ಕ್ರಿಸ್ಮಸ್ ಪ್ರಿಪ್ರರೇಶನ್ ಆರಂಭಿಸಿದ ರಾಬರ್ಟ್…! ಕೇಕ್ ಮಿಕ್ಸಿಂಗ್ ಗೂ ಸೈ ಎಂದ ಡಿ ಬಾಸ್…!

ಸಧ್ಯ ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಫ್ರೀ ಟೈಂ ಎಂಜಾಯ್ ಮಾಡ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಸ್ನೇಹಿತರ ಜೊತೆ ಲಾಂಗ್ ರೈಡ್ ಹೋಗಿದ್ದ ದಚ್ಚು ಈಗ ಸಧ್ಯ ಪ್ರಿನ್ಸ್ ಕಿಚನ್ ಗೆ ನುಗ್ಗಿ ಕೇಕ್ ಸಿದ್ಧ ಮಾಡ್ತಿದ್ದು ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಆದರೇ ಕೊರೋನ ಆಫ್ಟರ್ ಎಫೆಕ್ಟ್ ನೋಡಿಕೊಂಡು ಥಿಯೇಟರ್ ಗೆ ಜನ ಬರಲು ಆರಂಭಿಸಿದ ಮೇಲೆ ಚಿತ್ರ ರಿಲೀಸ್ ಗೆ ಚಿತ್ರತಂಡ ನಿರ್ಧರಿಸಿದೆ. ಹೀಗಾಗಿ ಸಧ್ಯ ದಚ್ಚು ಫುಲ್ ಫ್ರೀಯಾಗಿದ್ದಾರೆ.

ಮುಂದಿನ ಸಿನಿಮಾ ಶೂಟಿಂಗ್ ಗೂ ಮುನ್ನ ಶಾರ್ಟ್ ಬ್ರೇಕ್ ತಗೊಂಡಿರೋ ದಚ್ಚು ಮೈಸೂರಿನ ತೋಟದ ಮನೆಯಲ್ಲಿ ಒಂದಷ್ಟು ಸಮಯ ಕಳೆದಿದ್ದಾರೆ. ಬಳಿಕ ತಮ್ಮ ಬಾಯ್ಸ್ ಗ್ಯಾಂಗ್ ಕಟ್ಟಿಕೊಂಡು ಮೈಸೂರಿನಿಂದ ಕೊಡಗಿನ ತನಕ ಜಾಲಿ ಬೈಕ್ ರೈಡ್ ಹೋಗಿ ಬಂದಿದ್ದಾರೆ.

ಜಾಲಿ ರೈಡ್ ಮಧ್ಯೆ ರಸ್ತೆಯಲ್ಲಿ ಸಿಕ್ಕಿ ಅಭಿಮಾನಿ ಮನೆಗೇ ಹೋಗಿ ಅವರಿಗೆ ಸಪ್ರೈಸ್ ನೀಡಿದ್ದಾರೆ. ಇಂತಿಪ್ಪ ದರ್ಶನ್ ಇದೀಗ ಕ್ರಿಸ್ಮಸ್ ಸಿದ್ಧತೆಗೆ ಕೈಜೋಡಿಸಿದ್ದಾರೆ‌. ಇದೇನು ಕ್ರಿಸ್ಮಸ್ ಸಿದ್ಧತೆಗೆ ದರ್ಶನ್ ಅಂದ್ರಾ…?

ಡಿಸೆಂಬರ್ ಗೂ ಮುನ್ನ ನಡೆಯೋ ಕೇಕ್‌ಮೇಕಿಂಗ್ ಇವೆಂಟ್ ನಲ್ಲಿ ನಟ ದರ್ಶನ್ ಭಾಗಿಯಾಗಿದ್ದಾರೆ. ಮೈಸೂರಿನ ತಮ್ಮ ಆಪ್ತ ಪ್ರಿನ್ಸ್ ಸಂದೇಶ್ ಹೊಟೇಲ್ ನಲ್ಲಿ ನಡೆದ ಕೇಕ್ ಮಿಕ್ಸಿಂಗ್ ನಲ್ಲಿ ಪಾಲ್ಗೊಂಡ ದರ್ಶನ್ ಒಣಹಣ್ಣುಗಳನ್ನು ಮಿಕ್ಸ್ ಮಾಡಿ ಕ್ರಿಸ್ಮಸ್ ಕೇಕ್ ಬೇಕಿಂಗ್ ನ ಖುಷಿ ಹೆಚ್ಚಿಸಿದ್ದಾರೆ.

ಸಧ್ಯ ದರ್ಶನ್ ನಾಟಿ ಕೋಳಿ ಸಾರು ಮಾಡೋದನ್ನು ಮಾತ್ರ ನೋಡಿದ್ದ ಅಭಿಮಾನಿಗಳು ಕೇಕ್‌ಮಿಕ್ಸಿಂಗ್ ಪೋಟೋ ನೋಡಿ ಸಖತ್ ಖುಷಿಯಾಗಿದ್ದಾರೆ‌. ಈ ಕೇಕ್ ಮಿಕ್ಸಿಂಗ್ ಪ್ರಿನ್ಸ್ ಸಂದೇಶ ಕೂಡ ಸಾಥ್ ನೀಡಿದ್ದಾರೆ.

ದರ್ಶನ್ ಬಿಡುಗಡೆಗೆ ಸಿದ್ಧ ವಾಗಿರುವ ರಾಬರ್ಟ್ ಕ್ರಿಸ್ಮಸ್ ಗೆ ಬಿಡುಗಡೆಯಾಗೋ‌ ನೀರಿಕ್ಷೆ ಇತ್ತು. ಆದರೇ ಕೊರೋನ ನಿಯಂತ್ರಣಕ್ಕೆ ಬಂದಿದ್ದರೂ ಜನರು ಥಿಯೇಟರ್ ನತ್ತ ಮುಖಮಾಡದೇ ಇರೋದರಿಂದ ಸಿನಿಮಾ ರಿಲೀಸ್ ಗೆ ಚಿತ್ರತಂಡ ಮನಸ್ಸು ಮಾಡಿಲ್ಲ. ಹೀಗಾಗಿ ರಾಬರ್ಟ್ ಚಿತ್ರದ ನಾಯಕ ದರ್ಶನ್ ಕ್ರಿಸ್ಮಸ್ ಗೆ ಚಿತ್ರದ ಬದಲು ಕೇಕ್ ಮಾತ್ರ ಕೊಡ್ತಿದ್ದಾರೆ.

Comments are closed.