ಚಿನ್ನದ ದರದಲ್ಲಿ ಇಳಿಕೆ : ಬೆಂಗಳೂರಲ್ಲಿ ಎಷ್ಟಿದೆ ಇಂದಿನ ಚಿನ್ನದ ದರ

Gold Rate Today in Bangalore : ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಗಗನಕ್ಕೇರುತ್ತಿದ್ದ ಚಿನ್ನದ ದರದಲ್ಲಿ ಇಂದು (ಸೋಮವಾರ) ದೊಡ್ಡ ಮಟ್ಟದ ಇಳಿಕೆ ಕಂಡುಬಂದಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರಿಳಿತಗಳ ಪರಿಣಾಮವಾಗಿ ರಾಜ್ಯ ರಾಜಧಾನಿಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸಾರ್ವಜನಿಕರಿಗೆ ತುಸು ನಿರಾಳ ತಂದಿವೆ. ಬೆಂಗಳೂರಿನಲ್ಲಿ ಇಂದು (ಫೆಬ್ರವರಿ 16, 2026) ಪ್ರತಿ ಗ್ರಾಂ ಚಿನ್ನದ ದರ ಎಷ್ಟಿದೆ ಮತ್ತು ಬೆಲೆ ಏರಿಳಿತಕ್ಕೆ ಕಾರಣಗಳೇನು ಅನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
2026ರ ಆರಂಭದಿಂದಲೂ ಚಿನ್ನದ ದರದಲ್ಲಿ ಬಾರೀ ಏರಿಕೆ ಕಾಣುತ್ತಿದೆ. ಏಕಾಏಕಿಯಾಗಿ ಚಿನ್ನದ ದರದಲ್ಲಿ ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಾಣುವುದಕ್ಕೆ ಹಲವು ಕಾರಣಗಳಿವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು (ಯುದ್ಧದ ಭೀತಿ) ಹೂಡಿಕೆದಾರರನ್ನು ಸುರಕ್ಷಿತ ಹೂಡಿಕೆಯಾದ ಚಿನ್ನದತ್ತ ಸೆಳೆಯುತ್ತಿವೆ.
ಭಾರತೀಯ ರಿಸರ್ವ್ ಬ್ಯಾಂಕ್ ಸೇರಿದಂತೆ ವಿಶ್ವದ ವಿವಿಧ ಕೇಂದ್ರೀಯ ಬ್ಯಾಂಕ್‌ಗಳು ತಮ್ಮ ಮೀಸಲು ನಿಧಿಯಲ್ಲಿ ಚಿನ್ನದ ದಾಸ್ತಾನನ್ನು ಹೆಚ್ಚಿಸುತ್ತಿವೆ. ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ದುರ್ಬಲಗೊಳ್ಳುತ್ತಿರುವುದು ಆಮದು ಮಾಡಿಕೊಳ್ಳುವ ಚಿನ್ನದ ಬೆಲೆಯನ್ನು ಏರಿಸುತ್ತಿದೆ.
ಬೆಂಗಳೂರಲ್ಲಿ ಎಷ್ಟಿದೆ ಇಂದಿನ ಚಿನ್ನದ ದರ ?
- 22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ): ಪ್ರತಿ 1 ಗ್ರಾಂಗೆ ₹14,340 (ನಿನ್ನೆಗೆ ಹೋಲಿಸಿದರೆ ₹120 ಇಳಿಕೆ). 10 ಗ್ರಾಂಗೆ ₹1,43,400.
- 24 ಕ್ಯಾರೆಟ್ ಚಿನ್ನ (ಶುದ್ಧ ಚಿನ್ನ): ಪ್ರತಿ 1 ಗ್ರಾಂಗೆ ₹15,644 (₹131 ಇಳಿಕೆ). 10 ಗ್ರಾಂಗೆ ₹1,56,440.
- ಬೆಳ್ಳಿ ದರ: ಪ್ರತಿ ಕೆಜಿಗೆ ಸುಮಾರು ₹7,000 ಇಳಿಕೆಯಾಗಿದ್ದು, ₹2,68,000 ತಲುಪಿದೆ.
Also Read : ಕೈಯಲ್ಲಿ 5,000 ರೂಪಾಯಿ ಇದೆಯೇ? ತಕ್ಷಣ ಹೀಗೆ ‘ತುರ್ತು ನಿಧಿ’ ಸಿದ್ಧಪಡಿಸಿ
ಚಿನ್ನದ ದರ ಯಾವಾಗ ಇಳಿಕೆ ಕಾಣುತ್ತೆ ?
ತಜ್ಞರ ಪ್ರಕಾರ, 2026ರ ಉದ್ದಕ್ಕೂ ಚಿನ್ನದ ಬೆಲೆ ಏರಿಕೆ ಹಾದಿಯಲ್ಲೇ ಇರಲಿದೆ. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರವನ್ನು ಕಡಿತಗೊಳಿಸಿದರೆ ಅಥವಾ ಜಾಗತಿಕ ರಾಜಕೀಯ ಸ್ಥಿತಿ ತಿಳಿಯಾದರೆ ಮಾತ್ರ ಬೆಲೆಯಲ್ಲಿ ಗಮನಾರ್ಹ ಇಳಿಕೆ ನಿರೀಕ್ಷಿಸಬಹುದು. ಸದ್ಯಕ್ಕೆ ಸಣ್ಣ ಪುಟ್ಟ ಲಾಭ ವಸೂಲಿ (Profit Booking) ಕಾರಣದಿಂದ ಇಂದು ಕಂಡಂತೆ ಅಲ್ಪ ಇಳಿಕೆಗಳು ಮಾತ್ರ ಸಾಧ್ಯ.
Also Read : ಅರ್ಬನ್ ಚಾಲೆಂಜ್ ಫಂಡ್: ಬೆಂಗಳೂರು ಸೇರಿ ಈ ನಗರಗಳ ಅಭಿವೃದ್ಧಿಗೆ 1 ಲಕ್ಷ ಕೋಟಿ ನೆರವು ಘೋಷಣೆ
ಚಿನ್ನದ ದರ ಏರಿಕೆಯಲ್ಲೂ ಖರೀದಿಸ್ತಿದ್ದಾರಾ ಜನ ?
ಬೆಲೆ ಏರಿಕೆಯ ನಡುವೆಯೂ ಬೆಂಗಳೂರಲ್ಲಿ ಚಿನ್ನದ ಖರೀದಿಯ ಟ್ರೆಂಡ್ ಬದಲಾಗಿದೆ. ಆಭರಣ ರೂಪದಲ್ಲಿ ಚಿನ್ನ ಖರೀದಿಸುವ ಸಾಮಾನ್ಯ ಜನರ ಸಂಖ್ಯೆ ತುಸು ಕಡಿಮೆಯಾಗಿದೆ (ಸುಮಾರು 24% ಇಳಿಕೆ). ಆದರೆ, ಹೂಡಿಕೆ ಉದ್ದೇಶದಿಂದ (Gold ETF, ಬಾರ್ ಮತ್ತು ಕಾಯಿನ್) ಚಿನ್ನ ಖರೀದಿಸುವವರ ಸಂಖ್ಯೆ 17% ರಷ್ಟು ಹೆಚ್ಚಾಗಿದೆ. “ಬೆಲೆ ಇನ್ನೂ ಏರಬಹುದು” ಎಂಬ ಭಯ ಮತ್ತು ಮದುವೆ ಸೀಸನ್ ಇರುವುದರಿಂದ ಅನಿವಾರ್ಯವಾಗಿ ಜನರು ಖರೀದಿಗೆ ಮುಂದಾಗುತ್ತಿದ್ದಾರೆ.
Gold Rate Today in Bangalore Massive Drop in Gold Prices on Feb 16; Check 22K & 24K Rates Now!



