ವಿಮಾನ ಟಿಕೆಟ್ ಕ್ಯಾನ್ಸಲ್ ಮಾಡಿದ್ರೆ ಇನ್ಮುಂದೆ ಹಣ ಕಟ್ ಆಗಲ್ಲ: DGCA ಹೊಸ ರೂಲ್ಸ್ ಹೀಗಿದೆ

flight ticket cancellation rules : ನವದೆಹಲಿ: ನೀವು ವಿಮಾನದಲ್ಲಿ ಪ್ರಯಾಣಿಸಲು ಪ್ಲಾನ್ ಮಾಡಿದ್ದೀರಾ ? ಟಿಕೆಟ್ ಬುಕ್ ಮಾಡಿದ ಮೇಲೆ ಏನಾದರೂ ಕಾರಣಕ್ಕೆ ಪ್ರಯಾಣ ರದ್ದು ಮಾಡಬೇಕಾದ ಪರಿಸ್ಥಿತಿ ಬಂದರೆ, ವಿಮಾನಯಾನ ಸಂಸ್ಥೆಗಳು ವಿಧಿಸುವ ಭಾರಿ ಮೊತ್ತದ ಕ್ಯಾನ್ಸಲೇಷನ್ ಶುಲ್ಕಕ್ಕೆ ಹೆದರಬೇಕಿಲ್ಲ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಪ್ರಯಾಣಿಕರ ಹಿತದೃಷ್ಟಿಯಿಂದ ಹೊಸ ರೀಫಂಡ್ ನಿಯಮಗಳನ್ನು (Revised Refund Norms) ಜಾರಿಗೆ ತಂದಿದೆ.
48 ಗಂಟೆಗಳ ಕಾಲ ವಿಮಾನ ಟಿಕೆಟ್ ‘ಉಚಿತ’ ರದ್ದತಿ ಅವಕಾಶ
ಹೊಸ ನಿಯಮದ ಪ್ರಕಾರ, ಪ್ರಯಾಣಿಕರು ವಿಮಾನದ ಟಿಕೆಟ್ ಬುಕ್ ಮಾಡಿದ 48 ಗಂಟೆಗಳ ಒಳಗೆ (Look-in Period) ಆ ಟಿಕೆಟ್ ಅನ್ನು ರದ್ದುಗೊಳಿಸಿದರೆ ಅಥವಾ ಅದರಲ್ಲಿ ಬದಲಾವಣೆ (Reschedule) ಮಾಡಿದರೆ ಯಾವುದೇ ಹೆಚ್ಚುವರಿ ಕ್ಯಾನ್ಸಲೇಷನ್ ಶುಲ್ಕವನ್ನು ನೀಡಬೇಕಿಲ್ಲ. ಒಂದು ವೇಳೆ ನೀವು ಟಿಕೆಟ್ ದಿನಾಂಕ ಬದಲಿಸಿದರೆ, ಕೇವಲ ವಿಮಾನದ ದರದಲ್ಲಿನ ವ್ಯತ್ಯಾಸವನ್ನು (Fare Difference) ಮಾತ್ರ ಪಾವತಿಸಬೇಕಾಗುತ್ತದೆ.
Also Read : ಬ್ಯಾಂಕ್ ಗ್ರಾಹಕರ ಗಮನಕ್ಕೆ: ಮಾರ್ಚ್ನಲ್ಲಿ ಕರ್ನಾಟಕದಲ್ಲಿ ಬ್ಯಾಂಕ್ಗಳಿಗೆ ಇಷ್ಟೆಲ್ಲ ರಜೆ; ಇಲ್ಲಿದೆ ಸಂಪೂರ್ಣ ಪಟ್ಟಿ
ಈ ನಿಯಮಕ್ಕೆ ಇರುವ ಪ್ರಮುಖ ಷರತ್ತುಗಳು:
ಈ ಸೌಲಭ್ಯವು ಎಲ್ಲರಿಗೂ ಸಿಗುವುದಿಲ್ಲ, ಇದಕ್ಕೆ ಕೆಲವು ಪ್ರಮುಖ ಷರತ್ತುಗಳನ್ನು ವಿಧಿಸಲಾಗಿದೆ:
ಮುನ್ಸೂಚನೆ: ನೀವು ಬುಕ್ ಮಾಡಿದ ದಿನದಿಂದ ವಿಮಾನ ಹೊರಡುವ ದಿನಾಂಕಕ್ಕೆ ಕನಿಷ್ಠ 7 ದಿನಗಳ ಕಾಲಾವಕಾಶ (ದೇಶೀಯ ವಿಮಾನಗಳಿಗೆ) ಮತ್ತು 15 ದಿನಗಳ ಕಾಲಾವಕಾಶ (ಅಂತರಾಷ್ಟ್ರೀಯ ವಿಮಾನಗಳಿಗೆ) ಇರಬೇಕು.
ಬುಕಿಂಗ್ ವಿಧಾನ: ಈ ಉಚಿತ ರದ್ದತಿ ಸೌಲಭ್ಯವು ಕೇವಲ ವಿಮಾನಯಾನ ಸಂಸ್ಥೆಯ ಅಧಿಕೃತ ವೆಬ್ಸೈಟ್ ಅಥವಾ ಆ್ಯಪ್ ಮೂಲಕ ನೇರವಾಗಿ ಬುಕ್ ಮಾಡಿದವರಿಗೆ ಮಾತ್ರ ಅನ್ವಯಿಸುತ್ತದೆ.
Also Read : ಎಲ್ಐಸಿಯಲ್ಲಿ ಹಣ ಹೂಡಿಕೆ ಮಾಡ್ತಿದ್ದೀರಾ ? ನಿಮ್ಮ ಹಣಕ್ಕೆ ಗ್ಯಾರಂಟಿ ಯಾರು ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಹೆಸರು ತಿದ್ದುಪಡಿಗೆ ಹಣ ಕೊಡಬೇಕಿಲ್ಲ
ಟಿಕೆಟ್ ಬುಕ್ ಮಾಡುವಾಗ ಹೆಸರಿನಲ್ಲಿ ಸಣ್ಣಪುಟ್ಟ ಕಾಗುಣಿತ ತಪ್ಪುಗಳಾಗುವುದು ಸಾಮಾನ್ಯ. ಇದಕ್ಕಾಗಿ ಈ ಮೊದಲು ದಂಡ ವಿಧಿಸಲಾಗುತ್ತಿತ್ತು. ಆದರೆ ಇನ್ಮುಂದೆ, ಟಿಕೆಟ್ ಬುಕ್ ಮಾಡಿದ 24 ಗಂಟೆಗಳ ಒಳಗೆ ಹೆಸರಿನಲ್ಲಿನ ತಪ್ಪುಗಳನ್ನು ಸರಿಪಡಿಸಲು ಕೋರಿಕೆ ಸಲ್ಲಿಸಿದರೆ, ಏರ್ಲೈನ್ಸ್ಗಳು ಯಾವುದೇ ಶುಲ್ಕ ವಿಧಿಸುವಂತಿಲ್ಲ.
flight ticket cancellation rules : ರೀಫಂಡ್ ಪ್ರಕ್ರಿಯೆ ಇನ್ನು ವೇಗ
ಟಿಕೆಟ್ ರದ್ದು ಮಾಡಿದ ನಂತರ ಹಣ ವಾಪಸ್ ಬರಲು ತಿಂಗಳುಗಟ್ಟಲೆ ಕಾಯುವ ಅವಶ್ಯಕತೆ ಇಲ್ಲ.
ಕ್ರೆಡಿಟ್ ಕಾರ್ಡ್: ಮೂಲಕ ಪಾವತಿಸಿದ್ದರೆ 7 ದಿನಗಳ ಒಳಗೆ ರೀಫಂಡ್ ಆಗಬೇಕು.
ನಗದು ಪಾವತಿ: ಮಾಡಿದ್ದರೆ ಏರ್ಲೈನ್ ಕಚೇರಿಯಲ್ಲಿ ತಕ್ಷಣವೇ ಹಣ ಹಿಂತಿರುಗಿಸಬೇಕು.
ಏಜೆಂಟ್ ಮೂಲಕ ಬುಕಿಂಗ್: ಆಗಿದ್ದರೆ 14 ದಿನಗಳ ಒಳಗೆ ರೀಫಂಡ್ ಪ್ರಕ್ರಿಯೆ ಮುಗಿಯಬೇಕು. ಏಜೆಂಟ್ ಕೈಕೊಟ್ಟರೂ ಏರ್ಲೈನ್ಸ್ ಸಂಸ್ಥೆಯೇ ಇದರ ಜವಾಬ್ದಾರಿ ಹೊರಬೇಕೆಂದು ಡಿಜಿಸಿಎ ಕಟ್ಟುನಿಟ್ಟಾಗಿ ಹೇಳಿದೆ.
ವಿಮಾನ ಟಿಕೆಟ್ ಕ್ಯಾನ್ಸಲ್ : ಹೊಸ ರೂಲ್ಸ್ ಯಾವಾಗಿನಿಂದ ಜಾರಿ ?
ಈ ಎಲ್ಲ ಹೊಸ ನಿಯಮಗಳು ಮಾರ್ಚ್ 26, 2026 ರಿಂದ ಅಧಿಕೃತವಾಗಿ ಜಾರಿಗೆ ಬರಲಿವೆ. ವೈದ್ಯಕೀಯ ತುರ್ತು ಸಂದರ್ಭದಲ್ಲಿಯೂ ಪ್ರಯಾಣಿಕರಿಗೆ ಹೆಚ್ಚಿನ ರಿಯಾಯಿತಿ ಮತ್ತು ರೀಫಂಡ್ ಸೌಲಭ್ಯಗಳನ್ನು ನೀಡಲು ಡಿಜಿಸಿಎ ಸೂಚಿಸಿದೆ.



