ತುರ್ತು ಸೇವೆಗೆ ಅಡ್ಡಿ ಪಡಿಸಿದ ಕೋಟ ಪಿಎಸೈ : ಎಸ್ಪಿಗೆ ದೂರುಕೊಟ್ಟ ಮೇಲೆ ಓಪನ್ ಆಯ್ತು ಮೆಡಿಕಲ್

0

ಕುಂದಾಪುರ : ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್ ಶಾಪ್ ಗಳನ್ನು ಕಡ್ಡಾಯವಾಗಿ ತೆರೆದು ಜನರಿಗೆ ಸೇವೆ ನೀಡುವಂತೆ ಸರಕಾರ ಆದೇಶಿಸಿದೆ. ಜನರಿಗೆ ಸೇವೆ ನೀಡದ ಮೆಡಿಕಲ್ ಶಾಪ್ ಮಾಲೀಕರ ವಿರುದ್ದ ಕ್ರಮಕೈಗೊಳ್ಳುವುದಾಗಿ ಹೇಳಿದೆ. ಆದ್ರೆ ಕೋಟ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಮೆಡಿಕಲ್ ಶಾಪ್ ಗೆ ಬಲವಂತವಾಗಿ ಬೀಗ ಹಾಕಿಸಿದ್ದು, ಎಪ್ರಿಲ್ 14ರ ವರಗೆ ಓಪನ್ ಮಾಡದಂತೆ ತಾಕೀತು ಮಾಡಿದ್ದಾರೆ. ತುರ್ತು ಸೇವೆಗೆ ಅಡ್ಡಿ ಪಡಿಸಿರೋ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತೆಕ್ಕಟ್ಟೆಯಲ್ಲಿರುವ ಹರಿಶ್ರೀ ಮೆಡಿಕಲ್ ಶಾಪ್ ಎಂದಿನಂತೆಯೇ ಜನರಿಗೆ ಸೇವೆ ನೀಡುತ್ತಿತ್ತು. ಕೋವಿಡ್ -19 ಸೋಂಕು ಹರಡೋ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಸಾಮಾಜಿಕ ಅಂತರವನ್ನು ಕಾಪಾಡುವಂತೆಯೂ ಮನವಿ ಮಾಡಲಾಗಿತ್ತು. ಮೆಡಿಕಲ್ ಮುಂಭಾಗದಲ್ಲಿ ಬಾಕ್ಸ್ ಗಳನ್ನು ಅಳವಡಿಸಿ ಗ್ರಾಹರಿಗೆ ಮೆಡಿಕಲ್ ಮಾಲೀಕರು ಸೇವೆ ನೀಡುತ್ತಿದ್ದರು. ಆದ್ರೆ ಇಂದು ಬೆಳಿಗ್ಗೆ ಕೋಟ ಪೊಲೀಸ್ ಠಾಣೆಯ ಠಾಣಾಧಿಕಾರಿಯಾಗಿರುವ ನಿತ್ಯಾನಂದ ಗೌಡ ಅವರು ಬಂದಿದ್ದಾರೆ. ಈ ವೇಳೆಯಲ್ಲಿ ಔಷಧಿ ಕೊಳ್ಳುತ್ತಿದ್ದ ಗ್ರಾಹಕರು ಬಾಕ್ಸ್ ಒಳಗೆ ನಿಂತಿದ್ರು, ಆದರೆ ಹಿಂದೆ ನಿಂತಿದ್ದವರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿಲ್ಲವೆಂದು ಮೆಡಿಕಲ್ ಮಾಲೀಕರನ್ನು ಎಸೈ ತರಾಟೆಗೆ ತೆಗೆದುಕೊಂಡಿದ್ದಾರೆ. ಮಾಲೀಕರಲ್ಲಿ ಮೆಡಿಕಲ್ ಗೆ ಬೀಗಹಾಕುವಂತೆ ಸೂಚಿಸಿದ್ದಾರೆ. ಠಾಣಾಧಿಕಾರಿಗಳ ಒತ್ತಡಕ್ಕೆ ಮಣಿದು ಮಾಲೀಕರು ಮೆಡಿಕಲ್ ಗೆ ಬೀಗ ಹಾಕಿದ್ದಾರೆ. ಯಾವುದೇ ಕಾರಣಕ್ಕೂ ಎಪ್ರಿಲ್ 14ರ ವರೆಗೆ ಬಾಗಿಲು ತೆಗೆಯುವಂತಿಲ್ಲ ಅಂತಾ ವಾರ್ನಿಂಗ್ ಮಾಡಿದ್ದಾರೆ.

ಕೂಡಲೇ ಮೆಡಿಕಲ್ ಶಾಪ್ ಮಾಲೀಕರಿಗೆ ನಿನ್ನೆಯ ದಿನಾಂಕವನ್ನು ನಮೂದಿಸಿ ನೋಟಿಸ್ ನೀಡಿದ್ದಾರೆ. ಒಂದು ದಿನಗಳ ಒಳಗೆ ಮೆಡಿಕಲ್ ಲೈಸೆನ್ಸ್ ನೊಂದಿಗೆ ಠಾಣೆಗ ಹಾಜರಾಗಬೇಕು. ತಪ್ಪಿದಲ್ಲಿ ಕಾನೂನು ಕ್ರಮಕೈಗೊಳ್ಳುವುದಾಗಿ ಸೂಚಿಸಿದ್ದಾರೆ. ಮೆಡಿಕಲ್ ಬಂದ್ ಆಗಿದ್ದರಿಂದ ಗ್ರಾಮಾಂತರ ಪ್ರದೇಶಗಳಿಂದ ಔಷಧಿಕೊಳ್ಳಲು ಬಂದಿದ್ದ ರೋಗಿಗಳು ಔಷಧ ಸಿಗದೆ ಪರದಾಡಿದ್ದಾರೆ.

ಮೆಡಿಕಲ್ ಮಾಲೀಕರು ಅಗತ್ಯ ಸೇವೆಗಳನ್ನು ಗ್ರಾಹಕರಿಗೆ ಒದಗಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಮೆಡಿಕಲ್ ಬಂದ್ ಮಾಡಿದ್ರೆ ಲೈಸೆನ್ಸ್ ರದ್ದಾಗುತ್ತೆ ಅಂತಾ ಹೇಳಿದ್ರೂ ನಿತ್ಯಾನಂದ ಗೌಡರು ಕೇಳಲಿಲ್ಲ, ನಂತರ ಬ್ರಹ್ಮಾವರ ವೃತ್ತ ನಿರೀಕ್ಷಕರ ಮೂಲಕ ಮೆಡಿಕಲ್ ಶಾಪ್ ಮಾಲೀಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆಯೇ ಬ್ರಹ್ಮಾವರ ವೃತ್ತ ನಿರೀಕ್ಷಕರ ಸೂಚನೆಯಂತೆ ಮೆಡಿಕಲ್ ಶಾಪ್ ಓಪನ್ ಮಾಡಲಾಗಿದೆ. ನಿನ್ನೆ ಕೂಡ ಪೊಲೀಸರು ಸಂಜೆ 7 ಗಂಟೆಗೆ ಬಲವಂತವಾಗಿ ಮೆಡಿಕಲ್ ಗೆ ಬಾಗಿಲು ಹಾಕಿಸಿದ್ದಾರೆ. ಇದರಿಂದಾಗಿ ಗ್ರಾಮಾಂತರ ಪ್ರದೇಶಗಳಿಂದ ಬರುವ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ ಅಂತಾನೂ ಮೆಡಿಕಲ್ ಶಾಪ್ ಮಾಲೀಕರು ಆರೋಪಿಸಿದ್ದಾರೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತುರ್ತು ಅಗತ್ಯ ಸೇವೆಗಳನ್ನು ಹೆಚ್ಚು ಸಮಯದ ವರೆಗೆ ಒದಗಿಸುವಂತೆ

Leave A Reply

Your email address will not be published.