ಇನ್ಮುಂದೆ ಕೃಷಿಕರಲ್ಲದವರೂ ಖರೀದಿಸಬಹುದು ಕೃಷಿ ಭೂಮಿ : ಭೂ ಸುಧಾರಣಾ ಕಾಯ್ದೆಗೆ ಮಹತ್ವದ ತಿದ್ದುಪಡಿ ತಂದ ಸರಕಾರ

0

ಬೆಂಗಳೂರು : ಇಷ್ಟು ದಿನ ಕೇವಲ ಕೃಷಿಕರು ಮಾತ್ರವೇ ಕೃಷಿಭೂಮಿಯನ್ನು ಖರೀದಿ ಮಾಡಬಹುದಾಗಿತ್ತು. ಆದ್ರೆ ರಾಜ್ಯ ಸರಕಾರ ಇದೀಗ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿಯನ್ನು ತಂದಿದ್ದು, ಇನ್ಮುಂದೆ ಕೃಷಿಕರಲ್ಲದವರು ಕೂಡ ಕೃಷಿ ಭೂಮಿಯನ್ನು ಖರೀದಿಸಬಹುದಾಗಿದೆ.

1992ರಿಂದಲೂ ರಾಜ್ಯದಲ್ಲಿ ಕೃಷಿ ಭೂಮಿಯನ್ನು ಖರೀದಿ ಮಾಡುವುದಕ್ಕೆ ಹಲವು ನಿಯಮಗಳನ್ನು ಅಳವಡಿಸಲಾಗಿತ್ತು. ಕೃಷಿಕರಾದವರು ಮಾತ್ರವೇ ಕೃಷಿ ಭೂಮಿಯನ್ನು ಖರೀದಿಸಲು ಅವಕಾಶವನ್ನು ಕಲ್ಪಿಸಲಾಗಿತ್ತು. ಅಲ್ಲದೇ ಕೃಷಿ ಭೂಮಿಯನ್ನು ಖರೀದಿ ಮಾಡಲು 25 ಲಕ್ಷಕ್ಕಿಂತ ಹೆಚ್ಚಿನ ಕೃಷಿಯೇತರ ವರಮಾನ ಇರುವವರಿಗೆ ಅವಕಾಶವಿರಲಿಲ್ಲ. ಆದ್ರೀಗ ರಾಜ್ಯ ಸರಕಾರ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವ ಹಿನ್ನೆಲೆಯಲ್ಲಿ ಕೃಷಿ ಭೂಮಿ ಖರೀದಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ.

5 ಸದಸ್ಯರ ಕುಟುಂಬ ಸುಮಾರು 108 ಎಕರೆಕ್ಕಿಂತ ಕಡಿಮೆ ಭೂಮಿಯನ್ನು ಖರೀದಿಸಬಹುದಾಗಿದೆ. ಇನ್ನು ಟ್ರಸ್ಟ್ ಅಥವಾ ಮಂಡಳಿಗೆ ನೀಡಿದ್ದ ಭೂಮಿಯನ್ನು ಭೂ ಸುಧಾರಣಾ ಕಾಯ್ದೆಯ ಸೆಕ್ಷನ್ 79ಎ ಮತ್ತು 79 ಬಿ ಅನ್ವಯ ರಾಜ್ಯ ಸರಕಾರ ವಾಪಾಸು ಪಡೆಯುವ ಅವಕಾಶವನ್ನು ಕಲ್ಪಿಸಲಾಗಿತ್ತು. ಆದ್ರೀಗ ರಾಜ್ಯ ಸರಕಾರ ಈ ನಿಯಮದಲ್ಲಿಯೂ ಬದಲಾವಣೆಯನ್ನು ತಂದಿದೆ.

ರಾಜ್ಯ ಸರಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವುದು ಹಲವು ರೀತಿಯಲ್ಲಿ ಅನುಕೂಲವಾಗಿದ್ರೆ, ಅನಾನೂಕೂಲವೂ ಇದೆ. ಉದ್ಯಮಿಗಳು ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಭೂಮಿಯ ಮೇಲೆ ಹೂಡಿಕೆಯನ್ನು ಮಾಡಲಿದ್ದಾರೆ. ಹೀಗಾಗಿ ಕೃಷಿ ಜಮೀನಿಗೆ ಬಂಗಾರ ಬೆಲೆ ಬರುತ್ತದೆ. ಮಾತ್ರವಲ್ಲ ಕೃಷಿ ಇನ್ನಷ್ಟು ಅಭಿವೃದ್ದಿಯಾಗುವುದರ ಜೊತೆಗೆ ಪಾಳುಬಿದ್ದ ಭೂಮಿಯಲ್ಲಿಯೂ ಕೃಷಿ ಕಾರ್ಯವನ್ನು ನಡೆಸಲು ಸಹಕಾರಿಯಾಗಲಿದೆ. ಆದ್ರೆ ಕೃಷಿ ಭೂಮಿಯನ್ನು ಯಾರು ಬೇಕಾದ್ರೂ ಖರೀದಿ ಮಾಡಲು ಅವಕಾಶ ಕಲ್ಪಿಸಿರುವುದರಿಂದ ಕೃಷಿ ಭೂಮಿಯ ಪ್ರಮಾಣದಲ್ಲಿಯೂ ಕಡಿತವಾಗುವ ಸಾಧ್ಯತೆಯಿದೆ.

Leave A Reply

Your email address will not be published.