ಜ್ಯೂನಿಯರ್ ಚಿರುಗೆ ಸಿಕ್ತು ಭರಪೂರ ಪ್ರೀತಿ…! ಮೇಘನಾ ಮನೆಗೆ ರೆಬೆಲ್ ಸ್ಟಾರ್ ಮನೆಯಿಂದ ಬಂತು ಸ್ಪೆಶಲ್ ಗಿಫ್ಟ್…!!

ಕೆಲ ದಿನಗಳ ಹಿಂದೇ ಬರಿ ಮೌನ, ದುಃಖ,ಬೇಸರ ಮನೆ ಮಾಡಿದ್ದ ಮೇಘನಾ ಸರ್ಜಾ ಮನೆಯಲ್ಲೀಗ  ಪುಟ್ಟ ಕಂದನ ಕಿರುಗೆಜ್ಜೆ ನಾದ ತುಂಬಿದೆ. ಹೊಸ ಕನಸುಗಳ ಜೊತೆ ಮೇಘನಾ ಕೂಡ ಮುಗುಳುನಗುತ್ತಿದ್ದಾರೆ. ಮೇಘನಾ ಹಾಗೂ ಜ್ಯೂನಿಯರ್ ಚಿರು ಖುಷಿ ಹೆಚ್ಚಿಸಲು ಸ್ಯಾಂಡಲ್ ವುಡ್ ಸ್ಟಾರ್ಸ್ ಕುಟುಂಬವೂ ಕೈ ಜೋಡಿಸಿದ್ದು, ರೆಬೆಲ್ ಮನೆಯಿಂದ ಜ್ಯೂನಿಯರ್ ಚಿರುಗೆ ಸ್ಪೆಶಲ್ ಗಿಫ್ಟ್ ಬಂದಿದೆ.

ಸ್ಯಾಂಡಲ್ ವುಡ್ ಸ್ಟಾರ್ ಗಳು ಕೇವಲ ತೆರೆ ಮೇಲೆ ಮಾತ್ರವಲ್ಲ ತೆರೆಯ ಹೊರಗು ಒಂದೊಳ್ಳೆ ಬಾಂಧವ್ಯವನ್ನು ಉಳಿಸಿಕೊಂಡಿದ್ದಾರೆ. ಹೀಗಾಗಿ ನಟ-ನಟಿ-ಪೋಷಕ ನಟ-ನಟಿಯರ ಮನೆಯ ಸುಖ-ದುಃಖಗಳಲ್ಲಿ ಪರಸ್ಪರ ಭಾಗಿಯಾಗುತ್ತಾರೆ. ಚಿರು ನಿಧನರಾದಾಗ ಚಿತ್ರರಂಗವೇ ಮರುಗಿತ್ತು. ಇದೀಗ ಜ್ಯೂನಿಯರ್ ಚಿರು ಆಗಮನದಿಂದ ಎಲ್ಲರೂ ಖುಷಿಯಾಗಿದ್ದಾರೆ.

ಜ್ಯೂನಿಯರ್ ಚಿರುಗಾಗಿ ಕಿಚ್ಚ ಸುದೀಪ್ ಮನೆಯಿಂದ ಆಟಿಕೆಗಳು ಬಂದಿದ್ದರೇ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದು ತೊಟ್ಟಿಲು ಹಾಗೂ ಮುದ್ದಾದ ನಾಯಿಮರಿಗಳನ್ನು ಕಳುಹಿಸಿಕೊಟ್ಟಿದ್ದಾರಂತೆ. ಇನ್ನು ಮಗುವಿನ ಚಿಕ್ಕಪ್ಪ ಧ್ರುವ್ ಸರ್ಜಾ ಮಗು ಹುಟ್ಟುವ ಮುನ್ನವೇ ಬೆಳ್ಳಿಯ ತೊಟ್ಟಿಲು ಖರೀದಿಸಿದ್ದರು.

ಈ ಮಧ್ಯೆ ಸ್ಯಾಂಡಲ್ ವುಡ್ ಸ್ಟಾರ್ ಗಳಿಗೆ ಅಣ್ಣನಂತಿರೋ ರೆಬೆಲ್ ಸ್ಟಾರ್ ಅಂಬರೀಶ್ ಈ ಹಿಂದೆ ರಾಕಿಂಗ್ ಸ್ಟಾರ್ ಯಶ್ ಮಗುವಿಗೆ ವಿಶೇಷವಾದ ಕಲಘಟಗಿ ತೊಟ್ಟಿಲು ನೀಡಿದ್ದರು. ಇದೀಗ ಅಂಬರೀಶ್ ಇಲ್ಲದೇ ಇದ್ದರೂ ರೆಬೆಲ್ ಮನೆಯಿಂದ ಮೇಘನಾ ಮನೆಗೆ ಜ್ಯೂನಿಯರ್ ಚಿರುಗಾಗಿ ವಿಶೇಷ ಗಿಫ್ಟ್ ಗಳು ಬಂದಿವೆ.

ದೀಪಾವಳಿ ಹಬ್ಬದಂದು ಸಿಹಿತಿಂಡಿ, ಮಗುವಿಗೆ ಆಟಿಕೆ-ಬಟ್ಟೆಯನ್ನು ಸುಮಲತಾ ಅಂಬರೀಶ್ ಗಿಫ್ಟ್ ಆಗಿ ಮೇಘನಾ ಮನೆಗೆ ಕಳುಹಿಸಿ ಕೊಟ್ಟಿದ್ದಾರಂತೆ. ಅಂಬರೀಶ್ ಹಾಗೂ ಸುಂದರ್ ರಾಜ್ ಕುಟುಂಬ  ಈ ಹಿಂದೆಯಿಂದಲೂ ಆತ್ಮೀಯ ಸಂಬಂಧ ಹೊಂದಿದೆ. ಇವರ ಮನೆಗಳು ಒಂದೇ ಏರಿಯಾದಲ್ಲಿವೆ.


ಹೀಗಾಗಿ ಮೇಘನಾ ಅಂಬರೀಶ್ ಮನೆಯಲ್ಲೂ ಮನೆಮಗಳಂತೆ ಇದ್ದಾರೆ. ಜ್ಯೂನಿಯರ್ ಚಿರುಗಾಗಿ ಸುಮಲತಾ ಮುದ್ದಾದ ಡ್ರೆಸ್ ಹಾಗೂ ಆಟಿಕೆಗಳನ್ನು ಖರೀದಿಸಿ ತಾವೇ ಹೋಗಿ ಕೊಟ್ಟುಬಂದಿದ್ದಾರಂತೆ. ಒಟ್ಟಿನಲ್ಲಿ ಜ್ಯೂನಿಯರ್ ಚಿರುಗೆ ಸ್ಯಾಂಡಲ್ ವುಡ್ ಸ್ಟಾರ್ ಗಳಿಂದ ಭರ್ಜರಿ ಗಿಫ್ಟ್ ಸಿಕ್ತಿದ್ದು, ಮಗುವಿಗೆ ಸಿಗ್ತಿರೋ ಗ್ರ್ಯಾಂಡ್ ವೆಲ್ಕಂ ಹಾಗೂ ಪ್ರೀತಿ ನೋಡಿ ಮೇಘನಾ ಮೂಕವಾಗಿದ್ದಾರಂತೆ.

Comments are closed.