ಡ್ರಗ್ಸ್ ಮಾಫಿಯಾದಲ್ಲಿ ನಟ, ನಟಿಯರೂ ಇದ್ದಾರೆ : ಸಿಸಿಬಿಯಿಂದ ಇಂದ್ರಜಿತ್ ವಿಚಾರಣೆ ಮುಕ್ತಾಯ

0

ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳ ಮುಂದೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದೂ ಕೂಡ ಹಾಜರಾಗಿದ್ದಾರೆ. ಸುಮಾರು 40 ನಿಮಿಷಗಳ ಕಾಲ ಸಿಸಿಬಿ ಜಂಟೀ ಆಯುಕ್ತ ಸಂದೀಪ್ ಪಾಟೀಲ್ ಅವರ ಮುಂದೆ ವಿಚಾರಣೆಯನ್ನು ಎದುರಿಸಿದ ಇಂದ್ರಜಿತ್ ಲಂಕೇಶ್, ಡ್ರಗ್ಸ್ ಮಾಫಿಯಾಕ್ಕೆ ಸಂಬಂಧಿಸಿದಂತೆ ಈ ಹಿಂದೆ ನೀಡಿದ್ದ ಹೇಳಿಕೆಗಳಿಗೆ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.

ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿರುವ ನಟ, ನಟಿಯರ ಕುರಿತು ಮಾಹಿತಿಯನ್ನು ನೀಡಿರುವ ಇಂದ್ರಜಿತ್ ಲಂಕೇಶ್, ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಕೂಡ ಸಿಸಿಬಿ ಅಧಿಕಾರಿಗಳಿಗೆ ನೀಡಿದ್ದಾರೆ. ಸಿಸಿಬಿ ವಿಚಾರಣೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಇಂದ್ರಜಿತ್ ಲಂಕೇಶ್, ನಾನು ಈ ಹಿಂದೆ ನೀಡಿದ ಹೇಳಿಕೆಗಳಿಗೆ ಈಗಲೂ ಬದ್ದನಾಗಿದ್ದೇನೆ.

ಸ್ಯಾಂಡಲ್ ವುಡ್ ನ ವಾಸ್ತವ ಸ್ಥಿತಿಯನ್ನು ಸಿಸಿಬಿ ಅಧಿಕಾರಿಗಳಿಗೆ ತಿಳಿಸಿದ್ದೇನೆ. ನನ್ನ ಹೇಳಿಕೆಗಳಿಗೆ ಸಂಬಂಧಿಸಿದ ದಾಖಲೆಗಳನ್ನೂ ನೀಡಿದ್ದೇನೆ. ಡ್ರಗ್ಸ್ ಮಾಫಿಯಾದಲ್ಲಿ ನಟ, ನಟಿಯರೂ ಕೂಡ ಭಾಗಿಯಾಗಿದ್ದಾರೆ. ಈ ಕುರಿತು ಸಿಸಿಬಿ ಅಧಿಕಾರಿಗಳು ತನಿಖೆಯನ್ನು ನಡೆಸಿ, ತಪ್ಪಿತಸ್ಥರನ್ನು ಬಯಲಿಗೆ ತರುತ್ತಾರೆ ಎಂದಿದ್ದಾರೆ.

ನಾನು ಓರ್ವ ಮಾಹಿತಿದಾರನಾಗಿ ನನ್ನ ಕೆಲಸವನ್ನು ಮಾಡುತ್ತಿದ್ದೇನೆ. ಇಂಡಸ್ಟ್ರೀ ಒಳಿತಿಗಾಗಿ ಹಾಗೂ ಯುವ ಜನಾಂಗದ ಒಳಿತಿಗಾಗಿ ನನ್ನೆಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ. ಸಿಸಿಬಿ ಅಧಿಕಾರಿಗಳಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಕ್ಕೆ ಸಿದ್ದನಿದ್ದೇನೆ ಎಂದಿದ್ದಾರೆ.

Leave A Reply

Your email address will not be published.