Ghee Benefits : ಯಾವ ತುಪ್ಪ ಉತ್ತಮವಾದದ್ದು? ಹಸುವಿನ ತುಪ್ಪನಾ ಅಥವಾ ಎಮ್ಮೆಯ ತುಪ್ಪನಾ?

ಶರೀರವನ್ನು ಹೆಲ್ದಿಯಾಗಿ ಇಡಲು ತುಪ್ಪದ(Ghee Benefits) ಸೇವನೆ ಅತಿ ಮುಖ್ಯ. ತುಪ್ಪವನ್ನು ಹಸು(cow) ಮತ್ತು ಎಮ್ಮೆ(Buffalo) ಎರಡರಿಂದಲೂ ತಯಾರಿಸುತ್ತಾರೆ. ಆದರೆ ಇವರಡರ ಮಧ್ಯೆ ಇರುವ ಅಂತರ ನಿಮಗೆ ಗೊತ್ತೇ? ಇವೆರಡರಲ್ಲಿ ಯಾವುದು ಹೆಚ್ಚು ಪೋಷಕಾಂಶಗಳನ್ನು ಹೊಂದಿದೆ. ಹಸುವಿನ ತುಪ್ಪ ಸೇವನೆಯಿಂದ ಇಮ್ಯುನಿಟಿ ಹೆಚ್ಚಾಗುತ್ತದೆ. ಅದರ ಜೊತೆಗೆ ಶರೀರದ ಇತರ ತೊಂದರೆಗಳನ್ನು ದೂರಮಾಡುತ್ತದೆ. ದೇಹದ ತೂಕ ಹೆಚ್ಚಿಸಲು ಎಮ್ಮೆಯ ತುಪ್ಪ ಉತ್ತಮವಾದದ್ದು.

ಸಾಮಾನ್ಯವಾಗಿ ಜನರು ದೈನಂದಿನ ಜೀವವನ್ನು ತುಪ್ಪ ಬಳಕೆಯಿಂದಲೇ ಪ್ರಾರಂಭಿಸುತ್ತಾರೆ. ರೊಟ್ಟಿ, ಚಪಾತಿಯಾಗಿರಲಿ ಅಥವಾ ಯಾವುದೋ ಸಿಹಿ ತಿಂಡಿಯಿರಲಿ ತುಪ್ಪ ಅವುಗಳ ಸ್ವಾದ ಹೆಚ್ಚಿಸುತ್ತದೆ. ತುಪ್ಪವನ್ನು ಹಸು ಮತ್ತು ಎಮ್ಮೆ ಎವೆರಡರ ಹಾಲಿನಿಂದ ತಯಾರಿಸುತ್ತಾರೆ. ಆದರೆ ನಿಮಗೆಲ್ಲರಿಗೂ ಈ ಗೊಂದಲ ಇರುತ್ತದೆ ಯಾವ ತುಪ್ಪ ಆರೋಗ್ಯಕ್ಕೆ ಉತ್ತಮವಾದದ್ದು? ನೀವು ಮಾರುಕಟ್ಟೆಯಲ್ಲಿ ಯಾವ ಬಣ್ಣದ ತುಪ್ಪ ಖರೀದಿಸುತ್ತೀರಿ? ಇವೆರಡರಲ್ಲಿ ಅಧಿಕ ಫೌಷ್ಟಿಕವಾದದ್ದು ಯಾವುದು? ನಮ್ಮಲ್ಲಿ ಹಲವರಿಗೆ ಹಸು ಮತ್ತು ಎಮ್ಮೆಯ ತುಪ್ಪದ ನಡುವಿನ ಅಂತರವೇ ಸರಿಯಾಗಿ ತಿಳಿದಿಲ್ಲ. ಅಂದಮೇಲೆ ಅದರ ಪೂರ್ತಿ ಲಾಭ ಪಡೆದುಕೊಳ್ಳುವುದಾದರೂ ಹೇಗೆ?

ಹಸು ಮತ್ತು ಎಮ್ಮೆಯ ತುಪ್ಪದ ನಡುವಿನ ಅಂತರ :

ಎಮ್ಮೆಯ ತುಪ್ಪದಲ್ಲಿರುತ್ತದೆ ಅತ್ಯಧಿಕ ಕೊಬ್ಬು :

ಹಸುವಿನ ತುಪ್ಪಕ್ಕೆ ಹೋಲಿಸಿದರೆ ಎಮ್ಮೆಯ ತುಪ್ಪ ಅಧಿಕ ಕೊಬ್ಬನ್ನು ಹೊಂದಿದೆ. ಆದ್ದರಿಂದ ನೀವು ತೂಕ ಏರಿಸಿಕೊಳ್ಳಬೇಕೆಂದುಕೊಂಡಿದ್ದರೆ ಎಮ್ಮೆಯ ತುಪ್ಪದ ಬಳಕೆ ಮಾಡಿ. ಅದೇ ನೀವು ತೂಕ ಇಳಿಸಿಕೊಳ್ಳುಲು ಪ್ರಯತ್ನಿಸುತ್ತಿದ್ದರೆ ಆಗ ಹಸುವಿನ ತುಪ್ಪ ಸೇವಿಸಿ.

ಇದನ್ನೂ ಓದಿ : Ginger Tea Health Benefits: ಸರ್ವ ರೋಗಕ್ಕೂ ರಾಮಬಾಣ ಶುಂಠಿ ಚಹಾ

ಬಣ್ಣದಲ್ಲಿನ ವ್ಯತ್ಯಾಸ:
ಹಸುವಿನ ತುಪ್ಪವು ವಿಟಮಿನ್‌ ಎ ಹೊಂದಿರುತ್ತದೆ. ಬಣ್ಣದ ವಿಚಾರದಲ್ಲಿ ಹಸುವಿನ ತುಪ್ಪದ ಬಣ್ಣವು ಹಳದಿ ಬಣ್ಣದಿಂದ ಕೂಡಿರುತ್ತದೆ. ಆದರೆ ಎಮ್ಮೆಯ ತುಪ್ಪವು ಬಿಳಿ ಬಣ್ಣದ್ದಾಗಿರುತ್ತದೆ.

ಹಸುವಿನ ತುಪ್ಪ ಕಣ್ಣಿಗೆ ಉತ್ತಮವಾಗಿದೆ :
ಆಯುರ್ವೇದ ಔಷಧಗಳಲ್ಲಿಯೂ ಹಸುವಿನ ತುಪ್ಪದ ಬಳಕೆಯಿದೆ. ಕಣ್ಣಿನ ಆರೋಗ್ಯಕ್ಕೆ ಎಮ್ಮೆಯ ತುಪ್ಪಕ್ಕಿಂತ ಹಸುವಿನ ತುಪ್ಪ ಬಹಳ ಪ್ರಯೋಜನಕಾರಿ ಎನ್ನಲಾಗಿದೆ.

ಬ್ಯಾಕ್ಟೀರಿಯಾದಿಂದ ಬರುವ ರೋಗಗಳನ್ನು ತಡೆಯುತ್ತದೆ:
ಆಂಟಿಬ್ಯಾಕ್ಟೀರಿಯಲ್‌, ಆಂಟಿಫಂಗಲ್‌ ಮತ್ತು ಆಂಟಿಫಂಗಲ್‌ ಗುಣ ಹೊಂದಿರುವ ಹಸುವಿನ ತುಪ್ಪವು ಬ್ಯಾಕ್ಟೀರಿಯಾದಿಂದ ಬರುವ ರೋಗ ತಡೆಯಬಲ್ಲದು. ಹಸುವಿನ ತುಪ್ಪದಿಂದ ಆರೋಗ್ಯಕ್ಕೆ ಬಹಳ ಪ್ರಯೋಜನವಿದೆ.

ಹಸುವಿನ ತುಪ್ಪ ಅಥವಾ ಎಮ್ಮೆಯ ತುಪ್ಪದಿಂದ ಆರೋಗ್ಯಕ್ಕೆ ಬಹಳ ಪ್ರಯೋಜನವೇನೋ ಇದೆ. ಆದರೆ ಸೇವನೆಯಲ್ಲಿ ಮಿತಿಯಿರಲಿ. ಯಾವುದೇ ತುಪ್ಪವಿರಲಿ ಅಧಿಕ ಸೇವನೆಯಿಂದ ದೇಹದಲ್ಲಿ ಕೊಲೆಸ್ಟ್ರಾಲ್‌ ಹೆಚ್ಚಾಗುವ ಸಂಭವವಿದ್ದು, ಅದು ಹೃದಯ ಸಂಬಂಧಿ ಖಾಯಿಲೆಗಳನ್ನು ತರಬಲ್ಲದು.

ಇದನ್ನೂ ಓದಿ : Mint Tea : ಎಸಿಡಿಟಿ ಮತ್ತು ಬೇಸಿಗೆಯ ಆಲಸ್ಯ ಹೋಗಲಾಡಿಸಲು ಕುಡಿಯಿರಿ ಪುದೀನಾ ಟೀ!!

(Ghee Benefits do you know the difference between cow and buffalo ghee)

Comments are closed.