ಕೌರವನ ಮನವಿಗೆ ಸ್ಪಂದಿಸಿದ ದಚ್ಚು….! ಕೃಷಿ ಇಲಾಖೆ‌ ಸೇರಿದ ಚಾಲೆಂಜಿಂಗ್ ಸ್ಟಾರ್…!!

ನಟ ದರ್ಶನ್ ನಟನೆಯ ಜೊತೆಗೆ ಪ್ರಾಣಿಪ್ರಿಯ ಮತ್ತು ಅಪ್ಪಟ ಪರಿಸರ ಪ್ರೀತಿಯ ವ್ಯಕ್ತಿ. ಅವಕಾಶ ಸಿಕ್ಕಾಗಲೆಲ್ಲ ಕಾಡಿನ ನಡುವೆ ಪೋಟೋಗ್ರಫಿಮಾಡುತ್ತ ಕಾಲಕಳೆಯುವ ದಚ್ಚು ಈಗ ಕೃಷಿಕರ ಉತ್ಸಾಹ ಹೆಚ್ಚಿಸುವ ಕೆಲಸ ಮಾಡಲಿದ್ದಾರೆ.

ರಾಜ್ಯದ ಕೃಷಿ ಇಲಾಖೆಯ ರಾಯಭಾರಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನೇಮಿಸಲಾಗಿದ್ದು, ಯುವಜನತೆಯನ್ನು ಕೃಷಿಯತ್ತ ಸೆಳೆಯೋದು ಹಾಗೂ ಕೃಷಿಕರನ್ನು ಇನ್ನಷ್ಟು ಉತ್ತೇಜಿಸುವ ಉದ್ದೇಶದಿಂದ ಕೃಷಿ ಇಲಾಖೆ ದರ್ಶನ್ ರನ್ನು ರಾಯಭಾರಿಯಾಗಿ ಆಯ್ಕೆ ಮಾಡಿದೆ.

ಸರ್ಕಾರದ ಈ ಆಫರ್ ಗೆ ನಟ ದರ್ಶನ್ ಯಾವುದೇ ಸಂಭಾವನೆ ಅಥವಾ ಗೌರವ ಧನ ಪಡೆಯದೇ ಒಪ್ಪಿಕೊಂಡಿದ್ದಾರೆ.

ಇತ್ತೀಚಿಗಷ್ಟೇ ಕೃಷಿ ಸಚಿವ ಬಿ.ಸಿ‌.ಪಾಟೀಲ್ ದರ್ಶನ್ ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಅಷ್ಟೇ ಅಲ್ಲ ದರ್ಶನ್ ಫಾರ್ಮ್ ಹೌಸ್ ಗೂ ಭೇಟಿ ನೀಡಿದ್ದರು.

ದರ್ಶನ್ ಖುಷಿಯಿಂದ ಕೃಷಿ ಇಲಾಖೆಯ ಚಟುವಟಿಕೆಗಳನ್ನು ಪ್ರಚಾರ ಮಾಡಲು ಒಪ್ಪಿಕೊಂಡಿದ್ದು, ಸಧ್ಯದಲ್ಲೇ ಒಂದು ದಿನದ ರೈತರ ಕಾರ್ಯಾಗಾರದಲ್ಲೂ ಪಾಲ್ಗೊಳ್ಳಿದ್ದಾರೆ ಎನ್ನಲಾಗಿದೆ.

ಸ್ವತಃ ಕೃಷಿ ಕಾರ್ಯದಲ್ಲಿ ಆಸಕ್ತರಾಗಿರುವ ದರ್ಶನ್, ಬಿಡುವಿನ ವೇಳೆಯಲ್ಲಿ ತಮ್ಮ ಮೈಸೂರು ಫಾರ್ಂ ಹೌಸ್ ನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಾರೆ.

ಅಷ್ಟೇ ಅಲ್ಲ ಫಾರಂ ಹೌಸ್ ನಲ್ಲಿರೋ ಕುದುರು,ಹಸು ಸೇರಿದಂತೆ ಎಲ್ಲ ಪ್ರಾಣಿಗಳಿಗೆ ಮೇವು ತಿನ್ನಿಸೋದು ಸೇರಿದಂತೆ ಎಲ್ಲ ಕೆಲಸ ಮಾಡುತ್ತಾರೆ. ಮೊನ್ನೆ ಸಂಕ್ರಾಂತಿ ಗೆ ಫಾರಂ ಹೌಸ್ ನಲ್ಲಿ‌ ಕಿಚ್ಚು ಹಾಯಿಸಿ‌ಸಂಭ್ರಮಿಸಿದ್ದರು.

Comments are closed.