ಪಿಎಂ ಕಿಸಾನ್ ಸಮ್ಮಾನ ಯೋಜನೆ : 20ನೇ ಕಂತಿನ ಹಣ ಬಿಡುಗಡೆ, ಚೆಕ್ ಮಾಡುವುದು ಹೇಗೆ ?

PM Kisan Samman Yojana : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 20ನೇ ಕಂತಿನ ಹಣ ಜುಲೈ 18ರಂದು ಬಿಡುಗಡೆ ಆಗುವ ಸಾಧ್ಯತೆ ಇದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜುಲೈ 18 ರಂದು ಬಿಹಾರದ ಮೋತಿಹಾರಿಗೆ ಭೇಟಿ ನೀಡುವ ಸಂದರ್ಭದಲ್ಲಿ ಈ ಕಂತನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಪಿಎಂ ಕಿಸಾನ್ ಯೋಜನೆಯಡಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗುತ್ತದೆ. 19ನೇ ಕಂತು ಫೆಬ್ರವರಿ 2025 ರಲ್ಲಿ ಬಿಡುಗಡೆ ಆಗಿತ್ತು. 20ನೇ ಕಂತು ಜೂನ್-ಜುಲೈ 2025 ರ ನಡುವೆ ಬಿಡುಗಡೆಯಾಗಬೇಕಿತ್ತು.
PM Kisan Samman Yojana : ಈ ಕೆಲಸ ಮಾಡದಿದ್ರೆ ಸಿಗಲ್ಲ ಪಿಎಂ ಕಿಸಾನ್ ಹಣ
ಇ-ಕೆವೈಸಿ ಕಡ್ಡಾಯ: ನೀವು ಮುಂದಿನ 20ನೇ ಕಂತಿನ ಹಣವನ್ನು ಪಡೆಯಲು, ಇ-ಕೆವೈಸಿ ಪೂರ್ಣಗೊಳಿಸುವುದು ಅಗತ್ಯ. ಇದನ್ನು ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ OTP ಆಧಾರಿತವಾಗಿ ಅಥವಾ ಹತ್ತಿರದ CSC ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಮೂಲಕ ಮಾಡಬಹುದು.
ಆಧಾರ್-ಬ್ಯಾಂಕ್ ಲಿಂಕ್: ನಿಮ್ಮ ಆಧಾರ್ ಸಂಖ್ಯೆಯನ್ನು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
ಇದನ್ನೂ ಓದಿ : ಅಂಚೆ ಕಚೇರಿ ಯೋಜನೆ : 5 ಲಕ್ಷ ಠೇವಣಿ ಇಟ್ರೆ ಸಿಗುತ್ತೆ 10 ಲಕ್ಷ..!
ಪಿಎಂ ಕಿಸಾನ್ ಹಣ ಜಮೆ ಆಗಿದ್ಯಾ ? ಚೆಕ್ ಮಾಡುವುದು ಹೇಗೆ ?
ಪಿಎಂ ಕಿಸಾನ್ ಯೋಜನೆಯ ಕಂತಿನ ಹಣ ಜಮೆ ಆಗಿದ್ಯಾ ಅನ್ನೋ ಬಗ್ಗೆ ಪರಿಶೀಲನೆ ನಡೆಸಬಹುದು. ನೀವು ಪಿಎಂ ಕಿಸಾನ್ ಯೋಜನೆಯ ಅಧಿಕೃತವಾದ ವೆಬ್ ಸೈಟ್ pmkisan.gov.in ಭೇಟಿ ನೀಡಿ.
ಅದರಲ್ಲಿ ತೋರಿಸುವ ರೈತರು (Farmers Corner) ವಿಭಾಗವನ್ನು ಕ್ಲಿಕ್ ಮಾಡಿ. ನಂತರ ಫಲಾನುಭವಿಗಳ ಸ್ಟೇಟಸ್ (Beneficiary Status) ಆಯ್ಕೆಯನ್ನು ಕ್ಲಿಕ್‌ಮಾಡಿ.
ಇದನ್ನೂ ಓದಿ : ಉದ್ಯಮಿಗಳಿಗೆ MSME ನೀಡಲಿದೆ ₹250 ಕೋಟಿವರೆಗೆ ಸಾಲ
ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ. ನಂತರ ಮೊಬೈಲ್ ಸಂಖ್ಯೆ ಅಥವಾ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ನಮೂದಿಸುವ ಮೂಲಕ ಸ್ಥಿತಿಯನ್ನು ಪರಿಶೀಲಿಸಿ.
PM Kisan Samman Yojana : How to check the release of 20th installment in Kannada News



