ಸಹಕಾರಿ ಬ್ಯಾಂಕುಗಳಲ್ಲಿ FD ಇಡುವುದು ಸೂಕ್ತವೇ ? ನಿಮ್ಮ ಹಣಕ್ಕೆ ಹೊಣೆ ಯಾರು ?

cooperative banks fixed deposit: ಸಾಮಾನ್ಯವಾಗಿ ಅಧಿಕ ಬಡ್ಡಿ ಸಿಗುತ್ತೆ ಅನ್ನೋ ಕಾರಣಕ್ಕೆ ಬಹುತೇಕರು ಸಹಕಾರಿ ಬ್ಯಾಂಕುಗಳಲ್ಲಿ (Co-operative Banks) ಠೇವಣಿ (FD)ಇಡ್ತಾರೆ. ರಾಷ್ಟ್ರೀಯ ಕೃತ ಬ್ಯಾಂಕು ಹೊರತು ಪಡಿಸಿ, ಸಹಕಾರಿ ಬ್ಯಾಂಕುಗಳಲ್ಲಿ ಠೇವಣಿ ಇಡುವ ಬಗ್ಗೆ ಹಲವರಿಗೆ ಗೊಂದಲವಿದೆ.

ಸಹಕಾರಿ ಬ್ಯಾಂಕುಗಳಲ್ಲಿ ಎಫ್‌ಡಿ ಇಡುವುದು ಸೂಕ್ತವೇ ?

ಸಹಕಾರಿ ಬ್ಯಾಂಕುಗಳು ಎಫ್‌ಡಿ ಮೇಲೆ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕುಗಳು ನೀಡುವ ಬಡ್ಡಿದರಕ್ಕಿಂತ ಅಧಿಕ ದರವನ್ನು ನೀಡುತ್ತವೆ. ಇದೇ ಕಾರಣದಿಂದಾಗಿ ಸಾಕಷ್ಟು ಮಂದಿ ಸಹಕಾರಿ ಸಂಘಗಳಲ್ಲಿ ಠೇವಣಿ ಇಡುತ್ತಾರೆ.

ಹೆಚ್ಚಿನ ಬಡ್ಡಿ- ಹೆಚ್ಚು ಅಪಾಯ: ಸಾಮಾನ್ಯವಾಗಿ, ಅತ್ಯಧಿಕ ಬಡ್ಡಿದರ ನೀಡುವುದು ನಿಮ್ಮ ಹೂಡಿಕೆಗೆ ಅಪಾಯಕಾರಿ. ಸಹಕಾರಿ ಬ್ಯಾಂಕುಗಳು ಸಾರ್ವಜನಿಕ ವಲಯದ ಬ್ಯಾಂಕುಗಳು ಅಥವಾ ದೊಡ್ಡ ಖಾಸಗಿ ಬ್ಯಾಂಕುಗಳಿಗಿಂತ ಕಡಿಮೆ ನಿಯಂತ್ರಣ ಹೊಂದಿರುತ್ತವೆ.

ನಿಯಂತ್ರಣ : ಸಹಕಾರಿ ಬ್ಯಾಂಕುಗಳು ಭಾರತದಲ್ಲಿ ಆರ್‌ಬಿಐ (RBI -ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ) ಮತ್ತು ಕರ್ನಾಟಕ ರಾಜ್ಯ ಸಹಕಾರಿ ಸಂಘಗಳ ರಿಜಿಸ್ಟ್ರಾರ್ (Registrar of Co-operative Societies) ನಿಯಂತ್ರಣಕ್ಕೆ ಒಳಪಡಲಿದ್ದಾರೆ.

ಆರ್ಥಿಕ ಸ್ಥಿತಿ: ಕೆಲವು ಸಹಕಾರಿ ಬ್ಯಾಂಕುಗಳು ಆರ್ಥಿಕವಾಗಿ ಅಷ್ಟು ಬಲಿಷ್ಠವಾಗಿರುವುದಿಲ್ಲ, ಕೆಲವು ಸಂದರ್ಭಗಳಲ್ಲಿ ಆರ್ಥಿಕ ತೊಂದರೆಗಳನ್ನು ಎದುರಿಸಿರುವ ಉದಾಹರಣೆಗಳಿವೆ.

ಸೊಸೈಟಿಗಳಲ್ಲಿ ದೊಡ್ಡ ಮೊತ್ತದ ಹಣವನ್ನು ಠೇವಣಿಯಾಗಿ ಇರಿಸಿದ್ದ ಠೇವಣಿದಾರರಿಗೆ ಹಣ ಹಿಂಪಡೆಯುವಲ್ಲಿ ವಿಳಂಬವಾಗಬಹುದು.

cooperative banks deposit fixed : ಗ್ರಾಹಕರ ಹಣಕ್ಕೆ ಹೊಣೆ ಯಾರು ? (ಸುರಕ್ಷತೆ ಮತ್ತು DICGC ಕವರೇಜ್)

ಸಹಕಾರಿ ಬ್ಯಾಂಕುಗಳಲ್ಲಿ ನೀವು ಠೇವಣಿ ಇಡುವ ಹಣದ ಸುರಕ್ಷತೆ, ಸಾಲ ಖಾತರಿ ನಿಗಮ (Deposit Insurance and Credit Guarantee Corporation – DICGC) ಪ್ರಮುಖ ಪಾತ್ರ ವಹಿಸುತ್ತದೆ.

DICGC ಕವರೇಜ್ : ಡಿಐಸಿಜಿಸಿ (DICGC) ಇದು ಆರ್‌ಬಿಐ ( RBI ) ಯ ಸಂಪೂರ್ಣ ಸ್ವಾಮ್ಯದ ಅಂಗ ಸಂಸ್ಥೆಯಾಗಿದೆ.

ಭಾರತದ ಎಲ್ಲಾ ವಾಣಿಜ್ಯ ಬ್ಯಾಂಕುಗಳು (ಸಣ್ಣ ಹಣಕಾಸು ಬ್ಯಾಂಕುಗಳು ಸೇರಿದಂತೆ) ಹಾಗೂ ಕರ್ನಾಟಕ ರಾಜ್ಯ ಹಾಗೂ ಕೇಂದ್ರ ಮತ್ತು ನಗರ ಸಹಕಾರಿ ಬ್ಯಾಂಕುಗಳಲ್ಲಿ ಇರುವ ಠೇವಣಿಗಳಿಗೆ ವಿಮಾ ರಕ್ಷಣೆ ನೀಡುತ್ತದೆ.

ವಿಮಾ ಮಿತಿ: DICGC ಪ್ರತಿ ಬ್ಯಾಂಕಿನಲ್ಲಿ, ಪ್ರತಿ ಠೇವಣಿದಾರರಿಗೆ (ಒಂದೇ ಹಕ್ಕಿನಲ್ಲಿ ಮತ್ತು ಒಂದೇ ಸಾಮರ್ಥ್ಯದಲ್ಲಿ ಹೊಂದಿರುವ ಎಲ್ಲಾ ಖಾತೆಗಳನ್ನು ಸೇರಿ.

ಅಂದರೆ ಉಳಿತಾಯ ಖಾತೆ, ಪ್ರಸಕ್ತ ಖಾತೆ, FD, RD ಎಲ್ಲಾ ಸೇರಿ), ₹5 ಲಕ್ಷದವರೆಗೆ ವಿಮಾ ರಕ್ಷಣೆ ನೀಡುತ್ತದೆ. ಇದು ಮೂಲ ಮೊತ್ತ ಮತ್ತು ಬಡ್ಡಿ ಎರಡನ್ನೂ ಒಳಗೊಂಡಿರುತ್ತದೆ.

ಹೊಣೆಗಾರಿಕೆ : ನೀವು ಠೇವಣಿ ಇಟ್ಟಿರುವ ಬ್ಯಾಂಕ್‌ ಒಂದೊಮ್ಮೆ ದಿವಾಳಿ ಆದ್ರೆ ಅಥವಾ ಪರವಾನಗಿ ರದ್ದು ಆದ್ರೆ, DICGC ಆ ಠೇವಣಿದಾರರಿಗೆ ಗರಿಷ್ಠ ₹5 ಲಕ್ಷ ರೂಪಾಯಿ ಮೊತ್ತವನ್ನು ಪಾವತಿಸಲು ಹೊಣೆಯಾಗಿರುತ್ತದೆ.

cooperative banks deposit fixed : ಇವುಗಳನ್ನು ನೆನಪಿನಲ್ಲಿಡಿ

₹5 ಲಕ್ಷ ಮಿತಿ: ನಿಮ್ಮ ಠೇವಣಿ ₹5 ಲಕ್ಷಕ್ಕಿಂತ ಹೆಚ್ಚಿದ್ದರೆ, ಬ್ಯಾಂಕ್ ನಿಮ್ಮ ಹಣವನ್ನು ವಾಪಾಸ್‌ ನೀಡಲು ವಿಫಲವಾದರೆ ನೀವು ₹5 ಲಕ್ಷ ಮಾತ್ರ ಮರಳಿ ಪಡೆಯುವಿರಿ.

ಉಳಿದ ಮೊತ್ತವನ್ನು ಮರಳಿ ಪಡೆಯುವುದು ಬ್ಯಾಂಕಿನ ಆಸ್ತಿಗಳ ಲಭ್ಯತೆಯ ಮೇಲೆ ಮತ್ತು ದಿವಾಳಿ ಪ್ರಕ್ರಿಯೆಯ ಮೇಲೆ ಅವಲಂಬಿತವಾಗಿರುತ್ತದೆ, ಇದು ದೀರ್ಘಕಾಲ ತೆಗೆದುಕೊಳ್ಳಬಹುದು.

ಪ್ರಾಥಮಿಕ ಸಹಕಾರಿ ಸಂಘಗಳು (Primary Co-operative Societies):

DICGC ಯ ವಿಮಾ ಕವರೇಜ್‌ಗೆ ಪ್ರಾಥಮಿಕ ಸಹಕಾರಿ ಸಂಘಗಳು ಒಳಪಡುವುದಿಲ್ಲ. ಠೇವಣಿ ಇಡುವ ಮೊದಲು ನೀವು ಯೋಚಿಸಿ

ಯಾವ ರೀತಿಯ ಸಹಕಾರಿ ಸಂಸ್ಥೆಯಲ್ಲಿ ಹೂಡಿಕೆ ಮಾಡುತ್ತಿದ್ದೀರಿ ಎಂದು ಪರಿಶೀಲಿಸುವುದು ಮುಖ್ಯ.

ಇದನ್ನೂ ಓದಿ : ಜನ್ ಧನ್ ಖಾತೆಗಳು ಬಂದ್‌ ಆಗುತ್ತಾ ? ಭಾರತ ಸರಕಾರದ ಗುಡ್‌ನ್ಯೂಸ್‌

ನಗದು ವಿಳಂಬ: ಒಂದು ಸಹಕಾರಿ ಬ್ಯಾಂಕ್ ಆರ್ಥಿಕ ತೊಂದರೆಗೆ ಸಿಲುಕಿ ಆರ್‌ಬಿಐ ನಿಯಂತ್ರಣಕ್ಕೆ ಅಥವಾ ದಿವಾಳಿಗೆ ಒಳಗಾದರೆ, DICGC ಪಾವತಿಗಳನ್ನು ಮಾಡಬಹುದು.

ಹಣ ನಿಮ್ಮ ಕೈ ಸೇರಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಕೆಲವು ಪ್ರಕರಣಗಳಲ್ಲಿ, ಪಾವತಿ ಪಡೆಯಲು ತಿಂಗಳುಗಳು ಅಥವಾ ವರ್ಷಗಳೇ ಬೇಕಾಗಬಹುದು.

ಹೆಚ್ಚಿನ ಬಡ್ಡಿ ಬೇಕಿದ್ದರೆ: ಸಹಕಾರಿ ಬ್ಯಾಂಕುಗಳು FD ಗಳಿಗೆ ಉತ್ತಮ ಬಡ್ಡಿದರಗಳನ್ನು ನೀಡಬಹುದು.

ಸುರಕ್ಷತೆ ಮುಖ್ಯವಾಗಿದ್ದರೆ: ₹5 ಲಕ್ಷದ DICGC ವಿಮಾ ಮಿತಿಯನ್ನು ಯಾವಾಗಲೂ ನೆನಪಿನಲ್ಲಿಡಿ.

ನಿಮ್ಮ ಹೂಡಿಕೆಯು ₹5 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇದ್ದರೆ, ಸಹಕಾರಿ ಬ್ಯಾಂಕುಗಳು ಉತ್ತಮ ಆಯ್ಕೆಯಾಗಿರಬಹುದು (ಆರ್‌ಬಿಐ ನಿಯಂತ್ರಿತ ಬ್ಯಾಂಕ್ ಆಗಿದ್ದರೆ).

ನಿಮ್ಮ ಹೂಡಿಕೆಯು ₹5 ಲಕ್ಷಕ್ಕಿಂತ ಹೆಚ್ಚಿದ್ದರೆ, ಅಪಾಯವನ್ನು ಕಡಿಮೆ ಮಾಡಲು ಹಣವನ್ನು ಒಂದೇ ಸಹಕಾರಿ ಬ್ಯಾಂಕಿನಲ್ಲಿ ಇಡುವ ಬದಲು ವಿವಿಧ ಬ್ಯಾಂಕುಗಳಲ್ಲಿ (ಪ್ರತಿ ಬ್ಯಾಂಕಿನಲ್ಲಿ ₹5 ಲಕ್ಷಕ್ಕಿಂತ ಕಡಿಮೆ) ಹಂಚಿ ಹೂಡಿಕೆ ಮಾಡುವುದು ಉತ್ತಮ.

ಇದು ಸಾರ್ವಜನಿಕ ವಲಯದ ಬ್ಯಾಂಕ್‌ಗಳು, ದೊಡ್ಡ ಖಾಸಗಿ ಬ್ಯಾಂಕ್‌ಗಳು ಮತ್ತು ಸಣ್ಣ ಹಣಕಾಸು ಬ್ಯಾಂಕ್‌ಗಳಲ್ಲಿ FD ಇಡುವುದನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ : ಅಂಚೆ ಇಲಾಖೆ ನೀಡ್ತಿದೆ 50 ಲಕ್ಷದ ಜೀವವಿಮೆ : ಮಾಡಿಸುವುದು ಹೇಗೆ ?

ಸಹಕಾರಿ ಬ್ಯಾಂಕಿನಲ್ಲಿ FD ಇಡುವ ಮೊದಲು, ಆ ಬ್ಯಾಂಕಿನ ಆರ್ಥಿಕ ಸ್ಥಿತಿ, ಹಿಂದಿನ ಕಾರ್ಯಕ್ಷಮತೆ ಮತ್ತು ಅದರ ಮೇಲಿನ ನಿಯಂತ್ರಣದ ಬಗ್ಗೆ ಮಾಹಿತಿ ಪಡೆಯುವುದು ಯಾವಾಗಲೂ ಉತ್ತಮ.

cooperative banks deposit fixed deposits is safe ? Who is responsible for your money in Kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories