ಮಾರಾಟಗಾರರಿಗೆ ಬಿಗ್ ಶಾಕ್….! ಪಟಾಕಿ ನಿಷೇಧಕ್ಕೆ ಅಸ್ತು ಎಂದ ರಾಜ್ಯ ಸರ್ಕಾರ..!!

ರಾಜಸ್ಥಾನ: ಈಗಾಗಲೇ ಕೊರೋನಾ ವೈರಸ್ ನಿಂದ ಜನರು ಆರೋಗ್ಯ ಕಳೆದುಕೊಂಡು ಸಮಸ್ಯೆಗಿಡಾಗಿರುವುದರಿಂದ ಮುಂಬರುವ ದೀಪಾವಳಿಯಲ್ಲಿ ಮತ್ತೆ ಮಾಲಿನ್ಯ ಹೆಚ್ಚಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದನ್ನು ತಡೆಯಲು ಸರ್ಕಾರ ಪಟಾಕಿ ನಿಷೇಧಕ್ಕೆ ಮುಂದಾಗಿದೆ. ರಾಜಸ್ಥಾನದಲ್ಲಿ ಇಂತಹದೊಂದು ಮಾದರಿ ಪ್ರಯತ್ನಕ್ಕೆ ಸರ್ಕಾರ ಮುನ್ನುಡಿ ಬರೆದಿದೆ.

ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಆದೇಶ ಹೊರಡಿಸಿದ್ದು, ದೀಪಾವಳಿ ಹಬ್ಬದ ವೇಳೆ ಎಲ್ಲ ಬಗೆಯ ಪಟಾಕಿ ಮಾರಾಟದ ಮೇಲೆ ನಿರ್ಬಂಧ ಹೇರಿದ್ದಾರೆ. ಕೊರೋನಾದಂತಹ ಸಾಂಕ್ರಾಮಿಕ ರೋಗ ಸಮಸ್ಯೆಯಿಂದ ಈಗಾಗಲೇ ಬಳಲಿರುವ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಈ ನಿರ್ಧಾರ ಅನಿವಾರ್ಯ ಎಂದು ಅವರು ಅಭಿಪ್ರಾಯಿಸಿದ್ದಾರೆ.

ಇದು ಜನರು ಜೀವ ಉಳಿಸಿಕೊಳ್ಳುವ ಸಂದರ್ಭವಾಗಿದೆ. ಈ ಹಬ್ಬದಲ್ಲಿ ಪಟಾಕಿ ಬಳಕೆಯಿಂದ ಮತ್ತಷ್ಟು ಆತಂಕಗಳೇ ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಪಟಾಕಿ ಮಾರಾಟ ಹಾಗೂ ಬಳಕೆ ನಿಷೇಧಿಸಲಾಗಿದೆ ಎಂದಿದ್ದಾರೆ. ಅಷ್ಟೇ ಅಲ್ಲ ನವೆಂಬರ್ 16 ರವರೆಗೆ ರಾಜಸ್ಥಾನದಲ್ಲಿ ಶಾಲೆಗಳನ್ನು ಆರಂಭಿಸದಿರಲು ಸರ್ಕಾರ ನಿರ್ಧರಿಸಿದೆ.

ವಾಯುಮಾಲಿನ್ಯ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಿರುವ ಸಿಎಂ ಗೆಹ್ಲೋಟ್ ಪಟಾಕಿ ಸಿಡಿತ ಹಾಗೂ ಮಾರಾಟದ ಮೇಲೆ ನಿಯಂತ್ರಣ ಹೇರೋದರ ಜೊತೆಗೆ ಫಿಟ್ ನೆಸ್ ಪ್ರಮಾಣ ಪತ್ರವಿಲ್ಲದೇ ಸಂಚರಿಸುವ ವಾಹನಗಳ ಮಾಲೀಕರ ಮೇಲೂ ಕ್ರಮಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Comments are closed.