actress kajal agarwal : ನಾಲ್ಕು ತಿಂಗಳ ಕಂದಮ್ಮನೊಂದಿಗೆ ಗೋವಾ ಬೀಚ್​ನಲ್ಲಿ ಕಾಜಲ್​ ಅಗರ್ವಾಲ್​ ಎಂಜಾಯ್​

actress kajal agarwal : ಸಿನಿಮಾ ಇಂಡಸ್ಟ್ರಿಯಲ್ಲಿ ಸದ್ಯ ಸಾಲು ಸಾಲು ತಾರೆಯರು ಮದುವೆಯಾಗೋದು, ಪ್ರೆಗ್ನೆನ್ಸಿ ಘೋಷಣೆ ಮಾಡುವುದು ಹಾಗೂ ಮಗುವಿನ ಫೋಟೋ ರಿವೀಲ್​ ಮಾಡೋದು ಇವಿಷ್ಟು ಟ್ರೆಂಡ್​ ಎಂಬಂತೆ ಆಗಿ ಹೋಗಿದೆ. ಅದೇ ರೀತಿ ನಾಲ್ಕು ತಿಂಗಳ ಹಿಂದೆಯಷ್ಟೇ ಸೌತ್​ ಇಂಡಿಯಾ ಬ್ಯೂಟಿ, ಖ್ಯಾತ ನಟಿ ಕಾಜಲ್​ ಅಗರ್ವಾಲ್​ ಕೂಡ ಗಂಡು ಮಗುವಿಗೆ ಜನ್ಮ ನೀಡಿದ್ದರು. ತಮ್ಮ ಜನ್ಮ ದಿನದಂದು ಮಗುವಿನ ಫೋಟೋ ರಿವೀಲ್​ ಮಾಡಿದ್ದ ನಟಿ ಕಾಜಲ್​ ಅರ್ಗವಾಲ್​ ಇದೀಗ ಪುತ್ರನ ಮತ್ತೊಂದು ಫೋಟೋವನ್ನು ಹಂಚಿಕೊಂಡಿದ್ದಾರೆ.


ಅಂದಹಾಗೆ ಈ ಬಾರಿ ಕಾಜಲ್​ ಅರ್ಗವಾಲ್​ ತಮ್ಮ ಪುತ್ರನ ಫೊಟೋ ಹಂಚಿಕೊಳ್ಳುವುದರ ಹಿಂದೆ ವಿಶೇಷ ಕಾರಣವೊಂದಿದೆ. ನಾಲ್ಕು ತಿಂಗಳ ಕಂದಮ್ಮ ನೀಲ್​ ಕಿಚ್ಲುಗೆ ಇದು ಮೊದಲ ವೆಕೇಷನ್​ , ಹೌದು..! ಕಾಜಲ್​ ಅರ್ಗವಾಲ್​ ತಮ್ಮ ಪುತ್ರನ ಜೊತೆಯಲ್ಲಿ ಗೋವಾದಲ್ಲಿ ಎಂಜಾಯ್​ ಮಾಡಿದ್ದಾರೆ. ಈ ವೆಕೇಷನ್​ನ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನಟಿ ಕಾಜಲ್​ ಅರ್ಗವಾಲ್​ ನೀಲ್​ ಮೊದಲ ವೆಕೇಷನ್​ ಎಂದು ಶೀರ್ಷಿಕೆ ನೀಡಿದ್ದಾರೆ.


ದಕ್ಷಿಣ ಭಾರತದ ಹೆಸರುವಾಸಿ ನಟಿ ಕಾಜಲ್​ ಅರ್ಗವಾಲ್​ 2020ರ ಅಕ್ಟೋಬರ್​ನಲ್ಲಿ ಗೌತಮ್​ ಕಿಚ್ಲು ಜೊತೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಮದುವೆಯಾದ ಬಳಿಕವೂ ನಟನೆಯನ್ನು ಮುಂದುವರಿಸಿದ್ದ ಕಾಜಲ್​ ಅರ್ಗವಾಲ್​ ಬಳಿಕ ತಮ್ಮ ಪ್ರೆಗ್ನೆನ್ಸಿ ಅನೌನ್ಸ್​ ಮಾಡಿದ್ದರು. ತಮ್ಮ ಗರ್ಭಿಣಿ ಜೀವನದ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಳ್ತಿದ್ದ ಕಾಜಲ್​ ಏಪ್ರಿಲ್​ ತಿಂಗಳಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು.

ಇದನ್ನು ಓದಿ : Rashmika Mandanna : ರೆಡ್​ ಡ್ರೆಸ್​ನಲ್ಲಿ ಹಾಟ್​ ಲುಕ್​ ಕೊಟ್ಟು ಪಡ್ಡೆ ಹುಡುಗರ ನಿದ್ದೆ ಕದ್ದ ರಶ್ಮಿಕಾ ಮಂದಣ್ಣ

ಇದನ್ನೂ ಓದಿ : sudeep has gone to delhi : 13 ವರ್ಷಗಳ ಬಳಿಕ ದೆಹಲಿಗೆ ಹಾರಿದ ಕಿಚ್ಚ ಸುದೀಪ : ಪ್ರಹ್ಲಾದ್​ ಜೋಶಿ ಜೊತೆ ಮಾತುಕತೆ

ಇದನ್ನೂ ಓದಿ : actress kajal agarwal : ನಾಲ್ಕು ತಿಂಗಳ ಕಂದಮ್ಮನೊಂದಿಗೆ ಗೋವಾ ಬೀಚ್​ನಲ್ಲಿ ಕಾಜಲ್​ ಅಗರ್ವಾಲ್​ ಎಂಜಾಯ್​

ಇದನ್ನೂ ಓದಿ : Kicchaverse launch :ಕಿಚ್ಚ ಸುದೀಪ ಫ್ಯಾನ್ಸ್​ಗೆ ಗುಡ್​ ನ್ಯೂಸ್​ : ಎನ್​​ಎಫ್​ಟಿಯಿಂದ ಕಿಚ್ಚವರ್ಸ್​ ಲಾಂಚ್​​

actress kajal agarwal enjoying with her kid in goa beach

Comments are closed.