ಕೊರೊನಾ ಸೋಂಕಿತ ಸ್ನಾನ, ತೆಕ್ಕಟ್ಟೆ ಸೀಲ್ ಡೌನ್ : ಪೆಟ್ರೋಲ್ ಬಂಕ್, ಸಾಸ್ತಾನ ಟೋಲ್ ಸಿಬ್ಬಂಧಿಗೆ ಕ್ವಾರಂಟೈನ್ !

0

ಮಂಡ್ಯದ ವ್ಯಕ್ತಿಯೋರ್ವನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಆತನ ಟ್ರಾವೆಲ್ ಹಿಸ್ಟರಿ ಉಡುಪಿ ಜಿಲ್ಲೆಯೂ ಸೇರಿಕೊಂಡಿತ್ತು. ಮುಂಬೈನಿಂದ ಕರ್ಜೂರ ಸಾಗಾಟ ಮಾಡುತ್ತಿದ್ದ ಲಾರಿಯಲ್ಲಿ ವ್ಯಕ್ತಿ ಕದ್ದುಮುಚ್ಚಿ ಮುಂಬೈನಿಂದ ಮಂಡ್ಯ ಸೇರಿಕೊಂಡಿದ್ದ ಅನ್ನುವ ಸ್ಪೋಟಕ ಮಾಹಿತಿ ಬಯಲಾಗಿತ್ತು. ಅಲ್ಲದೇ ವ್ಯಕ್ತಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತೆಕ್ಕಟ್ಟೆಯ ಪೆಟ್ರೋಲ್ ಬಂಕ್ ನಲ್ಲಿಯೇ ವ್ಯಕ್ತಿ ಸ್ನಾನ ಮಾಡಿದ್ದಾನೆ ಅನ್ನೋದು ದೃಢಪಟ್ಟಿದೆ.

ಅಲ್ಲದೇ ಹಲವು ಗಂಟೆಗಳ ಕಾಲ ಆತ ಪೆಟ್ರೋಲ್ ಬಂಕ್ ಸುತ್ತಮುತ್ತಲೂ ತಿರುಗಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಆರೋಗ್ಯಾಧಿಕಾರಿಗಳು ಪೆಟ್ರೋಲ್ ಬಂಕ್ ಸುತ್ತಮುತ್ತಲಿನ 3 ಕಿ.ಮೀ. ವ್ಯಾಪ್ತಿಯನ್ನು ಸೀಲ್ ಡೌನ್ ಮಾಡಲಾಗಿದೆ. ಪೆಟ್ರೋಲ್ ಬಂಕಿನ ಮಾಲೀಕ ಸೇರಿ 7 ಮಂದಿ ಸಿಬ್ಬಂಧಿಗಳನ್ನು ಹಾಗೂ ಸಾಸ್ತಾನ ಟೋಲ್ ಗೇಟ್ ನಲ್ಲಿ ಕರ್ತವ್ಯ ನಿರ್ವಹಿಸಿದ್ದ 6 ಮಂದಿ ಸಿಬ್ಬಂಧಿಗಳನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

ಮಂಡ್ಯ ವ್ಯಕ್ತಿ ತಾನು ಬೀಚ್ ಸಮೀಪದ ಪೆಟ್ರೋಲ್ ಬಂಕಿನಲ್ಲಿ ಸ್ನಾನ ಮಾಡಿರುವುದಾಗಿ ಬಾಯ್ಬಿಟ್ಟಿ. ಈ ಹಿನ್ನೆಲೆಯಲ್ಲಿ ಶಿರೂರಿನಿಂದ ಸಾಸ್ತಾನದ ವರೆಗಿನ ಎಲ್ಲಾ ಪೆಟ್ರೋಲ್ ಬಂಕ್ ಗಳ ಸಿಸಿ ಕ್ಯಾಮರಾವನ್ನು ಪರಿಶೀಲನೆ ನಡೆಸಲಾಯಿತು. ಆರಂಭದಲ್ಲಿ ತ್ರಾಸಿ ಪೆಟ್ರೋಲ್ ಬಂಕ್ ನಲ್ಲಿ ಸ್ನಾನ ಮಾಡಿದ್ದ ಅನ್ನೋ ಸುದ್ದಿ ಹರಿದಾಡಿತ್ತು. ಅಂತಿಮವಾಗಿ ತೆಕ್ಕಟ್ಟೆಯ ಪೆಟ್ರೋಲ್ ಬಂಕ್ ನಲ್ಲಿಯೇ ಕೊರೊನಾ ಸೋಂಕಿತ ವ್ಯಕ್ತಿ ಸ್ನಾನ ಮಾಡಿರುವುದು ದೃಢಪಟ್ಟಿದೆ.

ಈ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ಬೈಂದೂರು ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪ್ರೇಮಾನಂದ ಹಾಗೂ ಕೋಟ ಪಿಎಸ್ಐ ನಿತ್ಯಾನಂದ ಗೌಡ ಹಾಗೂ ಸಿಬ್ಬಂದಿಗಳು ತಡರಾತ್ರಿಯವರೆಗೂ ತೆಕ್ಕಟ್ಟೆಯಲ್ಲಿದ್ದು ಪರಿಶೀಲನೆ ನಡೆಸಿದ್ದಾರೆ. ಕೊರೊನಾ ಸೋಂಕಿತನ ಸಂಪರ್ಕದಲ್ಲಿದ್ದವರನ್ನು ರಾತ್ರಿಯೇ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

Leave A Reply

Your email address will not be published.