ಒಂದೇ ಸಿನಿಮಾದಲ್ಲಿ ಎಲ್ಲ ನಟ-ನಟಿಯರು….! ಮಲೆಯಾಳಂನಲ್ಲಿ ವಿಭಿನ್ನ ಪ್ರಯೋಗ…!!

ಸೃಜನಶೀಲ ಪ್ರಯೋಗಕ್ಕೆ ಹೆಸರಾದ ಮಲಯಾಳಂ ಚಿತ್ರೋದ್ಯಮ ವಿಭಿನ್ನವಾದ ಪ್ರಯತ್ನವೊಂದಕ್ಕೆ ಮುನ್ನುಡಿ ಬರೆದಿದೆ. ಮಲೆಯಾಳಂ ಎಲ್ಲ ನಟ-ನಟಿಯರು ಒಂದೇ ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.

ಒಂದು ಸಿನಿಮಾ ಒಬ್ಬರೋ,ಇಬ್ಬರೋ ನಾಯಕರು-ನಾಯಕಿಯರು ಕಾಮನ್. ಆದರೆ ಈ ಮಲೆಯಾಳಂ ಸಿನಿಮಾದಲ್ಲಿ ಮೋಹನ್ ಲಾಲ್, ಮುಮ್ಮುಟ್ಟಿ, ದುಲ್ಕರ್ ಸಲ್ಮಾನ್, ನಿವಿನ್ ಪೌಲಿ, ಪ್ರಥ್ವಿರಾಜ್ ಸುಕುಮಾರ್, ಫಹಾದ್ ಪಾಸಿಲ್ ಸೇರಿದಂತೆ ಎಲ್ಲ ಪ್ರಮುಖ ನಟ-ನಟಿಯರು ಕಾಣಿಸಿಕೊಳ್ಳಲಿದ್ದಾರೆ.

ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆಕ್ಟರ್ಸ್ ವತಿಯಿಂದ ಈ ಸಿನಿಮಾ ನಿರ್ಮಿಸಲಾಗುತ್ತಿದ್ದು, ಎಲ್ಲ ನಟರೂ ಸಂಭಾವನೆ ಇಲ್ಲದೇ ನಟಿಸಲು ಮುಂದೇ ಬಂದಿದ್ದಾರೆ.

ಪ್ರಿಯದರ್ಶನ್ ಮತ್ತು ಕೆಟಿ ರಾಜೀವ್ ಕುಮಾರ್ ಚಿತ್ರ ನಿರ್ದೇಶಿಸುತ್ತಿದ್ದು, ಕ್ರೈಂ ಥ್ರಿಲ್ಲರ್ ಸಿನಿಮಾಕ್ಕೆ ಟ್ವೆಂಟಿ 20 ಎಂದು ಹೆಸರಿಡಲಾಗಿದೆ. AMMA ದ ಹೊಸ ಕಟ್ಟಡ ಉದ್ಘಾಟನೆ ವೇಳೆ ಮೋಹನ್ ಲಾಲ್ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ್ದಾರೆ. 140 ಕ್ಕೂ ಹೆಚ್ಚು ನಟ-ನಟಿಯರು ಈ ಚಿತ್ರದಲ್ಲಿ ನಟಿಸಲಿದ್ದಾರೆ.

ಒಂದು ದಿನದ ನಟನೆಯಾದರೂ ಸರಿ. ಎಲ್ಲರೂ ಬಂದು ಚಿತ್ರದಲ್ಲಿ ನಟಿಸಿ ಎಂದು ಅಮ್ಮಾದ ಅಧ್ಯಕ್ಷ ಮೋಹನ್ ಲಾಲ್ ಮಲೆಯಾಳಂ ನಟ-ನಟಿಯರಲ್ಲಿ ಮನವಿ ಮಾಡಿದ್ದಾರೆ. ಅಮ್ಮಾ ವತಿಯಿಂದ ಪ್ರತಿವರ್ಷವೂ ಅದ್ದೂರಿ ಸಮಾರಂಭ ಆಯೋಜಿಸಲಾಗುತ್ತಿತ್ತು. ಆದರೆ ಈ ವರ್ಷ ಕೊರೋನಾ ಕಾರಣಕ್ಕೆ ಕಾರ್ಯಕ್ರಮ ಆಯೋಜಿಸಲಾಗುತ್ತಿಲ್ಲ. ಹೀಗಾಗಿ ವಿಭಿನ್ನ ಪ್ರಯತ್ನ ಕ್ಕೆ ಅಮ್ಮಾ ಮುಂದಾಗಿದ್ದು, ಈ ಚಿತ್ರ 2021 ಕ್ಕೆ ಚಿತ್ರೀಕರಣ ಆರಂಭಿಸಿ 2022 ಕ್ಕೆ ತೆರೆ ಕಾಣಲಿದೆ.

Comments are closed.