ಸಿನಿಮಾ ಪ್ರೇಮಿಗಳಿಗೆ ಗುಡ್ ನ್ಯೂಸ್: ‘3 ಇಡಿಯಟ್ಸ್’ 2 ಬಗ್ಗೆ ಬಿಗ್ ಅಪ್‌ಡೇಟ್ ನೀಡಿದ ಆಮೀರ್ ಖಾನ್!
'3 ಇಡಿಯಟ್ಸ್' 2 ಸಿನಿಮಾದ ಸಿಕ್ವೇಲ್ ಕುರಿತಂತೆ ಬಿಗ್ ಅಪ್‌ಡೇಟ್ ಹೊರಬಿದ್ದಿದ್ದು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

2009ರಲ್ಲಿ ತೆರೆ ಕಂಡು ಭರ್ಜರಿ ಪ್ರದರ್ಶನ ಕಂಡಿದ್ದ 3 ಇಡಿಯಟ್ಸ್ ಸಿನಿಮಾಗೆ ತನ್ನದೇ ಆದ ಅಭಿಮಾನಿ ಬಳಗವಿದೆ. ಈ ಸಿನಿಮಾ ತೆರೆಕಂಡು ಈಗಾಗಲೇ ಸರಿ ಸುಮಾರು 17 ವರ್ಷಗಳೇ ಕಳೆಯುತ್ತಾ ಬಂದಿದೆ. ಆದರೆ ಈ ಸಿನಿಮಾದ ಸಿಕ್ವೇಲ್ ಬಗ್ಗೆ ಸಾಕಷ್ಟು ಊಹಾಪೋಹಗಳು ಕೇಳಿ ಬರುತ್ತಿತ್ತಾದರೂ, ಅಧಿಕೃತ ಮಾಹಿತಿ ಹೊರಬಿದ್ದಿರಲಿಲ್ಲ. ಕೊನೆಗೂ ಈ ಸಿನಿಮಾದ ಸಿಕ್ವೇಲ್ ಕುರಿತಂತೆ ಬಿಗ್ ಅಪ್‌ಡೇಟ್ ಹೊರಬಿದ್ದಿದ್ದು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಹೌದು..! ಬರೋಬ್ಬರಿ 17 ವರ್ಷಗಳ ಬಳಿಕ ಮತ್ತೊಮ್ಮೆ ತೆರೆಗೆ ಮರಳಲು ರಾಂಚೋ – ಫರಾನ್ ಹಾಗೂ ರಾಜು ಸಜ್ಜಾಗಿದ್ದಾರೆ. ಈ ಬಗ್ಗೆ ಸ್ವತಃ ನಟ ಆಮೀರ್ ಖಾನ್ ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ಕುಮಾರ್ ಹಿರಾನಿ ಈ ಸಿನಿಮಾದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ಕತೆ ಬಹಳ ಸುಂದರವಾಗಿ ಮೂಡಿ ಬಂದಿದೆ ಎಂದು ನಟ ಆಮೀರ್ ಖಾನ್ ಹೇಳಿದ್ದಾರೆ.
ಇದನ್ನೂ ಓದಿ : 31 ವರ್ಷಗಳ ಜೈಲು ಶಿಕ್ಷೆ ಮರೆತು ಅಮಾಯಕರ ಪರ ನಿಂತ ಪೆರಾರಿವಾಲನ್: ‘ನ್ಯಾಯದೂತ’ನ ಹೊಸ ಅವತಾರ!
ಈ ಸಿನಿಮಾದಲ್ಲಿ ಅಮೀರ್ ಖಾನ್, ಆರ್. ಮಾಧವನ್, ಶರ್ಮನ್ ಜೋಶಿ, ಕರೀನಾ ಕಪೂರ್ ಮತ್ತು ಬೋಮನ್ ಇರಾನಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 3 ಇಡಿಯಟ್ಸ್ 2ನಲ್ಲಿ ಯಾವೆಲ್ಲ ತಾರಾಗಣ ಇರಲಿದೆ ಎಂಬುದರ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ಹೊರಬಿಚ್ಚಿಲ್ಲ.
ಸದ್ಯ ಆಮೀರ್ ಖಾನ್ ನಟನೆಯ ಯಾವುದೇ ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡಿಲ್ಲ. ತಾರೆ ಜಮೀನ್ ಪರ್ ಮಾದರಿಯಲ್ಲೇ ಮೂಡಿಬಂದ ಸಿತಾರೆ ಜಮೀನ್ ಪರ್ ಕೂಡ ಸಾಧಾರಣ ಯಶಸ್ಸು ಕಂಡಿತ್ತು. ಸ್ಪ್ಯಾನಿಷ್ ಚಲನಚಿತ್ರ ‘ಕ್ಯಾಂಪಿಯೋನ್ಸ್’ ನ ರಿಮೇಕ್ ಆದ ಈ ಸಿನಿಮಾದಲ್ಲಿ ಆಮೀರ್ ಬಾಸ್ಕೇಟ್ ಬಾಲ್ ತರಬೇತುದಾರನಾಗಿ ನಟಿಸಿದ್ದರು. ಇದೀಗ 3 ಇಡಿಯಟ್ಸ್ ಸಿನಿಮಾ ಸಿಕ್ವೇಲ್ಗೆ ತಯಾರಿ ಶುರುವಾಗಿದ್ದು ,ಈ ಫಿಲಂ ಮೂಲಕವಾದರೂ ಆಮೀರ್ ಬಾಕ್ಸಾಫೀಸಿನಲ್ಲಿ ಸದ್ದು ಮಾಡುವಲ್ಲಿ ಮತ್ತೆ ಯಶಸ್ವಿಯಾಗ್ತಾರಾ ಅನ್ನೋದನ್ನ ಕಾದು ನೋಡ್ಬೇಕಿದೆ.



