ಇಂದು ಕನ್ನಡ ಚಿತ್ರರಂಗದ ಖ್ಯಾತ ನಟ ಧ್ರುವ ಸರ್ಜಾ (Dhruva Sarja Birthday Celebration) ಅವರಿಗೆ ಹುಟ್ಟು ಹಬ್ಬದ ಸಂಭ್ರಮಾಚರಣೆ. ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ತಂದೆಯಾಗಿರುವ ಧ್ರುವ ಸರ್ಜಾಗೆ ಈ ವರ್ಷದ ಹುಟ್ಟುಹಬ್ಬ ಬಹಳ ವಿಶೇಷವಾಗಿದೆ. ಆ ಬೆನ್ನಲ್ಲೇ ಹುಟ್ಟುಹಬ್ಬ ಬಂದಿರುವುದರಿಂದ ಅಭಿಮಾನಿಗಳು ಸಂಬಂಧಿಕರು, ಸ್ನೇಹಿತರು ಹಾಗೂ ಅನೇಕ ಸಿನಿಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯವನ್ನು ಕೋರಿದ್ದಾರೆ. ಧ್ರುವ ಸರ್ಜಾ ಪ್ರತಿ ವರ್ಷ ತಮ್ಮ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಈ ಬಾರಿ ಅಭಿಮಾನಿಗಳಿಗೆ ನೀವು ಇರುವ ಜಾಗದಿಂದಲೇ ಹರಸಿ ಎಂದು ಹೇಳಿಕೊಂಡಿದ್ದಾರೆ. ಅದಕ್ಕೆ ಕಾರಣವನ್ನು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಹುಟ್ಟಿರುವ ಮಗುವಿನ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಈ ರೀತಿ ಹೇಳಿದ್ದಾರೆ. ಇನ್ನೂ ಪತ್ನಿ ಮತ್ತು ಮಗು ಆಸ್ಪತ್ರೆಯಲ್ಲಿ ಇರುವುದರಿಂದ ಧ್ರುವ ಅಲ್ಲಿಗೆ ಹೋಗಿ ಬರುತ್ತಿರುತ್ತಾರೆ. ಆ ಕಾರಣದಿಂದ ಸಾರ್ವಜನಿವಾಗಿ ಬೆರೆಯುವುದು ಸರಿಯಲ್ಲ ಎಂದು ತಿರ್ಮಾನಿಸಿ ಅವರು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಿಲ್ಲ.
ಸ್ಯಾಂಡಲ್ವುಡ್ನಲ್ಲಿ ಧ್ರುವ ಸರ್ಜಾ ಬಹು ಬೇಡಿಕೆಯ ನಟರಾಗಿದ್ದಾರೆ. ಅವರು ನಟಿಸಿದ “ಅದ್ದೂರಿ”, “ಬಹದ್ದೂರ್”, “ಭರ್ಜರಿ” ಚಿತ್ರಗಳ ಮೂಲಕ ಹ್ಯಾಟ್ರಿಕ್ ಗೆಲುವನ್ನು ಪಡೆದುಕೊಳ್ಳುವ ಮೂಲಕ ಹೆಚ್ಚಿನ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ೨೦೨೧ರಲ್ಲಿ ಬಿಡುಗಡೆಯಾದ “ಪೊಗರು” ಸಿನಿಮಾದಲ್ಲಿ ಮಾಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ನಂತರ “ಮಾರ್ಟಿನ್” ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಈ ಸಿನಿಮಾಕ್ಕಾಗಿ ಅವರು ತೊಳಲ್ಲಿ ಹಾಕಿಕೊಂಡ ಟ್ಯಾಟು ಎಲ್ಲರ ಗಮನ ಸೆಳೆದಿದೆ. ಹಾಗೆ ಈ ಸಿನಿಮಾದ ಮೇಲೆ ಸಿನಿಪ್ರೇಕ್ಷಕರಲ್ಲಿ ಬಹಳಷ್ಟು ನಿರೀಕ್ಷೆಗಳನ್ನು ಮೂಡಿಸಿದೆ.
ಇದನ್ನೂ ಓದಿ : Kiccha Sudeep : “ಹೊಂಬಾಳೆ ಫಿಲ್ಮ್ಸ್” ನಿರ್ಮಾಣದಲ್ಲಿ ಸುದೀಪ್ ಸಿನಿಮಾ: ಕಾರ್ತೀಕ್ ಕೊಟ್ರು ಕ್ಲೂ
ಇದನ್ನೂ ಓದಿ : Dhruva Sarja : ಅಜ್ಜಿ,ಅಣ್ಣನ ಅಗಲಿಕೆ ಕಾಡ್ತಿದೆ: ಅದ್ದೂರಿ ಬರ್ತಡೇ ಬೇಡ ಎಂದ ಧ್ರುವ ಸರ್ಜಾ
ಇದನ್ನೂ ಓದಿ : Rayan Raj Sarja : ಅಪ್ಪು ಕಂಡು ರಾಯನ್ ರಾಜ್ ಸರ್ಜಾ ಏನಂದ್ರು ಗೊತ್ತಾ? ಇಲ್ಲಿದೆ ಎಕ್ಸಕ್ಲೂಸಿವ್ ವಿಡಿಯೋ
ಪ್ಯಾನ್ ಇಂಡಿಯಾ ಮಟ್ಟದಲ್ಲಿ “ಮಾರ್ಟಿನ್” ಸಿನಿಮಾ ನಿರ್ಮಾಣವಾಗುತ್ತಿದೆ. ಇನ್ನೂ ಈ ಸಿನಿಮಾಕ್ಕೆ ನಿರ್ದೇಶಕ ಎ.ಪಿ. ಅರ್ಜುನ್ ನಿರ್ದೇಶನ ಮಾಡುತ್ತಿದ್ದಾರೆ. “ಮಾರ್ಟಿನ್” ಸಿನಿಮಾದ ಟೀಸರ್ ಮತ್ತು ಪೋಸ್ಟರ್ ಬಿಡುಗಡೆಯಾಗಿದ್ದು, ಅದನ್ನು ನೋಡಿದ ಸಿನಿಪ್ರೇಕ್ಷಕರಲ್ಲಿ ಕುತೂಹಲವನ್ನು ಮೂಡಿಸಿದೆ. ಹಾಗೆ ಚಿತ್ರತಂಡ ಧ್ರುವ ಸರ್ಜಾ ಬರ್ತಡೆ ಪ್ರಯುಕ್ತ “ಮಾರ್ಟಿನ್” ಸಿನಿಮಾದ ಹೊಸ ಪೋಸ್ಟರ್ನ್ನು ಬಿಡುಗಡೆ ಮಾಡಿದ್ದಾರೆ.
#Martin Action Prince @DhruvaSarja Birthday Special Poster 🔥🔥🔥#HBDDhruvaSarja
— M.L.Prabhakaran. (@muniPrabhakaran) October 5, 2022
#martinthemovie @princekukm @I_am_Vaibhavi @satyaphegde @kaanistudio @IamAnveshi @nikitindheer @nawwabshahs #vasavienterprises #aparjunfilms @AP_Arjun_film pic.twitter.com/Wa6lJwZrt3
Dhruva Sarja’s Birthday Celebration: No celebration with fans this year
Comments are closed.