ಮೇ 3ರ ನಂತರವೂ ಮುಂದುವರಿಯುತ್ತೆ ಲಾಕ್ ಡೌನ್ !

0

ನವದೆಹಲಿ : ಕೊರೊನಾ ಮಹಾಮಾರಿ ದೇಶದಲ್ಲಿ ಸದ್ಯಕ್ಕಂತೂ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಾಣಿಸುತ್ತಿಲ್ಲ. ಅದ್ರಲ್ಲೂ ದಿನೇ ದಿನೇ ಕೊರೊನಾ ಹಾಟ್ ಸ್ಪಾಟ್ ಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಕೊರೊನಾ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಮೇ 3ರ ನಂತರವೂ ಲಾಕ್ ಡೌನ್ ಆದೇಶವನ್ನು ಮುಂದುವರಿಸುವಂತೆ ಕೋವಿಡ್ -19 ನಿರ್ವಹಣೆಗಾಗಿ ರಚನೆಯಾಗಿರುವ ರಾಷ್ಟ್ರೀಯ ಕಾರ್ಯ ಪಡೆ ಸಲಹೆ ನೀಡಿದೆ.

ದೇಶದ ಸುಮಾರು 20ಕ್ಕೂ ಅಧಿಕ ರಾಜ್ಯಗಳ 170ಕ್ಕೂ ಅಧಿಕ ಜಿಲ್ಲೆಗಳನ್ನು ಕೊರೊನಾ ಹಾಟ್ ಸ್ಪಾಟ್ ಗಳೆಂದು ಗುರುತಿಸಲಾಗಿದೆ. ಅಲ್ಲದೇ ಸುಮಾರು 200 ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣ ಕಾಣಿಸಿಕೊಂಡಿದೆ. ದೇಶದಲ್ಲಿ ಕೊರೊನಾ ಸೊಂಕು ವ್ಯಾಪಿಸುತ್ತಿರೋ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಅಲ್ಲದೇ ಕೊರೊನಾ ಹಾಟ್ ಸ್ಪಾಟ್ ಜಿಲ್ಲೆಗಳಲ್ಲಿ ಲಾಕ್ ಡೌನ್ ಆದೇಶವನ್ನು ಮುಂದುವರಿಸುವಂತೆ ರಾಷ್ಟ್ರೀಯ ಕೋವಿಡ್-19 ಕಾರ್ಯ ಪಡೆ ಸಲಹೆ ನೀಡಿದೆ.

ಇನ್ನು ಆರೆಂಜ್ ವಲಯಗಳಲ್ಲಿ 14 ದಿನಗಳಲ್ಲಿ ಹಾಗೂ ಗ್ರೀನ್ ಜೋನ್ ಗಳಲ್ಲಿ 28 ದಿನಗಳಲ್ಲಿ ಯಾವುದೇ ಒಂದು ಕೊರೊನಾ ಪ್ರಕರಣಗಳು ಕಂಡುಬಾರದಿದ್ದಲ್ಲಿ ಅಂತಹ ಕಡೆಗಳಲ್ಲಿ ಲಾಕ್ ಡೌನ್ ಸಡಿಲಿಸುವ ನಿರ್ಧಾರ ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಇಲಾಖೆ ರಾಜ್ಯ ಸರಕಾರಗಳಿಗೆ ಸೂಚನೆ ನೀಡಿದೆ.

ಜಿಲ್ಲೆಯಲ್ಲಿ ಕೇವಲ ಒಂದು ಸೊಂಕಿನ ಪ್ರಕರಣಗಳಿದ್ದರೂ ಕೂಡ ಭಾಗಶಃ ಲಾಕ್ ಡೌನ್ ಆದೇಶವನ್ನು ಮುಂದುವರಿಸಬೇಕು. ಅಲ್ಲದೇ ರೋಗಿಗಳಿಲ್ಲದ ಜಿಲ್ಲೆಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟುನಿಟ್ಟಿನಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಗೊಳ್ಳಲು ಕ್ರಮವಹಿಸುವಂತೆ ಸಮಿತಿ ಸೂಚಿಸಿದೆ.

ತಜ್ಞರ ಸೂಚನೆಯನ್ನು ಆಧರಿಸಿ ಲಾಕ್ ಡೌನ್ ಸಡಿಲಿಸಬೇಕಾ ಇಲ್ಲಾ ಮುಂದುವರಿಸಬೇಕಾ ಅನ್ನುವ ಕುರಿತು ರಾಜ್ಯ ಸರಕಾರಗಳು ಅಂತಿಮ ನಿರ್ಧಾರವನ್ನು ಕೈಗೊಳ್ಳುವಂತೆಯೂ ಆರೋಗ್ಯ ಸಚಿವಾಲಯ ತಿಳಿಸಿದೆ ಎಂದು ರಾಷ್ಟ್ರೀಯ ಸುದ್ದಿ ಮಾಧ್ಯಮ ವರದಿ ಮಾಡಿದೆ.

Leave A Reply

Your email address will not be published.