ಕಿಚ್ಚನ ಹುಟ್ಟುಹಬ್ಬಕ್ಕೆ ಕೋಟಿಗೊಬ್ಬ-3 ಗಿಫ್ಟ್ : ಕೆಲವೇ ಗಂಟೆಗಳಲ್ಲಿ ದಾಖಲೆಯ ವೀಕ್ಷಣೆ

0

ಸ್ಯಾಂಡಲ್ ವುಡ್ ಬಾದ್ ಶಾ, ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ.

ಕಿಚ್ಚನ ಹುಟ್ಟುಹಬ್ಬವನ್ನು ಅಭಿಮಾನಿಗಳು ವರ್ಷಂಪ್ರತಿ ವಿಶಿಷ್ಟ, ವಿಭಿನ್ನವಾಗಿ ಆಚರಿಸುತ್ತಾರೆ. ಆದ್ರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಬರ್ತಡೇ ಆಚರಿಸಿಕೊಂಡಿಲ್ಲ ಕಿಚ್ಚ ಸುದೀಪ್.

ಇದೀಗ ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ ಕೋಟಿಗೊಬ್ಬ ಚಿತ್ರದ ಟೀಸರ್ ಬಿಡುಗಡೆಯಾಗಿದೆ, ಸುಮಾರು ಒಂದೂವರೆ ನಿಮಿಷದ ಟೀಸರ್ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ. ಕೆಲವೇ ಗಂಟೆಗಳಲ್ಲಿ 1.3 ಮಿಲಿಯನ್ ವೀಕ್ಷಣೆ ಕಂಡಿದೆ.

ಕೋಟಿಗೊಬ್ಬ 3 ಸಿನಿಮಾ ಹೇಗಿದೆ ಅನ್ನೋದ್ರ ಕುರಿತು ಟೀಸರ್ ಸಂಪೂರ್ಣವಾದ ಮಾಹಿತಿಯನ್ನು ನೀಡುವಂತೆ ಸಿದ್ದಪಡಿಸಲಾಗಿದೆ. ಸಾಂಗ್, ಕಾಮಿಡಿ, ಪೈಟಿಂಗ್ ಸೇರಿದಂತೆ ಎಲ್ಲವನ್ನೂ ತೋರಿಸುವ ಪ್ರಯತ್ನ ಮಾಡಲಾಗಿದೆ.

ಇನ್ನು ಸಿನಿಮಾದಲ್ಲಿ ಕಿಚ್ಚ ಸುದೀಪ್‌ಗೆ ನಾಯಕಿಯಾಗಿ ಮಲಯಾಳಂ ನಟಿ ಮಡೋನ್ನಾ ಸೆಬಾಸ್ಟಿಯನ್ ಕಾಣಿಸಿಕೊಂಡಿದ್ದಾರೆ. ರವಿಶಂಕರ್, ತಬಲಾ ನಾಣಿ, ರವಿಶಂಕರ್‌ ಗೌಡ, ಐಟಂ ಸಾಂಗ್‌ನಲ್ಲಿ ಅಶಿಕಾ ರಂಗನಾಥ್ ಬಣ್ಣ ಹಚ್ಚಿದ್ದಾರೆ.

ಬಾಲಿವುಡ್‌ ಕಲಾವಿದರಾದ ಅಫ್ತಬ್ ಶಿವದಾಸನಿ, ಶ್ರದ್ದಾ ದಾಸ್‌, ನವಾಬ್ ಷಾ ಕೂಡ ಇದ್ದಾರೆ. ಶಿವ ಕಾರ್ತಿಕ್ ‘ಕೋಟಿಗೊಬ್ಬ 3’ಗೆ ನಿರ್ದೆಶನ ಮಾಡಿದ್ದಾರೆ. ಸೂರಪ್ಪ ಬಾಬು ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದಾರೆ.

Leave A Reply

Your email address will not be published.