ಖ್ಯಾತ ಕಿರುತೆರೆ ನಟಿ ವಿಜೆ ಚಿತ್ರಾ ಪಂಚತಾರಾ ಹೋಟೆಲ್ ನಲ್ಲಿ ಆತ್ಮಹತ್ಯೆ

ಚೆನ್ನೈ : ತಮಿಳಿನ ಜನಪ್ರಿಯ ಪಾಂಡಿಯನ್ ಸ್ಟೋರ್ಸ್ ನಲ್ಲಿ ಮುಲ್ಲೈ ಪಾತ್ರದಲ್ಲಿ ನಟಿಸಿ ಮನೆಮಾತಾಗಿದ್ದ ಖ್ಯಾತ ಕಿರುತೆರೆ ನಟಿ ವಿಜೆ ಚಿತ್ರಾ (28 ವರ್ಷ) ಪಂಚತಾರಾ ಹೋಟೆಲ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇವಿಪಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಮುಗಿಸಿ ರಾತ್ರಿ 2.30ರ ಸುಮಾರಿಗೆ ನಜರೆತ್ ಪೆಟ್ಟೈನ ಪಂಚತಾರಾ ಹೋಟೆಲ್ ನಲ್ಲಿ ನಟಿ ಚಿತ್ರಾ ತಂಗಿದ್ದರು. ಆದರೆ ಬೆಳಿಗ್ಗೆ ಎದ್ದು ನೋಡಿದಾಗ ಹೋಟೆಲ್ ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಚಿತ್ರಾ ಅವರ ಮೃತದೇಹ ಪತ್ತೆಯಾಗಿದೆ.
ಕಳೆದ ಕೆಲ ತಿಂಗಳ ಹಿಂದೆ ಚಿತ್ರಾ ಅವರು ಉದ್ಯಮಿ ಹೇಮಂತ್ ಜೊತೆಗೆ ನಿಶ್ವಿತಾರ್ಥ ಮಾಡಿಕೊಂಡಿದ್ದರು. ಅಲ್ಲದೇ ಅವರೊಂದಿಗೆ ವಾಸಿಸುತ್ತಿದ್ದರು. ಚಿತ್ರಾ ಹಲವು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿಯೂ ಕೆಲಸ ಮಾಡುತ್ತಿದ್ದರು.

ಪ್ರಸ್ತುತ ಅವರು ಪಾಂಡಿಯನ್ ಸ್ಟೋರ್ಸ್ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ತನ್ನ ಮುಲ್ಲೈ ಪಾತ್ರದ ಮೂಲಕ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದರು. ಇನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಸಕ್ರಿಯವಾಗಿದ್ದ ಚೈತ್ರಾ, ತನ್ನ ಫೋಟೋ ಹಾಗೂ ಕೆಲವೊಂದು ಪೋಸ್ಟ್ ಗಳನ್ನು ಆಗಾಗ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದರು. ಅಲ್ಲದೆ ಕೆಲವೊಮದು ಕಾಮಿಡಿ ಪೋಸ್ಟ್ ಗಳನ್ನು ಹಾಕುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದರು.

ಒಟ್ಟಿನಲ್ಲಿ ಚಿತ್ರಾ ಆತ್ಮಹತ್ಯೆ ವಿಚಾರ ನೋವುಂಟು ಮಾಡಿದ್ದು, ಖಿನ್ನತೆಯೇ ಚಿತ್ರಾ ಸೂಸೈಡ್ ಗೆ ಕಾರಣ ಎಂದು ಹೇಳಲಾಗುತ್ತಿದೆ. ಸದ್ಯ ಚಿತ್ರಾ ಆತ್ಮಹತ್ಯೆಗೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಬಿ ಮಿಡಿಯುತ್ತಿದ್ದಾರೆ.

Comments are closed.