WhatsApp Pay : ವಾಟ್ಸಾಪ್​​ ಪೇ ಮೂಲಕ ಗ್ರಾಹಕರಿಗೆ ಭರ್ಜರಿ ಆಫರ್​: ಸಿಗಲಿದೆ 105 ರೂ. ಕ್ಯಾಶ್​ ಬ್ಯಾಕ್​

WhatsApp Pay  : ದೇಶದಲ್ಲಿ ಡಿಜಿಟಲ್​ ಇಂಡಿಯಾ ಪರಿಕಲ್ಪನೆ ಆರಂಭವಾದಾಗಿನಿಂದ ಜನರು ಹೆಚ್ಚಾಗಿ ಆನ್​ಲೈನ್​ ಪೇಮೆಂಟ್​ಗಳತ್ತ ಜನರು ಮುಖ ಮಾಡಿದ್ದಾರೆ. ಯುಪಿಐ ಪೇಮೆಂಟ್​ಗಳು ಈಗ ಹೆಚ್ಚು ಚಾಲ್ತಿಯಲ್ಲಿವೆ. ಹೀಗಾಗಿ ಸ್ಮಾರ್ಟ್​ಫೋನ್​ಗಳನ್ನು ಹೊಂದಿರುವ ಎಲ್ಲರಲ್ಲೂ ಗೂಗಲ್​ ಪೇ, ಫೋನ್​ ಪೇ ಹಾಗೂ ಪೇಟಿಎಂಗಳಂತಹ ಆ್ಯಪ್​ಗಳು ಇರುವುದು ಸರ್ವೇ ಸಾಮಾನ್ಯ ಎನಿಸಿದೆ. ಇದೀಗ ಈ ಸಾಲಿಗೆ ವಾಟ್ಸಾಪ್​ ಪೇ ಕೂಡ ಸೇರಿದೆ .

ಈಗಾಗಲೇ ಜನರು ಬೇರೆ ಬೇರೆಎ ಆನ್​ಲೈನ್​ ಪೇಮೆಂಟ್​ ಆ್ಯಪ್​ಗಳನ್ನು ಬಳಕೆ ಮಾಡ್ತಿದ್ದಾರೆ. ಹೀಗಾಗಿ ಇಂತವರನ್ನು ತನ್ನ ಪೇಮೆಂಟ್​ ವೇದಿಕೆಯನ್ನು ಬಳಸುವಂತೆ ಮಾಡಲು ವಾಟ್ಸಾಪ್​ ಹೊಸದೊಂದು ಪ್ಲಾನ್​ ಮಾಡಿದೆ. ಅದೇನೆಂದರೆ ವಾಟ್ಸಾಪ್​ ಪೇಮೆಂಟ್​ ಮೂಲಕ ಪೇಮೆಂಟ್​ ಮಾಡುವ ಬಳಕೆದಾರರಿಗೆ 105 ರೂಪಾಯಿ ಕ್ಯಾಶ್​ ಬ್ಯಾಕ್​ ಸಿಗಲಿದೆ.

ಪ್ರತಿ ಪೇಮೆಂಟ್​ಗೆ 35 ರೂಪಾಯಿಗಳಂತೆ ಮೂರು ಪೇಮೆಂಟ್​ಗಳಿಗೆ ಒಟ್ಟು 105 ರೂಪಾಯಿಗಳು ನಿಮ್ಮ ಖಾತೆಯನ್ನು ಸೇರಲಿದೆ. ಈ ಕ್ಯಾಶ್​ಬ್ಯಾಕ್​ ಪಡೆದುಕೊಳ್ಳಲು ಇಂತಿಷ್ಟೇ ಹಣ ಪಾವತಿ ಮಾಡಬೇಕು ಎಂದೇನಿಲ್ಲ. ನೀವು ಒಂದು ರೂಪಾಯಿ ಹಾಕಿದರೂ ಸಾಕು. ನಿಮಗೆ 105 ರೂಪಾಯಿಗಳು ಸಿಗಲಿದೆ ಎಂದು ಕಂಪನಿ ತಿಳಿಸಿದೆ. ಕ್ಯಾಶ್​ ಬ್ಯಾಕ್​ ಐಡಿಯಾದ ಮೂಲಕ ಕಂಪನಿಯು ಗ್ರಾಹಕರನ್ನು ಗಳಿಸಲು ಮುಂದಾಗಿದೆ.

ಇದನ್ನು ಓದಿ : KL Rahul‌ : ಟೀಮ್ ಇಂಡಿಯಾದಿಂದ ಹೊರ ಬಿದ್ದ ಕೆ.ಎಲ್.ರಾಹುಲ್ ಬಾವುಕ ಸಂದೇಶ

ಇದನ್ನೂ ಓದಿ : Star Sports ನಲ್ಲಿ ಪ್ರಸಾರವಾಗಲ್ಲ ಐಪಿಎಲ್ ! ಹೊಸ ಬ್ರಾಡ್ ಕಾಸ್ಟಿಂಗ್ ರೈಟ್ಸ್ ರೇಟ್ ಕೇಳಿದ್ರೆ ಬೆಚ್ಚಿ ಬೀಳ್ತೀರಿ

WhatsApp Pay is offering Rs 105 cashback, here is how to avail the offer

Comments are closed.