ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಉತ್ತರಾ ಬಾಕರ್ ಇನ್ನಿಲ್ಲ

ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಉತ್ತರಾ ಬಾಕರ್ (Actress Uttara Baokar passes away) ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದು, ಮಂಗಳವಾರ ಇಹಲೋಕವನ್ನು ತ್ಯಜಿಸಿದ್ದಾರೆ. ನಟಿ ಉತ್ತರಾ ಬಾಕರ್‌ ಅವರಿಗೆ 70 ವರ್ಷ ವಯಸ್ಸು ಆಗಿತ್ತು. ಮಹಾರಾಷ್ಟ್ರದ ಪುಣೆ ನಗರದಲ್ಲಿ ಇಂದು ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.

ಹಿರಿಯ ನಟಿ ಉತ್ತರಾ ಬಾಕರ್ ಸುಮಾರು ಒಂದು ವರ್ಷದಿಂದ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ವರದಿಗಳಿಂದ ತಿಳಿದು ಬಂದಿದೆ. ಹೀಗಾಗಿ ಹಿರಿಯ ನಟಿ ಪುಣೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಉತ್ತರಾ ಬಾಕರ್ ಬಾರದಲೋಕಕ್ಕೆ ಪಯಣವನ್ನು ಬೆಳೆಸಿದ್ದಾರೆ. ನಟಿ ಉತ್ತರಾ ಬಾಕರ್ ಅವರು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್‌ಎಸ್‌ಡಿ) ಯ ಹಳೆಯ ವಿದ್ಯಾರ್ಥಿಯಾಗಿದ್ದರು. ಅಲ್ಲಿ ಅವರು ಪ್ರಸಿದ್ಧ ರಂಗಭೂಮಿ ಕಲಾವಿದ ಇಬ್ರಾಹಿಂ ಅಲ್ಕಾಜಿ ಅವರ ಬಳಿ ಅಧ್ಯಯನ ಮಾಡಿದರು.

ಇದನ್ನೂ ಓದಿ : ಮಗನಿಗಾಗಿ ಏನೆಲ್ಲ ಪ್ಲ್ಯಾನ್ ಮಾಡಿದ್ದಾರೆ ಮಮ್ಮಿ : ಇಲ್ಲಿದೆ ಮೇಘನಾ ರಾಜ್ ಸರ್ಜಾ Exclusive Talk

ಇದನ್ನೂ ಓದಿ : ಕೆಡಿ‌‌ ಸಿನಿಮಾ‌‌ ಶೂಟಿಂಗ್ ವೇಳೆ ದುರಂತ : ನಟ ಸಂಜಯ್ ದತ್ ಆಸ್ಪತ್ರೆಗೆ ದಾಖಲು

ಉತ್ತರಾ ಮುಖ್ಯಮಂತ್ರಿ ಸೇರಿದಂತೆ ಹಲವಾರು ಜನಪ್ರಿಯ ನಾಟಕಗಳಲ್ಲಿ ಭಾಗವಹಿಸಿದರು. ಅಲ್ಲಿ ಅವರು ಪದ್ಮಾವತಿ, ಮೇನಾ ಗುರ್ಜರಿ ಮೇನಾ, ಶೇಕ್ಸ್‌ಪಿಯರ್‌ನ ಒಥೆಲ್ಲೋ ಡೆಸೆಮೋನಾ ಪಾತ್ರವನ್ನು ನಿರ್ವಹಿಸಿದರು. ನಾಟಕಕಾರ ಗಿರೀಶ್ ಕಾರ್ನಾಡ್ ಅವರ ತುಘಲಕ್‌ನಲ್ಲಿ ತಾಯಿಯಾಗಿ, ಛೋಟೆ ಸೈಯದ್ ಬಡೇ ಸೈಯದ್‌ನಲ್ಲಿ ನಾಚ್ ಹುಡುಗಿಯಾಗಿ ಮತ್ತು ಉಮ್ರಾವ್ ಜಾನ್‌ನಲ್ಲಿ ಉಮ್ರಾವ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಉತ್ತರಾ ಬಾಕರ್ ಅವರ ಸಿನಿಮಾಗಳಿಗಾಗಿ ಭಾರತದ ಅತ್ಯುನ್ನತ ಗೌರವವಾದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಸಹ ಪಡೆದರು. ಏಕ್ ದಿನ್ ಅಚಾನಕ್ ಸಿನಿಮಾದಲ್ಲಿನ ಪಾತ್ರಕ್ಕಾಗಿ ನಟ ಅತ್ಯುತ್ತಮ ಪೋಷಕ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದರು.

ಇದನ್ನೂ ಓದಿ : ಡಾ. ರಾಜ್‌ಕುಮಾರ್‌ 17ನೇ ವರ್ಷದ ಪುಣ್ಯತಿಥಿ : ಭಾವನ್ಮಾಕವಾಗಿ ನಮನ ಸಲ್ಲಿಸಿದ ಸಿಎಂ ಬೊಮ್ಮಾಯಿ

Actress Uttara Baokar passes away : National award winning actress Uttara Baokar is no more

Comments are closed.