ಸಿನಿಮಾ ಪ್ರಮೋಶನ್ ಗೂ ಬರ್ತಿಲ್ಲ ರಶ್ಮಿಕಾ…! ಕನ್ನಡವನ್ನು ಕಡೆಗಣಿಸಿದ ಕೊಡಗಿನ ಕುವರಿ…!

ಕೊರೋನಾ ಬಳಿಕ ತೆರೆಗೆ ಬರ್ತಿರೋ ಬಿಗ್ ಬಜೆಟ್ ಚಿತ್ರ ಪೊಗರು. ಆದರೇ ಬೇರೆ ಭಾಷೆಯಲ್ಲಿ ಅವಕಾಶಗಳು ಸಿಗ್ತಿದ್ದಂತೆ ವರಸೆ ಬದಲಿಸಿರೋ ನಟಿ ರಶ್ಮಿಕಾ ಚಿತ್ರದ ಪ್ರಮೋಶನ್ ಗೂ ಉಸಿರೆತ್ತದೇ ಕನ್ನಡ ಕಡೆಗಣಿಸಿ ಬೇರೆ ಭಾಷೆಗೆ ಒಲವು ತೋರ್ತಿದ್ದಾರೆ.

ಪೊಗರು ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಬಹುನೀರಿಕ್ಷಿತ ಚಿತ್ರ. ಕೊರೋನಾ ಬಳಿಕ ಮೊದಲು ಬಿಡುಗಡೆಯಾಗ್ತಿರೋ ಬಿಗ್ ಬಜೆಟ್ ಸಿನಿಮಾ ಕೂಡ ಹೌದು. ಅಷ್ಟೇ ಅಲ್ಲ ರಶ್ಮಿಕಾಮಂದಣ್ಣ ಕನ್ನಡದಲ್ಲಿ ನಟಿಸಿದ ಕೊನೆಯ ಚಿತ್ರವೂ ಹೌದು. ಯಾಕೆಂದರೆ ಕೊಡಗಿನ ಬೆಡಗಿ ರಶ್ಮಿಕಾ ಈಗ ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.

ಅಷ್ಟೇ ಅಲ್ಲ ಯಾವುದೇ ಕನ್ನಡ ಸಿನಿಮಾವನ್ನು ಒಪ್ಪಿಕೊಳ್ಳದೇ, ಕನ್ನಡ ಸಿನಿಮಾ ನಿರ್ದೇಶಕರ ಕೈಗೂ ಸಿಗದೇ ಪರ ಭಾಷೆಯಲ್ಲೇ ಕಳೆದುಹೋಗಿದ್ದಾರೆ. ಆದರೆ ಇದೆಲ್ಲದರ ಮಧ್ಯೆ ರಶ್ಮಿಕಾ ಕನ್ನಡ ಭಾಷೆ ಹಾಗೂ ಕನ್ನಡ ಚಿತ್ರರಂಗ ಹಾಗೂ ಕರ್ನಾಟಕವನ್ನೇ ಕಡೆಗಣಿಸಿದ್ದಾರೆ ಎಂಬ ಆರೋಪ ಅಭಿಮಾನಿ ವಲಯದಿಂದಲೇ ಬರ್ತಿದೆ.

ಇದಕ್ಕೆ ಕಾರಣವೂಇದೆ. ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ರಶ್ಮಿಕಾ ಮಂದಣ್ಣ, ಎಲ್ಲ ಡೆವಲಪ್ಮೆಂಟ್ ಗಳಿಗೂ ಪೋಸ್ಟ್ ಹಾಕುವ ಮೂಲಕ ಸಂಭ್ರಮಿಸುತ್ತಾರೆ. ವಿಚಾರ ಹಂಚಿಕೊಳ್ಳುತ್ತಾರೆ.

ಆದರೆ ಪೊಗರು ರಿಲೀಸ್ ಗೆ ಡೇಟ್ ಫಿಕ್ಸ್ ಆಗಿದ್ದರೂ ರಶ್ಮಿಕಾ ಚಕಾರ ಎತ್ತಿಲ್ಲ. ಒಂದು ಪೋಸ್ಟ್ ಕೂಡ ಹಾಕಿಲ್ಲ. ಈ ಹಿಂದೆ ಸಿನಿಮಾ ಹಾಡು ವೀಕ್ಷಣೆಯಲ್ಲಿ ದಾಖಲೆ ಮಾಡಿದಾಗಲೂ ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ಈ ಖುಷಿ ಸಂಗತಿ ಹಂಚಿಕೊಂಡಿರಲಿಲ್ಲ.

ಹೀಗಾಗಿ ರಶ್ಮಿಕಾಗೆ ಕನ್ನಡ ಚಿತ್ರರಂಗ ಹಾಗೂ ಸ್ವತಃ ತಾನು ನಟಿಸಿದ ಸಿನಿಮಾ ಕೂಡ ಲೆಕ್ಕಕ್ಕೇ ಇಲ್ವಾ ಅಂತ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

ತಮ್ಮ ಉಳಿದ ಭಾಷೆಯ ಚಿತ್ರಗಳ ಶೂಟಿಂಗ್, ನಟರ ಬರ್ತಡೇ ಸೇರಿದಂತೆ ಎಲ್ಲ ವಿಚಾರವನ್ನು ಪೋಸ್ಟ್ ಮಾಡಿ ಅಪ್ಡೇಟ್ ಮಾಡುವ ರಶ್ಮಿಕಾ ಕನ್ನಡದ ತಮ್ಮ ಸಿನಿಮಾ ಪ್ರಮೋಶನ್ ಮರೆತಿದ್ದೇಕೆ ಅನ್ನೋದು ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ .

ಪೊಗರು ಸಿನಿಮಾವನ್ನು ಈಗ ಚೆನ್ನಾಗಿ ಪ್ರಮೋಶನ್ ಮಾಡಿ ಜನರು ಥಿಯೇಟರ್ ಗೆ ಬರುವಂತೆ ಮಾಡಿದರೇ ಮಾತ್ರ ಚಿತ್ರದ ಗೆಲುವು ಸಾಧ್ಯ. ಹೀಗಿರುವಾಗ ರಶ್ಮಿಕಾ ಚಿತ್ರಕ್ಕೆ ಸಪೋರ್ಟ್ ಮಾಡುವ ಬದಲು ಒಂದು ಪೋಸ್ಟ್ ಕೂಡ ಹಾಕದೇ ತಣ್ಣಗೆ ಕೂತಿರೋದು ಹಲವು ಅನುಮಾನ ಮೂಡಿಸಿದೆ.

Comments are closed.