ಭಿತ್ತಿಪತ್ರ ಹೊತ್ತ ಸೈಕಲ್ ಚಲಾಯಿಸಿದ ಡಿ.ಕೆ.ಸುರೇಶ್ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಭೀಕರ ರಸ್ತೆ ಅಪಘಾತ : ಬಕ್ರೀದ್ ಆಚರಣೆಗೆ ತೆರಳುತ್ತಿದ್ದ 30ಕ್ಕೂ ಅಧಿಕ ಮಂದಿ ದುರ್ಮರಣ

ಪ್ರತಿನಿತ್ಯ ತೈಲ ದರ ಏರಿಕೆಯಾಗುತ್ತಿದೆ.  ಪೆಟ್ರೋಲ್, ಡಿಸೇಲ್ ಬೆಲೆ ನೂರರ ಗಡಿ ದಾಟಿದೆ.  ಇದನ್ನು ನಿಯಂತ್ರಣ ಮಾಡಬೇಕಾದ ಸರ್ಕಾರ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೈಕಟ್ಟಿ ಕೂತಿದೆ.

ಇದನ್ನೂ ಓದಿ : ಮತ್ತೆ ಚರ್ಚೆಗೆ ಬಂತು ಪವಿತ್ರಾ ಗೌಡ ಹೆಸರು….! ಏನಿದು ದಚ್ಚು-ಪವಿ ಅಸಲಿ ಕಹಾನಿ…!!

ಇದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಡುಗೆ ಅನಿಲ ದರವೂ ಹೆಚ್ಚಿದೆ. ಹೀಗಾದ್ರೆ ಬದುಕೋದು ಹೇಗೆ ಎಂದು ಸಂಸದ ಡಿ.ಕೆ.ಸುರೇಶ್ ಮಾಧ್ಯಮಗಳ ಎದುರು ಆಕ್ರೋಶ ತೋಡಿಕೊಂಡಿದ್ದಾರೆ.

Comments are closed.