ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಕ್ಕೆ ತುತ್ತಾಗಿರುವ ನಟಿ ರಾಗಿಣಿ ಸೇರಿ ಐವರು ಡ್ರಗ್ಸ್ ಪೆಡ್ಲರ್ ಗಳು ಜೈಲಿಗೆ ಸೇರಿದ್ದಾರೆ. ಇದೀಗ ಸಿಸಿಬಿ ವಶದಲ್ಲಿರುವ ನಟಿ ಸಂಜನಾ ಗರ್ಲಾನಿಯನ್ನು ಮತ್ತೆ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.
ಸಿಸಿಬಿ ವಶದಲ್ಲಿರುವ ಸಂಜನಾ ಪೊಲೀಸ್ ಕಸ್ಟಡಿ ಅವಧಿಯಲ್ಲಿ ವಿಚಾರಣೆಗೆ ಸರಿಯಾಗಿ ಸಹಕರಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ಸಂಜನಾ ಅವರನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳ ಮನವಿಯನ್ನು ಪುರಸ್ಕರಿಸಿರುವ 1ನೇ ಎಸಿಎಂಎಂ ನ್ಯಾಯಾಲಯ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಕೇವಲ ಸಂಜನಾ ಗರ್ಲಾನಿ ಮಾತ್ರವಲ್ಲದೇ ಪ್ರಕರಣ ಪ್ರಮುಖ ಆರೋಪಿಗಳಾಗಿರುವ ವೀರೇನ್ ಖನ್ನಾ ಮತ್ತು ರವಿಶಂಕರ್ನನ್ನೂ ಸಿಸಿಬಿ ವಶಕ್ಕೆ ನೀಡಲಾಗಿದೆ.
ಈಗಾಗಲೇ ನ್ಯಾಯಾಲಯ ನಟಿ ರಾಗಿಣಿ, ಲೂಮ್ ಪೆಪರ್, ರಾಹುಲ್, ನಿಯಾಜ್, ಪ್ರಶಾಂತ್ ರಾಂಕಾನಿಗೆ ನ್ಯಾಯಾಂಗ ಬಂಧನ ವಿಧಿಸಿದ ಹಿನ್ನೆಲೆಯಲ್ಲಿ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ.