Director SK Bhagavan: ಜೀವನದ ಅಧ್ಯಾಯ ಮುಗಿಸಿದ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಭಗವಾನ್

ಬೆಂಗಳೂರು: (Director SK Bhagavan) ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್‌.ಕೆ ಭಗವಾನ್‌ ಅವರು ಇಂದು ಮುಂಜಾನೆ 6 ಗಂಟೆಗೆ ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. 90 ವರ್ಷ ಪೂರೈಸಿದ ಇವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಇಂದು ತಮ್ಮ ಜೀವನದ ಪಯಣವನ್ನು ಮುಗಿಸಿ ಇಹಲೋಕ ತ್ಯಜಿಸಿದ್ದಾರೆ.

ಭಗವಾನ್‌ ಅವರು 1933 ಜುಲೈ 5 ರಂದು ಜನಿಸಿದ್ದು, ಬೆಂಗಳೂರಿನಲ್ಲಿ ಪ್ರೌಡಶಿಕ್ಷಣವನ್ನು ಮುಗಿಸಿದರು. ಮೊದಲಿಗೆ ನಾಟಕದಲ್ಲಿ ಬಣ್ಣ ಹಚ್ಚಿದ ಇವರು ನಂತರ ಕಣಗಲ್‌ ಪ್ರಭಾಕರ್‌ ಶಾಸ್ತ್ರಿ ಅವರೊಂದಿಗೆ ಸಹಾಯಕ ನಿರ್ದೇಶಕರಾಗಿ ಭಾಗ್ಯೋದಯ ಸಿನಿಮಾದಲ್ಲಿ ಕೆಲಸ ಮಾಡಿದರು. ನಂತರ 1966 ರಲಿ ತೆರೆಗೆ ಬಂದ ಸಂಧ್ಯಾರಾಗ ಸಿನಿಮಾ ಮೂಲಕ ನಿರ್ದೇಶಕರಾಗಿ ಹೊರಹೊಮ್ಮಿದರು.

ಕನ್ನಡ ಚಿತ್ರರಂಗದಲ್ಲಿ ಬಾಂಡ್‌ ಶೈಲಿಯ ಸಿನಿಮಾಗಳನ್ನು ದೋರೈ ಭಗವಾನ್‌ ಪರಿಚಯಿಸಿದರು. 1968 ರಲ್ಲಿ ತೆರೆಗೆ ಬಂದ ರಾಜ್‌ ಕುಮಾರ್‌ ನಟನೆಯ ಜೇಡರ ಬಲೆ ಚಿತ್ರಕ್ಕೆ ದೊರೈ- ಭಗವಾನ್‌ ನಿರ್ದೇಶನ ಮಾಡಿದ್ದು, ಈ ಸಿನಿಮಾ ಯಶಸ್ವಿಯಾಗಿ ಹೊರಹೊಮ್ಮಿತು. ಇದು ಕನ್ನಡದ ಮೊದಲ ಬಾಂಡ್ ಶೈಲಿಯ ಸಿನಿಮಾವಾಗಿ ‍್ಯಾತಿ ಪಡೆಯಿತು. 30 ಕ್ಕೂ ಅಧಿಕ ಸಿನಿಮಾಗಳಲ್ಲಿ ರಾಜ್‌ ಕುಮಾರ್‌ ಜೊತೆ ಭಗವಾನ್‌ ಕೆಲಸ ಮಾಡಿದ್ದು, ಈ ಎಲ್ಲಾ ಸಿನಿಮಾಗಳು ಬಾಕ್ಸ್‌ ಫೀಸ್‌ ನಲ್ಲಿ ಹಿಟ್‌ ಆದವು.

ಇದೀಗ ಇವರ ಸಾವು ಕನ್ನಡ ಚಿತ್ರರಂಗಕ್ಕೆ ಕಹಿ ಸುದ್ದಿಯಾಗಿದ್ದು, ಭಗವಾನ್‌ ನಿಧನಕ್ಕೆ ಹಲವು ಸಿನಿಪ್ರಿಯರು, ಗಣ್ಯರು ಹಾಗೂ ಕನ್ನಡ ಚಿತ್ರರಂಗದ ಹಿರಿಯರು ಸಂತಾಪವನ್ನು ಸೂಚಿಸಿದ್ದಾರೆ. ಇಂದು 12 ಗಂಟೆಗೆ ಅಚರ ಪಾರ್ಥೀವ ಶರೀರವನ್ನು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುವುದು.

ಇದನ್ನೂ ಓದಿ : ಸ್ಯಾಂಡಲ್‌ವುಡ್‌ ಸಿನಿಪಯಣದಲ್ಲಿ 37 ವರ್ಷ ಪೂರೈಸಿದ ನಟ ಶಿವರಾಜ್‌ಕುಮಾರ್‌

ಇದನ್ನೂ ಓದಿ : ನಟ ದರ್ಶನ ಪತ್ನಿ ಆಕ್ರೋಶಕ್ಕೆ ಪ್ರತಿಕ್ರಿಯೇ ನೀಡದೇ ಪೋಸ್ಟ್‌ ಡಿಲೀಟ್‌ ಮಾಡಿದ ನಟಿ ಮೇಘಾ ಶೆಟ್ಟಿ

ಇದನ್ನೂ ಓದಿ : Tatsama Tadbhava movie : ತಮ್ಮ ಮುಂದಿನ ಸಿನಿಮಾದ ಟೈಟಲ್‌ ರಿವೀಲ್‌ ಮಾಡಿದ ನಟಿ ಮೇಘನಾ ರಾಜ್‌

Director SK Bhagavan: Bhagavan is a famous director of Kannada cinema who has completed his life chapter

Comments are closed.