ಬೇಸಿಗೆಯ ಬಿಸಿಲು ಸುಟ್ಟು ಹಾಕುತ್ತಿದೆ. ಹಣ್ಣು, ಜ್ಯೂಸ್ ಕುಡಿದ್ರೂ ಬಾಯಾರಿಕೆ ಕಡಿಮೆಯಾಗ್ತಿಲ್ಲ. ಬೇಸಿಗೆ ಬಿಸಿಲಿಗೆ ದಣಿವು ನಿವಾರಿಸುವ ಈ ಕರ್ಬೂಜ ದೇಹದ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ಕರ್ಬೂಜ ಹಣ್ಣನ್ನು ಸೇವಿಸಿದರೆ ಆರೋಗ್ಯಕ್ಕೆ ಅದ್ಭುತ ರಾಮಬಾಣ.

ಕರ್ಬೂಜ ಹಣ್ಣಿನಲ್ಲಿ ಶೇ.95% ರಷ್ಟು ನೀರಿನಂಶವನ್ನು ಹೊಂದಿದ್ದು, ವಿಟಮಿನ್ ಮತ್ತು ಖನಿಜಾಂಶಗಳನ್ನು ಯಥೇಚ್ಛವಾಗಿ ಹೊಂದಿರುತ್ತದೆ. ಹಾಗಾಗಿ ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಲಾಭ ಎಂದು ಬೇರೆ ಹೇಳಬೇಕಿಲ್ಲ. ನೀರಿನಂಶದ ಜೊತೆಗೆ ಕರ್ಬೂಜ ಹಣ್ಣು ತಂಪು ಮತ್ತು ಶಮನಕಾರಿ ಗುಣವನ್ನು ಹೊಂದಿದೆ. ಇದು ಎದೆ ಉರಿಯನ್ನು ಶಮನ ಮಾಡುತ್ತದೆ ಮತ್ತು ಮೂತ್ರಕೋಶಗಳಲ್ಲಿ ಇರುವ ಕಶ್ಮಲಗಳನ್ನು ಸ್ವಚ್ಛಗೊಳಿಸುತ್ತದೆ.

ಕರ್ಬೂಜ ಹಣ್ಣುನ್ನು ತಿನ್ನಲು ಹಿಂಜರಿಯುತ್ತಾರೆ. ಆದರೆ ಕರ್ಬೂಜದಿಂದ ನಮ್ಮ ದೇಹಕ್ಕಾಗುವ ಅನುಕೂಲಗಳನ್ನು ತಿಳಿದ್ರೆ ಖಂಡಿತಾ ಶಾಕ್ ಆಗದೆ ಇರರು. ಕರ್ಬೂಜ ಹಣ್ಣಿನಲ್ಲಿ ನೀರಿನಂಶ ಮತ್ತು ವಿವಿಧ ಪೋಷಕಾಂಶಗಳು ಹೆಚ್ಚಿದ್ದರೂ ಕ್ಯಾಲೋರಿಗಳು ಕಡಿಮೆ ಇದೆ. ಹೀಗಾಗಿ ಇದನ್ನು ಸೇವಿಸಿದರೆ ಮನುಷ್ಯನ ದೇಹದ ಕೊಬ್ಬು ಜಾಸ್ತಿ ಮಾಡದೆ ದೇಹಕ್ಕೆ ಶಕ್ತಿ ನೀಡುತ್ತದೆ. ಬೀಸಿಲಿನ ಕಾಲದಲ್ಲಿ ತಿನ್ನುವುದರಿಂದ ದೇಹದ ಉಷ್ಣಾಂಶ ಕಡಿಮೆ ಮಾಡಿ ದೇಹವನ್ನು ಸಮಪ್ರಮಾನದಲ್ಲಿ ಇರುವಂತೆ ಮಾಡುತ್ತದೆ.

ಕರ್ಬೂಜ ಹಣ್ಣಿನಲ್ಲಿ ಹೇರಳವಾಗಿ ನಾರಿನಂಶವಿದ್ದು ಹಾಗು ಬೀಟಾ ಕ್ಯಾರೋಟೀನ್, ಪೊಟ್ಯಾಶಿಯಂ, ಕಬ್ಬಿಣ, ಮ್ಯಾಂಗನೀಸ್, ಫೋಲಿಕ್ ಆಮ್ಲ, ವಿಟಮಿನ್ ಎ, ಸಿ ಹಾಗೂ ಇತರ ಪ್ರಮುಖ ಪೋಷಕಾಂಶಗಳಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕರ್ಬೂಜ ಹಣ್ಣು ತಿನ್ನುವುದರಿಂದ ಬಿಳಿರಕ್ತಕಣಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗುವುದರಿಂದ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

ಕರ್ಬೂಜ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ಕ್ಯಾರೊಟೆನೊಯಿಡ್ ಅಂಶವಿದ್ದು, ಈ ಕ್ಯಾರೊಟೆನೊಯಿಡ್ ಕ್ಯಾನ್ಸರ್ ನಿಯಂತ್ರಿಸುವ ಶಕ್ತಿಯನ್ನು ಹೊಂದಿದೆ. ಮಾತ್ರವಲ್ಲ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಇದು ನಮ್ಮ ದೇಹವನ್ನು ಪ್ರವೇಶಿಸುವ ಕ್ಯಾನ್ಸರ್ ಕಾರಕಗಳನ್ನು ಕೊಲ್ಲುವುದರ ಜೊತೆಗೆ ದೇಹಕ್ಕೆ ರಕ್ಷಣೆ ಒದಗಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ರಕ್ತ ಹೆಪ್ಪುಗಟ್ಟುವುದು ಸಾಮಾನ್ಯ ಸಮಸ್ಯೆಯಾಗುತ್ತಿದೆ. ಆದರೆ ಕರ್ಬೂಜ ಹಣ್ಣು ಸೇವನೆಯಿಂದ ಲಕ್ವ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ. ಕರ್ಬೂಜ ಹಣ್ಣಿನಲ್ಲಿರುವ ಅಡೆನೊಸೈನ್ ಅಂಶ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ, ಹೀಗಾಗಿ ಲಕ್ವ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಬರದಂತೆ ನಿಯಂತ್ರಿಸುವ ಶಕ್ತಿ ಕರ್ಬೂಜ ಹಣ್ಣಿಗಿದೆ.

ಕರ್ಬೂಜ ಹಣ್ಣಿನ ರಸವು ಮಧುಮೇಹಿಗಳಿಗೆ ಉತ್ತಮ ಆಹಾರ. ದೇಹದಲ್ಲಿರುವ ಸಕ್ಕರೆಯ ಅಂಶವನ್ನು ಕಡಿಮೆ ಮಾಡಲು ಕರ್ಬೂಜ ಹಣ್ಣು ಸಹಕಾರಿಯಾಗಿದೆ. ಹೀಗಾಗಿ ವೈದ್ಯರು ಕೂಡ ಮಧುಮೇಹಿಗಳು ಸ್ವಲ್ಪ ಕಹಿಯಾಗಿರುವ ಕರ್ಬೂಜ ಹಣ್ಣಿನ ರಸವನ್ನು ಸೇವನೆ ಮಾಡಲು ಸಲಹೆ ನೀಡುತ್ತಾರೆ.

ಸುಂದರ ತ್ವಚೆಯನ್ನು ಹೊಂದಲು ಕರ್ಬೂಜ ಹಣ್ಣು ಹೆಚ್ಚು ಸಹಕಾರಿ. ಕರ್ಬೂಜ ಹಣ್ಣಿನಲ್ಲಿ ಪ್ರೊಟೀನ್ ಅಂಶವಿದ್ದು, ಚರ್ಮದಲ್ಲಿರುವ ಕೋಶಗಳ ರಚನೆಯಲ್ಲಿರುವ ಐಕ್ಯತೆಯ ಮೇಲೆ ಪ್ರಭಾವವನ್ನು ಬೀರುತ್ತದೆ. ಅಲ್ಲದೇ ಕರ್ಬೂಜ ಹಣ್ಣಿನಲ್ಲಿರುವ ಕೊಲ್ಲಜೆನ್ ಅಂಶ ಗಾಯವನ್ನು ಬಹುಬೇಗನೆ ಗುಣಪಡಿಸುತ್ತದೆ. ಅಲ್ಲದೇ ತ್ವಚೆಯ ಮೇಲೆ ಶಾಶ್ವತವಾದ ಪ್ರಭಾವವನ್ನು ಬೀರುತ್ತದೆ. ಒರಟಾಗಿರುವ ಮತ್ತು ಒಣಗಿದ ತ್ವಜೆಯನ್ನು ಕಾಂತಿಯುಕ್ತಗೊಳಿಸಬೇಕಾದ್ರೆ ಕರ್ಬೂಜ ಹಣ್ಣಿನ ಸೇವೆ ಅತೀ ಅಗತ್ಯ.

ಆರೋಗ್ಯಕರ ತ್ವಚೆಯನ್ನು ಒದಗಿಸುತ್ತದೆ ಕರ್ಬೂಜವು ಕೊಲೆಜಿನ್ ಎಂಬ ಅಂಶವನ್ನು ಹೊಂದಿದೆ. ಇದರಲ್ಲಿರುವ ಪ್ರೊಟೀನ್ ಅಂಶಗಳು ಚರ್ಮದಲ್ಲಿರುವ ಕೋಶಗಳ ರಚನೆಯಲ್ಲಿರುವ ಐಕ್ಯತೆಯ ಮೇಲೆ ಪ್ರಭಾವ ಬೀರುತ್ತವೆ. ಕೊಲ್ಲಜೆನ್ ಗಾಯವನ್ನು ಬೇಗ ಮಾಗಿಸುತ್ತದೆ ಮತ್ತು ತ್ವಚೆಯ ಶಾಶ್ವತತೆಯ ಮೇಲೆ ಸಹ ಪ್ರಭಾವ ಬೀರುತ್ತದೆ. ನೀವು ಕರ್ಬೂಜವನ್ನು ತಿನ್ನುತ್ತಿದ್ದರೆ ನಿಮ್ಮ ತ್ವಚೆಯು ಒರಟಾಗಿ ಮತ್ತು ಒಣಗಿದಂತೆ ಕಾಣುವುದಿಲ್ಲ.

ಕರ್ಬೂಜ ಹಣ್ಣಿನಲ್ಲಿ ಪೋಲಿಕ್ ಅಂಶ ಹೆಚ್ಚಾಗಿರುವುದರಿಂದ ಗರ್ಭಿಣಿಯರಿಗೆ ಹೆಚ್ಚಿನ ಸಹಕಾರಿಯಾಗಿದೆ. ಮಹಿಳೆಯರು ಗರ್ಭಾವಸ್ಥೆಯಲ್ಲಿರುವಾಗ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪೋಲಿಕ್ ಆಸಿಡ್ ಅಗತ್ಯವಿರುತ್ತದೆ. ಹೀಗಾಗಿ ಕರ್ಬೂಜ ಹಣ್ಣಿನ ಸೇವೆಯನ್ನು ಮಾಡುವುದರಿಂದ ಹೇರಳ ಪ್ರಮಾಣದಲ್ಲಿ ಫೋಲಿಕ್ ಆಸಿಡೆ ದೇಹವನ್ನು ಸೇರುತ್ತದೆ. ಪೋಲಿಕ್ ಆಸಿಡ್ ಮಗುವಿನ ಬೆಳವಣಿಗೆಗೂ ಸಹಕಾರಿಯಾಗಿದೆ.

ನೀವೇನಾದ್ರೂ ತೂಕ ಇಳಿಸಿಕೊಳ್ಳುವ ಪ್ಲಾನ್ ಇದ್ರೆ ಕರ್ಬೂಜ ಹಣ್ಣನ್ನು ಸೇವಿಸುವುದು ಬಹಳ ಉತ್ತಮ. ತೂಕವಿಳಿಸಲು ಪ್ಲಾನ್ ಮಾಡುವವರಿಗೆ ಕರ್ಬೂಜ ಹಣ್ಣು ಹೇಳಿ ಮಾಡಿಸಿದಂತಿದೆ. ಕರ್ಬೂಜ ಹಣ್ಣಿನಲ್ಲಿರುವ ಸೋಡಿಯಂ ಅಂಶ ತೂಕವಿಳಿಸಲು ಸಹಕಾರಿಯಾಗುತ್ತದೆ. ಮಾತ್ರವಲ್ಲ ಕೊಬ್ಬು ರಹಿತ, ಕೊಲೆಸ್ಟ್ರಾಲ್ ರಹಿತ ಹಣ್ಣಾಗಿರೋ ಕರ್ಬೂಜದಲ್ಲಿ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿ ಇರೋದ್ರಿಂದ ಹಣ್ಣಿನಲ್ಲಿರುವ ನೀರಿನ ಅಂಶ ಹೊಟ್ಟೆತುಂಬಿದಂತೆ ಬಾಸವಾಗುತ್ತದೆ, ಹೀಗಾಗಿ ಪದೇ ಪದೇ ಆಹಾರ ಸೇವನೆ ಮಾಡುವುದನ್ನು ತಪ್ಪಿಸುತ್ತದೆ.