ಆರ್‌ಸಿಬಿ ಅಭಿಮಾನಿಗಳಿಗೆ ಬಿಗ್ ಅಲರ್ಟ್ : ಬೆಂಗಳೂರಲ್ಲಿ ಸಾರ್ವಜನಿಕ ಸಂಭ್ರಮಾಚರಣೆಗೆ ಬ್ರೇಕ್
ಐಪಿಎಲ್ 2026 ರ ಫೈನಲ್ ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಗ್ಗೆ ಇಟ್ಟ ಬೆನ್ನಲ್ಲೇ ಐಟಿ ಸಿಟಿಯಲ್ಲಿ ಕ್ರಿಕೆಟ್ ಜ್ವರ ನೆತ್ತಿಗೇರಿದೆ. ಆದರೆ, ಪಂದ್ಯ ಮುಗಿದ ಬಳಿಕ ಅಭಿಮಾನಿಗಳ ಅತಿಯಾದ ಆಚರಣೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಡೆಯಲು ಬೆಂಗಳೂರು ನಗರ ಪೊಲೀಸ್ ಇಲಾಖೆ ಭಾರಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಭಾನುವಾರ ನಡೆಯಲಿರುವ ಹೈ-ವೋಲ್ಟೇಜ್ ಪಂದ್ಯದ ಹಿನ್ನೆಲೆಯಲ್ಲಿ ನಗರದಲ್ಲಿ ಸಾರ್ವಜನಿಕ ಸಂಭ್ರಮಾಚರಣೆಗೆ ಬ್ರೇಕ್ ಹಾಕಲಾಗಿದ್ದು, ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಜಾರಿಗೆ ತರಲಾಗಿದೆ.

ಕಳೆದ ಬಾರಿ ಆರ್‌ಸಿಬಿ ತಂಡವು ಟ್ರೋಫಿ ಗೆದ್ದಾಗ ಬೆಂಗಳೂರಿನಾದ್ಯಂತ ಮಧ್ಯರಾತ್ರಿಯ ನಂತರ ಭಾರಿ ಹಂಗಾಮಾ ಸೃಷ್ಟಿಯಾಗಿತ್ತು. ಅಭಿಮಾನಿಗಳು ಮಧ್ಯರಾತ್ರಿ 12 ಗಂಟೆಯ ನಂತರ ರಸ್ತೆ ರಸ್ತೆಗಳಲ್ಲಿ ಜಮಾಯಿಸಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸಿದ್ದರು. ಈ ಬಾರಿ ಅಂತಹ ಯಾವುದೇ ಅಹಿತಕರ ಘಟನೆಗಳು ಅಥವಾ ಟ್ರಾಫಿಕ್ ಜಾಮ್ ಸಮಸ್ಯೆಗಳು ಮರುಕಳಿಸದಂತೆ ತಡೆಯಲು ಪೊಲೀಸ್ ಇಲಾಖೆ ಈಗಿನಿಂದಲೇ ಸನ್ನದ್ಧವಾಗಿದೆ.
ಪೊಲೀಸ್ ಇಲಾಖೆ ಜಾರಿಗೊಳಿಸಿರುವ ನಿಯಮಾವಳಿಯ ಪ್ರಕಾರ, ನಗರದ ಯಾವುದೇ ರಸ್ತೆ, ಮದ್ಯಪಾನ ಮಾಡಿ ಸಾರ್ವಜನಿಕ ರಸ್ತೆಗಳಲ್ಲಿ ಕೂಗಾಡುವುದು, ಜಗಳ ಮಾಡುವುದು ಅಥವಾ ಎದುರಾಳಿ ತಂಡದ ಅಭಿಮಾನಿಗಳನ್ನು ರೇಗಿಸಿ ಗಲಾಟೆ ಸೃಷ್ಟಿಸಿದರೆ ತಕ್ಷಣವೇ ಬಂಧಿಸಲಾಗುವುದುಹೋಟೆಲ್, ಪಬ್ ಅಥವಾ ಸಾರ್ವಜನಿಕ ಸ್ಥಳಗಳ ಬಳಿ ದೊಡ್ಡ ಪರದೆ ಅಳವಡಿಸಿ ಪಂದ್ಯ ಪ್ರಸಾರ ಮಾಡಲು ಪೊಲೀಸರ ಪೂರ್ವ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಗೆಲುವಿನ ಉತ್ಸಾಹದಲ್ಲಿ ಯಾವುದೇ ರಸ್ತೆಗಳಲ್ಲಿ ಪಟಾಕಿ ಸಿಡಿಸುವಂತಿಲ್ಲ ಹಾಗೂ ಅಪಾಯಕಾರಿ ವಸ್ತುಗಳನ್ನು ಬಳಸುವಂತಿಲ್ಲ.ಮಧ್ಯರಾತ್ರಿ ಬೈಕ್ ರ‍್ಯಾಲಿ ನಡೆಸುವುದು, ವೀಲಿಂಗ್ ಮಾಡುವುದು, ಕರ್ಕಶ ಹಾರ್ನ್ ಮಾಡುವುದು ಮತ್ತು ರಸ್ತೆಗಳನ್ನು ಬ್ಲಾಕ್ ಮಾಡಿ ವಾಹನ ಸವಾರರಿಗೆ ತೊಂದರೆ ಕೊಡುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ.ಸಾಮಾಜಿಕ ಜಾಲತಾಣಗಳಲ್ಲಿ ಇತರ ತಂಡಗಳ ವಿರುದ್ಧ ಪ್ರಚೋದನಾಕಾರಿ ಪೋಸ್ಟ್‌ಗಳನ್ನು ಹಾಕುವುದು ಅಥವಾ ನೆಗೆಟಿವ್ ಸುದ್ದಿಗಳನ್ನು ಹರಡುವವರ ವಿರುದ್ಧ ಕಠಿಣ ಸೈಬರ್ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಇಲಾಖೆ ಹೇಳಿದೆ.
Also Read: ಗಿಲ್ ಸೆಂಚುರಿ ಆರ್ಭಟಕ್ಕೆ ರಾಜಸ್ಥಾನ ಧೂಳೀಪಟ : ಆರ್.ಆರ್ ಮಣಿಸಿ ಫೈನಲ್ಗೆ ಲಗ್ಗೆ ಇಟ್ಟ ಗುಜರಾತ್ಟೈಟನ್ಸ್
ಒಂದು ವೇಳೆ ಆರ್‌ಸಿಬಿ ಫೈನಲ್ ಪಂದ್ಯವನ್ನು ಗೆದ್ದರೆ ಅಭಿಮಾನಿಗಳ ಸಂಭ್ರಮ ಮಿತಿಮೀರುವ ಸಾಧ್ಯತೆ ಇರುವುದರಿಂದ ಪೊಲೀಸರು ಈ ಟಫ್ ರೂಲ್ಸ್ ತಂದಿದ್ದಾರೆ. ಇಡೀ ನಗರದಾದ್ಯಂತ ಭಾನುವಾರ ರಾತ್ರಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲು ನಿರ್ಧರಿಸಲಾಗಿದ್ದು, ನಿಯಮ ಮೀರುವ ಕ್ರಿಕೆಟ್ ಪ್ರೇಮಿಗಳಿಗೆ ದಂಡದ ಜೊತೆಗೆ ಕಾನೂನು ಕ್ರಮದ ಬಿಸಿ ಮುಟ್ಟಿಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
Big alert for RCB fans Public celebrations in Bengaluru banned