ಕೊರೊನಾ ನಡುವಲ್ಲೇ ಚರ್ಚ್ ನಲ್ಲಿ ಸಾಮೂಹಿಕ ಪ್ರಾರ್ಥನೆ : ಫಾದರ್ ಸೇರಿ 7 ಮಂದಿಯ ವಿರುದ್ದ ಪ್ರಕರಣ ದಾಖಲು

0

ಕುಂದಾಪುರ : ಕೊರೋನಾ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಧಾರ್ಮಿಕ ಸಭೆ, ಸಮಾರಂಭ, ಸಾಮೂಹಿಕ ಪ್ರಾರ್ಥನೆಗೆ ನಿಷೇಧ ಹೇರಲಾಗಿದೆ. ಆದ್ರೆ ಲಾಕ್ ಡೌನ್ ಆದೇಶ ಉಲ್ಲಂಘಿಸಿ ಚರ್ಚಿನಲ್ಲಿ ಪ್ರಾರ್ಥನೆ ನಡೆಸಿರೋ ಆರೋಪದ ಹಿನ್ನೆಲೆಯಲ್ಲಿ ಫಾದರ್ ಸೇರಿ ಆರು ಮಂದಿಯ ವಿರುದ್ದ ಪ್ರಕರಣ ದಾಖಲಾಗಿದೆ.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಪಡುಕೋಣೆಯಲ್ಲಿರುವ ಸಂತ ಅಂತೋನಿ ಚರ್ಚಿನಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸುತ್ತಿರೋ ಕುರಿತು ಸಾರ್ವಜನಿಕರು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಗಂಗೊಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಭೇಟಿ ನೀಡಿದಾಗ ಪ್ರಾರ್ಥನೆ ನಡೆಸುತ್ತಿರೋದು ಬಯಲಾಗಿದೆ.

ಈ ಹಿನ್ನೆಲೆಯಲ್ಲಿ ಸಂತ ಅಂತೋನಿ ಚರ್ಚ್ ನಲ್ಲಿ ಫಾದರ್ ಫ್ರೆಡ್ ಮಸ್ಕರಿಯನ್ ಜೊತೆಗೆ ಇನ್ನೂ ಆರು ಮಂದಿಯ ವಿರುದ್ದ ಸಿ.ಆರ್.ಪಿ.ಸಿ ಕಲಂ 144(3) ಉಲ್ಲಂಘನೆ ವಿರುದ್ದ ಪ್ರಕರಣ ದಾಖಲಾಗಿದೆ.

Leave A Reply

Your email address will not be published.