Justin Bieber : ಖ್ಯಾತ ಪಾಪ್​ ಗಾಯಕ ಜಸ್ಟಿನ್​ ಬೈಬರ್​ಗೆ ಮುಖದ ಪಾರ್ಶ್ವವಾಯು ಕಾಯಿಲೆ

Justin Bieber : ಖ್ಯಾತ ಪಾಪ್​ ಗಾಯಕ ಜಸ್ಟಿನ್ ಬೈಬರ್​ ಹೆಸರು ಕೇಳಿದ್ರೆ ಸಾಕು ಯುವ ಜನತೆ ಹುಚ್ಚೆದ್ದು ಕುಣಿಯುತ್ತಾರೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಪ್ರತಿಭೆಯ ಮೂಲಕ ಜಸ್ಟಿನ್​ ಬೈಬರ್​ ಮನೆ ಮಾತಾಗಿದ್ದಾರೆ ಎಂದರೆ ತಪ್ಪಾಗಲಾರದು. ಕೆನಡಾ ಮೂಲದ 28 ವರ್ಷದ ಈ ಗಾಯಕ 2008ರಲ್ಲಿಯೇ ತಮ್ಮ ಕಂಠಸಿರಿಯ ಮೂಲಕ ಯುವ ಜನತೆಯ ಮನಸ್ಸನ್ನು ಕದಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ತಮ್ಮ ಜಸ್ಟೀಸ್​ ವರ್ಲ್ಡ್​ ಟೂರ್​ನಲ್ಲಿ ಬ್ಯುಸಿಯಾಗಿದ್ದ ಜಸ್ಟಿನ್​ ಬೈಬರ್​ ಇದೀಗ ತಮ್ಮ ಅಭಿಮಾನಿಗಳಿಗೆ ಶಾಕಿಂಗ್​ ನ್ಯೂಸ್​ ನೀಡಿದ್ದಾರೆ.

ಶುಕ್ರವಾರದಂದು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್​ ಮಾಡಿರುವ ಪಾಪ್​ ಗಾಯಕ ಜಸ್ಟಿನ್​ ಬೈಬರ್​ ತಾವು ರಾಮ್ಸೆ ಹಂಟ್​ ಸಿಂಡ್ರೋಮ್​ನಿಂದ ಬಳಲುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ಈ ಕಾಯಿಲೆಯು ಮುಖದ ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ. ಈ ಕಾಯಿಲೆಯಿಂದಾಗಿ ತಾವು ತಮ್ಮ ಜಸ್ಟೀಸ್​ ವರ್ಲ್ಡ್​ ಟೂರ್​ನ್ನು ರದ್ದುಗೊಳಿಸುತ್ತಿರುವುದಾಗಿ ಹೇಳಿದ್ದಾರೆ. ಟೊರ್ನೋಟೋದಲ್ಲಿ ನಿಗದಿಯಾಗಿದ್ದ ಸಂಗೀತ ಕಾರ್ಯಕ್ರಮಕ್ಕೂ ಕೆಲವು ಗಂಟೆಗಳ ಮುನ್ನ ಜಸ್ಟಿನ್​ ಬೈಬರ್​ ಅನಾರೋಗ್ಯದಿಂದ ಕಾರ್ಯಕ್ರಮ ನಡೆಸುತ್ತಿಲ್ಲವೆಂದು ಹೇಳಿದ್ದರು.

ರಾಮ್ಸೆ ಹಂಟ್​ ಸಿಂಡ್ರೋಮ್​ ಎನ್ನುವುದು ಒಂದು ಮುಖದ ಪಾರ್ಶ್ವವಾಯುವಾಗಿದ್ದು ಇದು ಕಿವಿಯ ಸಮೀಪವಿರುವ ಮುಖದ ನರಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಇದು ಶ್ರವಣ ನಷ್ಟವನ್ನೂ ಸಹ ಉಂಟು ಮಾಡಬಹುದು. ನೀವೆಲ್ಲರೂ ನೋಡುತ್ತಿರುವಂತೆ ನನ್ನ ಈ ಕಣ್ಣು ಮಿಟುಕಿಸಲು ಆಗುತ್ತಿಲ್ಲ. ನನ್ನ ಈ ಭಾಗದ ಮುಖ ನಗುತ್ತಿಲ್ಲ. ಈ ಮೂಗಿನ ಹೊಳ್ಳೆ ಚಲಿಸುತ್ತಿಲ್ಲ ಎಂದು ಬೈಬರ್​ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ನನ್ನ ಮುಖದ ಈ ಭಾಗವು ಸಂಪೂರ್ಣ ಪಾರ್ಶ್ವವಾಯುವಿಗೆ ಗುರಿಯಾಗಿದೆ. ನನ್ನ ಮುಂದಿನ ಪ್ರದರ್ಶನಗಳು ರದ್ದುಗೊಂಡಿದ್ದ ಬಗ್ಗೆ ನಿರಾಶರಾಗಿದ್ದವರಿಗೆ ನಾನು ಹೇಳುವುದು ಇಷ್ಟೇ, ನಾನು ದೈಹಿಕವಾಗಿ ಈ ಪ್ರದರ್ಶನಗಳನ್ನು ನಡೆಸಲು ಸಮರ್ಥನಾಗಿಲ್ಲ. ನೀವೇ ನೋಡುತ್ತಿರುವಂತೆ ಇದೊಂದು ಗಂಭೀರ ಸಮಸ್ಯೆ ಎಂದು ಬೈಬರ್​ ಹೇಳಿದ್ದಾರೆ.

ಪಾಪ್​ ಗಾಯಕ ಪಾರ್ಶ್ವವಾಯುವಿನಿಂದ ಪಾರಾಗಲು ಮುಖದ ವ್ಯಾಯಾಮಗಳನ್ನು ಮಾಡುತ್ತಿದ್ದಾರೆ. ವಿಶ್ರಾಂತಿ ಪಡೆಯುತ್ತಿದ್ದಾರೆ. ತಾನು ಯಾವಾಗ ಹುಷಾರಾಗಬಹುದು ಎಂಬುದಕ್ಕೆ ಬೈಬರ್​ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಇದನ್ನು ಓದಿ : Mask Compulsory : ರಾಜ್ಯಕ್ಕೆ ಮತ್ತೆ ಕೊರೋನಾ ಆತಂಕ : ಮಾಸ್ಕ್ ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರ

ಇದನ್ನೂ ಓದಿ : British Tourist Raped : ಮಸಾಜ್​ ನೆಪದಲ್ಲಿ ವಿದೇಶಿ ಮಹಿಳೆ ಮೇಲೆ ಗೋವಾದಲ್ಲಿ ಅತ್ಯಾಚಾರ : ಆರೋಪಿ ಬಂಧನ

“Eye Is Not Blinking”: Justin Bieber Says Suffering From Facial Paralysis

Comments are closed.