ನಟ ರಮೇಶ್ ಅಭಿಮಾನಿಗಳಿಗೆ ಸಿಹಿಸುದ್ದಿ : ಮತ್ತೆ ಬರ್ತಿದ್ದಾರೆ ಶಿವಾಜಿ ಸುರತ್ಕಲ್

ಸ್ಯಾಂಡಲ್‌ವುಡ್‌ನಲ್ಲಿ ಅದ್ಭುತ ನಟನೆ, ಅ್ಯಂಕರಿಂಗ್ ಹಾಗೂ ಸೆಲೆಬ್ರೆಟಿ ಶೋ ಹೀಗೆ ಬಹುಮುಖ ಪ್ರತಿಭೆಯಾಗಿ ಸದ್ದು ಮಾಡಿದ ನಟ ರಮೇಶ್ ಅರವಿಂದ್ (Actor Ramesh fans) ಮೊನ್ನೆ ಮೊನ್ನೆ ಅಭಿಮಾನಿಗಳಿಗೆ ಸಿಹಿಸುದ್ದಿ‌ನೀಡಿದ್ದರು. ರಮೇಶ್ ಹೋಸ್ಟ್ ಮಾಡೋ ಜನಪ್ರಿಯ ಶೋ ವೀಕೆಂಡ್ ವಿತ್ ರಮೇಶ್ ಆರಂಭದ ಮುನ್ಸೂಚನೆ ನೀಡಿದ್ದ ಹೀರೋ ರಮೇಶ್ ಈಗ ಬೆಳ್ಳಿ ತೆರೆಗೆ ಸಿನಿಮಾದ ಮೂಲಕ ಎಂಟ್ರಿ ಕೊಡ್ತಿರೋ ಬಿಗ್ ಬ್ರೇಕಿಂಗ್ ನ್ಯೂಸ್ ರಿವೀಲ್ ಮಾಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ವಿಭಿನ್ನ ಭೂಮಿಕೆಯ ಸಿನಿಮಾಗಳ ಮೂಲಕ ಸದ್ದು ಮಾಡಿದ್ದ ನಟ ರಮೇಶ್ ಮತ್ತೊಂದು ವಿಭಿನ್ನ ಕತೆ ಯೊಂದಿಗೆ ತೆರೆಗೆ ಬರಲು ಸಿದ್ಧವಾಗಿದ್ದಾರೆ. ಬಿರು ಬೇಸಿಗೆಯ ನಡುವೆ ತಣ್ಣನೆಯ ಮನೋರಂಜನೆ ನೀಡಲು ರಮೇಶ್ ಅರವಿಂದ್ ನಟನೆಯ 103 ನೇ ಸಿನಿಮಾ ಏಪ್ರಿಲ್ 14 ರಂದು ತೆರೆಗೆ ಬರಲಿದೆ.

ಶಿವಾಜಿ ಸುರತ್ಕಲ್-2 ದಿ ಮಿಸ್ಟಿರಿಯಸ್ ಕೇಸ್ ಆಫ್ ಮಾಯಾವಿ ಸಿನಿಮಾ ತೆರೆಗೆ ಬರಲಿದ್ದು, ಮತ್ತೊಂದು ಕ್ರೈಂ ಥ್ರಿಲ್ಲರ್ ಕತೆಯೊಂದಿಗೆ ಅಭಿಮಾನಿಗಳು ಮನಗೆಲ್ಲಲು ಸೈಲೆಂಟ್ ಹೀರೋ ಸಜ್ಜಾಗಿದ್ದಾರೆ. ಅಂಜನಾದ್ರಿ ಸಿನಿ ಕ್ರಿಯೇಶನ್ಸ್ ನಿರ್ಮಾಣ ಮಾಡ್ತಿರೋ ಈ ಸಿನಿಮಾಕ್ಕೆ ಆಕಾಶ್ ಶ್ರೀವತ್ಸ ಚಿತ್ರಕಥೆ ಬರೆದು ಸಂಕಲನ ಸಿದ್ಧಪಡಿಸಿದ್ದಾರೆ. ಗುರುಪ್ರಸಾದ್ ಹಾಗೂ ದರ್ಶನ್ ಅಂಬಟ್ ಛಾಯಾಗ್ರಹಣವಿರುವ ಈ ಸಿನಿಮಾಕ್ಕೆ ಅನೂಪ್ ಗೌಡ ಹಾಗೂ ರೇಖಾ ಕೆ ಎನ್ ಚಿತ್ರಕಥೆ ಬರೆದಿದ್ದಾರೆ.

ಕೇವಲ ರಮೇಶ್ ಅರವಿಂದ್ ಮಾತ್ರವಲ್ಲದೇ ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರೋ ಈ ಸಿನಿಮಾದಲ್ಲಿ ಚಾರ್ಲಿ 777 ಸಿನಿಮಾದ ಸಂಗೀತಾ ಶೃಂಗೇರಿ ಹಾಡೊಂದಕ್ಕೆ ಹೆಜ್ಜೆ ಹಾಕಿ ಸಿನಿಮಾದ ಮೆರುಗು ಹೆಚ್ಚಿಸಿದ್ದಾರೆ. ಪ್ರಸ್ತುತ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಈ ಸಿನಿಮಾದಲ್ಲಿ ಶಿವಾಜಿ ಕೇಸ್ ನಂ 131 ಹಿಂದೆ ಬಿದ್ದು ಪರದಾಡುವ ಕತೆಯನ್ನು ಸಿನಿಮಾ ತೆರೆಗೆ ಬರಲಿದೆ.

ಇದನ್ನೂ ಓದಿ : ಮಾಜಿ ಗೆಳಯನಿಂದ ಹಲ್ಲೆಗೊಳಗಾದ ಮಲಯಾಳಂ ನಟಿ ಅನಿಕಾ ವಿಕ್ರಮನ್‌

ಇದನ್ನೂ ಓದಿ : Janhvi Kapoor: ಕನಸು ಈಡೇರಿಸಿಕೊಂಡ ಖುಷಿಯಲ್ಲಿ‌ ಜಾಹ್ನವಿ ಕಪೂರ್

ಇದನ್ನೂ ಓದಿ : “ಕಬ್ಜ” ಬಿಡುಗಡೆಗೂ ಮುನ್ನವೇ ಪಾರ್ಟ್‌ 2 ಬಗ್ಗೆ ಕನ್ಫರ್ಮ್ ಮಾಡಿದ ಆರ್‌ ಚಂದ್ರು

ನೀರಿಕ್ಷೆಯಂತೆ ಏಪ್ರಿಲ್ 14 ರ ಸರ್ಕಾರಿ ರಜೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಒಟ್ಟು 150 ಸಿನಿಮಾಮಂದಿರದಲ್ಲಿ ಏಕಕಾಲಕ್ಕೆ ಸಿನಿಮಾ ತೆರೆಕಾಣಲಿದೆ. ಶಿವಾಜಿ ಸುರತ್ಕಲ್ ಸಿನಿಮಾ ವಿಭಿನ್ನ ಕತೆ ಹಾಗೂ ನಿರೂಪಣೆ ಯೊಂದಿಗೆ ಗೆದ್ದಿತ್ತು. ಈಗ ಶಿವಾಜಿ ಸುರತ್ಕಲ್ 2 ಮತ್ತೆ ಪ್ರೇಕ್ಷಕರ ಮನಮೋಡಿ ಮಾಡುವ ಭರವಸೆ ಮೂಡಿಸಿದೆ. ಇದೆಲ್ಲದರ ಜೊತೆ ದಶಕದಿಂದ ಸಿನಿಮಾ ರಂಗದಲ್ಲಿರೋ ರಮೇಶ್ ಅರವಿಂದ್ ಅವರಿಗೆ ಇದು 103 ನೇ ಸಿನಿಮಾ ಅನ್ನೋದು ಕೂಡ ಇನ್ನೊಂದು ವಿಶೇಷತೆ ಆಗಿದೆ.

Good news for actor Ramesh fans: Shivaji Surathkal is back

Comments are closed.