ಸಿನಿಮಾ ಟೈಟಲ್ ಲೋಗೋ ಲಾಂಚ್ ವೇಳೆಯೇ ರಿಲೀಸ್ ಡೇಟ್ ಅನೌನ್ಸ್…! ಗಣೇಶ ಹಬ್ಬದ ವೇಳೆಗೆ ತೆರೆಗೆ ಬರಲಿದ್ದಾನೆ ವಿಕ್ರಾಂತ್ ರೋಣ…!!

ಸ್ಯಾಂಡಲ್ ವುಡ್ ನಲ್ಲಿ ಸಾರ್ಥಕ 25 ವರ್ಷಗಳನ್ನು ಪೊರೈಸಿರುವ ಅಭಿನಯ ಚಕ್ರವರ್ತಿಗೆ ನಿನ್ನೆ ಹೃದಯಸ್ಪರ್ಶಿ ಗೌರವ ಸಂದಿದೆ. ಜಗತ್ತಿನ ಅತಿ ಎತ್ತರದ ಕಟ್ಟಡ ಖ್ಯಾತಿಯ ಬುರ್ಜ್  ಖಲೀಫಾದ ಮೇಲೆ ಕಿಚ್ಚನ ಭಾವಚಿತ್ರ ಹಾಗೂ ಹೊಸ ಚಿತ್ರ ವಿಕ್ರಾಂತ್ ರೋಣ ಲೋಗೋ ಲಾಂಚ್ ನಡೆದಿದೆ. ಈ ಸಂಭ್ರಮದ ನಡುವೆಯೇ ಸುದೀಪ್ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾಗಳ ಭರಾಟೆ ನಡುವೆ ವಿಭಿನ್ನವಾಗಿ ಪ್ಯಾನ್ ವರ್ಲ್ಡ್ ಸಿನಿಮಾವಾಗಿ ಮೂಡಿಬರುತ್ತಿದೆ ವಿಕ್ರಾಂತ್ ರೋಣ. ಟೈಟಲ್ ಲಾಂಚ್ ಬುರ್ಜ್ ಖಲೀಫಾದಲ್ಲಿ ನಡೆದಿದ್ದು, ಚಿತ್ರದ ನೀರಿಕ್ಷೆ ಇನ್ನಷ್ಟು ಹೆಚ್ಚಿದೆ. ಸ್ಯಾಂಡಲ್ ವುಡ್ ನಲ್ಲಿ ಸಿಲ್ವರ್ ಜ್ಯುಬಲಿ ಸಂಭ್ರಮದಲ್ಲಿರೋ ಸುದೀಪ್ ಎಲ್ಲ ಖುಷಿಗಳ ಮಧ್ಯೆಯೇ ಅಭಿಮಾನಿಗಳಿಗೆ ವಿಕ್ರಾಂತ್ ರೋಣ ರಿಲೀಸ್ ಡೇಟ್ ನ್ನು ಅನೌನ್ಸ್ ಮಾಡಿದ್ದಾರೆ.

ಅಗಸ್ಟ್ ಅಂತ್ಯ ಹಾಗೂ ಸಪ್ಟೆಂಬರ್ ನಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ಸುದೀಪ್ ಮಾಹಿತಿ ನೀಡಿದ್ದಾರೆ. ಸಪ್ಟೆಂಬರ್ ನ ಗೌರಿ-ಗಣೇಶ್ ಹಬ್ಬದ ವೇಳೆಗೆ ವಿಕ್ರಾಂತ್ ರೋಣ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, 3 ಹಾಡುಗಳ ಶೂಟಿಂಗ್ ಹಾಗೂ ಸಿನಿಮಾದ ತ್ರಿಡಿ ವರ್ಕ್ ಗಳು ನಡೆಯುತ್ತಿದೆ.

ನಿರೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣಗೆ ಮೊದಲು ಫ್ಯಾಂಟಮ್ ಎಂದು ಹೆಸರಿಡಲಾಗಿತ್ತು. ಆದರೆ ವಿಕ್ರಾಂತ್ ರೋಣ ಹೆಸರು ಹೆಚ್ಚು ಮೆಚ್ಚುಗೆ ಗಳಿಸಿದ್ದರಿಂದ ಚಿತ್ರತಂಡ ಹೆಸರು ಬದಲಾಯಿಸಿದೆ. ಜಾಕ್ ಮಂಜು ಬಂಡವಾಳ ಹೂಡಿರುವ ಈ ಚಿತ್ರ ವರ್ಲ್ಡ್ ವೈಡ್ 11 ಭಾಷೆಗಳಲ್ಲಿ ರಿಲೀಸ್ ಆಗಲಿದೆ.

ಜಗತ್ತಿನ ಎತ್ತರದ ಬುರ್ಜ್ ಖಲೀಫಾದ ಮೇಲೆ ಚಿತ್ರದ ಟೈಟಲ್ ಜೊತೆಗೆ ಕನ್ನಡದ ಬಾವುಟವನ್ನು ಹಾರಿಸಲಾಗಿದ್ದು, ಇದನ್ನು ನೋಡಿ ಹಾಗೂ ಅಭಿಮಾನಿಗಳ ಖುಷಿ ನೋಡಿ ನನಗೂ ಖುಷಿಯಾಗಿದೆ ಎಂದಿದ್ದಾರೆ ಅಭಿನಯ ಚಕ್ರವರ್ತಿ ಸುದೀಪ್.

Comments are closed.