ಅತೀ ಹೆಚ್ಚು ಡಿಸ್ ಲೈಕ್ ಪಡೆದ ಪಟ್ಟಿಯಲ್ಲಿ ಅಗ್ರಸ್ಥಾನ : ವಿಶ್ವದಾಖಲೆ ಬರೆದಿದೆ ಆಲಿಯಾ ‘ಸಡಕ್​ 2’ ಟ್ರೈಲರ್

0

ಭಾರತೀಯ ಚಿತ್ರರಂಗದಲ್ಲಿಯೇ ಆಲಿಯಾ ಭಟ್ ಅಭಿನಯದ ‘ಸಡಕ್ 2’ ಹೊಸ ದಾಖಲೆ ಸೃಷ್ಟಿಸಿದೆ. ಬಹು ನಿರೀಕ್ಷಿತ ಸಡಕ್-2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರದ ಟ್ರೈಲರ್ ಗೆ ನಾಲ್ಕೇ ನಾಲ್ಕು ದಿನದಲ್ಲಿ ಲಕ್ಷ ಲಕ್ಷ ಜನರಿಂದ ಡಿಸ್​ಲೈಕ್​ಗಳ ಸುರಿಮಳೆ ಹರಿದುಬಂದಿದೆ. ಅತಿ ಹೆಚ್ಚು ಡಿಸ್​ಲೈಕ್​ ವಿಶ್ವದ ಮೂರನೇ ಹಾಗೂ ಭಾರತದ ಮೊದಲ ಚಿತ್ರವಾಗಿದೆ.

ಸಡಕ್ -2 ಸಿನಿಮಾದ ಟ್ರೈಲರ್ ಬಿಡುಗಡೆಯಾದ ನಾಲ್ಕೇ ನಾಲ್ಕು ದಿನಕ್ಕೆ ಬರೋಬ್ಬರಿ 5.1 ಕೋಟಿ (51 ಮಿಲಿಯನ್ ) ವೀಕ್ಷಣೆಯನ್ನು ಕಂಡಿದ್ರೆ, ಬರೋಬ್ಬರಿ ಒಂದು ಕೋಟಿ ( 10 ಮಿಲಿಯನ್ ) ಮಂದಿ ಡಿಸ್ ಲೈಕ್ ಒತ್ತಿದ್ದಾರೆ. ಈ ಮೂಲಕ ಅತೀ ಹೆಚ್ಚು ಡಿಸ್ ಲೈಕ್ ಪಡೆದ ವಿಶ್ವದ ಮೂರನೇ ಸಿನಿಮಾ ಎಂಬ ಅಪಖ್ಯಾತಿಗೆ ಪಾತ್ರವಾಗಿದೆ.

ಯೂಟ್ಯೂಬ್ ಸಂಸ್ಥೆಯೇ ಅಪ್ ಲೋಡ್ ಮಾಡಿರುವ ಎ ರಿವೈಂಡ್ ಆಫ್​ ದಿ ಇಯರ್​ 2018 ಹಾಡಿಗೆ ಒಟ್ಟು 18.2 ಮಿಲಿಯನ್​ ಡಿಸ್​ಲೈಕ್​ ಪಡೆಯುವ ಮೂಲಕ ವಿಶ್ವದಲ್ಲಿಯೇ ಅಗ್ರಸ್ಥಾನದಲ್ಲಿದೆ.

ಇನ್ನು ಖ್ಯಾತ ಪಾಪ್​ ಗಾಯಕ ಜಸ್ಟಿನ್​ ಬೇಬರ್ ಅವರ ಬೇಬಿ ಹಾಡಿಗೆ 11 ಮಿಲಿಯನ್​ ಡಿಸ್​ಲೈಕ್​ ಪಡೆದುಕೊಂಡಿದ್ದಾರೆ.

ಇದೀಗ ಸಡಕ್-2 ಚಿತ್ರದ ಟ್ರೈಲರ್ ಭಾರತೀಯ ಚಿತ್ರರಂಗದಲ್ಲಿಯೇ ಅವಕೃಪೆಗೆ ಪಾತ್ರವಾದ ಸಿನಿಮಾಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ಬಂದು ನಿಂತಿದೆ.

ಬಾಲಿವುಡ್ ನಟ ಸುಶಾಂತ್​ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ ಸ್ವಜನಪಕ್ಷಪಾತ ವಿಚಾರವಾಗಿ ಆಲಿಯಾ ಭಟ್​ ಸೇರಿ ಸಡಕ್​ ಚಿತ್ರಕ್ಕೆ ಟ್ರೋಲ್​ ಮಾಡಲಾಗುತ್ತಿತ್ತು. ಇದೀಗ ಚಿತ್ರದ ಟ್ರೈಲರ್ ಡಿಸ್ ಲೈಕ್ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಬಾಲಿವುಡ್ ನ ಬಹು ನಿರೀಕ್ಷಿತ ಸಿನಿಮಾವನ್ನು ನಿಷೇಧಿಸುವಂತೆಯೇ ನೆಟ್ಟಿಗರು ಧ್ವನಿಗೂಡಿಸಿದ್ದಾರೆ. ಸಡಕ್ 2 ಚಿತ್ರ ಇದೇ ಅಗಸ್ಟ್ 28ಕ್ಕೆ ಡಿಸ್ನಿ ಹಾಟ್ ಸ್ಟಾರ್ ನಲ್ಲಿ ರಿಲೀಸ್ ಆಗಲಿದೆ.

Leave A Reply

Your email address will not be published.