Amitabh Bachchan Grandson : ಅಮಿತಾಭ್ ಬಚ್ಚನ್ ಮೊಮ್ಮಗನ ಬಾಲಿವುಡ್ ಪ್ರವೇಶ

ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ (Amitabh Bachchan grandson) ಕುಟುಂಬ ಮತ್ತೊಂದು ಕುಡಿ ಸಿನಿಮಾ ರಂಗಕ್ಕೆ ಕಾಲಿಡುತ್ತಿದೆ. ಅಮಿತಾಭ್- ಜಯಬಾದುರಿ ಅವರ ಪುತ್ರಿ ಶ್ವೇತ ಅವರ ಮಗ ಅಗಸ್ತ್ಯನಂದ ಜೋಯ ಅಕ್ತರ್ ಅವರ ದಿ ಆರ್ಚ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ವಿಚಾವರನ್ನು ಸ್ವತಃ ಅಮಿತಾಭ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಕೆಲದಿನಗಳ ಹಿಂದೆ ಘೋಷಣೆ ಮಾಡಿದ್ದರು.

ಅಮಿತಾಭ್ ಬಚ್ಚನ್ ಕುಟುಂಬಕ್ಕೆ ಮೊಮ್ಮಗ ಆಗಸ್ತ್ಯ ಸಿನಿಮಾ ರಂಗಕ್ಕೆ ಕಾಲಿಡುತ್ತಿರುವುದರ ಬಗ್ಗೆ ಖುಷಿ ಇದೆ. ಈಗಾಗಲೇ ಅವನ ಸಾಮರ್ಥ್ಯವನ್ನು ಅಳೆದಿರುವ ಕುಟುಂಬ ಸದಸ್ಯರು, ಅವನ ಬಗ್ಗೆ ಒಳ್ಳೇ ಮಾತುಗಳನ್ನಾಡುತ್ತಿದ್ದಾರಂತೆ. ಅಗಸ್ತ್ಯ ನಟನೆಯ ಪಟ್ಟುಗಳನ್ನು ವೇಗವಾಗಿ ಕಲಿಯುತ್ತಿದ್ದಾನೆ ಅನ್ನೋ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಅವರ ಅಪ್ಪ-ಅಮ್ಮ ನಟರಾಗದೇ ಇದ್ದುದರಿಂದ, ಆಗಸ್ತ್ಯನಿ ಬೆನ್ನಿಗೆ ತಾತ ಅಮಿತಾಭ್ ಹಾಗೂ ಅಂಕಲ್ ಅಭಿಷೇಕ್ ಬಚ್ಚನ್ ನಿಂತಿದ್ದಾರಂತೆ.

ಈ ಹಿಂದೆ, ಅಗಸ್ತ್ಯ ನಮ್ಮ ತಾತ ಅಮಿತಾಭ್ ಬಚ್ಚನ್ನೇ ಅವರ ದೊಡ್ಡ ಫ್ಯಾನ್ ನಾನು ಅಂತ ಹೇಳಿಕೊಂಡಿದ್ದರು. ಅಮಿತಾಭ್ ಅವರ ಸಾಂಪ್ರದಾಯಿಕ ಹಾಸ್ಯ ಅಂದರೆ ಮೊಮ್ಮಗನಿಗೆ ಅಚ್ಚುಮೆಚ್ಚಂತೆ. ಹೀಗೆ ಬಚ್ಚನ್ ಸಿನಿಮಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಯಾಗಿರುವುದರಿಂದ ಅತಿ ಶೀಘ್ರದಲ್ಲಿ ಕ್ಯಾಮೆರ ಎದುರು ನಿಲ್ಲುತ್ತಿದ್ದಾರೆ. ಇನ್ನೊಂದು ಮೂಲದ ಪ್ರಕಾರ, ಅಗಸ್ತ್ಯನಿಗೆ ಈಗಾಗಲೇ ಅನೇಕ ಸಿನಿಮಾ ಆಫರ್ ಗಳು ಬಂದಿದ್ದವಂತೆ. ಆದರೆ, ಸೋಯಾ ಅವರೊಂದಿಗೆ ಮಾತುಕತೆಯಾದ್ದರಿಂದ, ಇದು ಪೂರ್ಣಗೊಳ್ಳದೇ ಬೇರೆ ಸಿನಿಮಾ ಒಪ್ಪಿಕೊಳ್ಳದೇ ಕಾಯುತ್ತಿದ್ದರಂತೆ.

ಜೋಯಾ ಆಕ್ತರ್ ಅವರ ಈ ಸಿನಿಮಾದಲ್ಲಿ ಅಗಸ್ತ್ಯನ ಜೊತೆಗೆ ಸುಹಾನಾ ಖಾನ್ ಮತ್ತು ಖುಷಿ ಕಪೂರ್ ಕೂಡ ಮೊದಲ ಬಾರಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅಮಿತಾಭ್ ತಮ್ಮ ಟ್ವಿಟರ್ ಖಾತೆಯಲ್ಲಿ, ಅಗಸ್ತ್ಯನ ಹೊಸ ಬದುಕಿನ ಹೊಸ ಚಾಪ್ಟರ್ ಶುರುವಾಗುತ್ತಿದೆ. ನಮಗೆಲ್ಲಾ ಅದಕ್ಕಿಂತ ದೊಡ್ಡ ಖುಷಿ ಇನ್ನೊಂದಿಲ್ಲ. ನನ್ನ ಪ್ರೀತಿ, ಆಶೀರ್ವಾದ ಯಾವುಗಲೂ ಅವನಿಗೆ ಇದ್ದೇ ಇರುತ್ತದೆ. ನಮ್ಮ ಕುಟುಂಬದ ಕೀರ್ತಿ ಪತಾಕೆಯನ್ನು ಹಾರುತ್ತಿರುವಂತೆ ನೋಡಿಕೋ ಎಂದು ಅಮಿತಾಭ್ ಬರೆದುಕೊಂಡಿದ್ದರು.

ಇದನ್ನೂ ಓದಿ :KGF Chapter 2 : ಕೆಜಿಎಫ್-2 ಸಿನಿಮಾದ ಶೂಟಿಂಗ್ ನಡೆದ ಜಾಗ ಇದೀಗ, ಟೂರಿಸ್ಟ್‌ ಹಾಟ್‌ ಸ್ಪಾಟ್‌

ಇದನ್ನೂ ಓದಿ :KGF 2 Impact :ಮೆಗಾಸ್ಟಾರ್‌ ಚಿರಂಜೀವಿ ಚಿತ್ರದ ಮೇಲೂ ಪ್ರಭಾವ ಬೀರಲಿದೆಯೇ ಕೆಜಿಎಫ್‌ 2 !

(Amitabh Bachchan grandson confirms grandson Agastya Nanda’s debut with Zoya aktar’s the Archies)

Comments are closed.