Gowli Movie : ಸ್ಯಾಂಡಲ್‌ವುಟ್‌ ನಟ ಶ್ರೀನಗರ ಕಿಟ್ಟಿ “ಗೌಳಿ” ಬಿಡುಗಡೆ ಡೇಟ್‌ ಫಿಕ್ಸ್

ಸ್ಯಾಂಡಲ್‌ವುಡ್‌ನ ಮುದ್ದು ಮುಖದ ಲವರ್ ಬಾಯ್ ಆಗಿದ್ದ ಶ್ರೀನಗರ ಕಿಟ್ಟಿ ಈಗ ಅವತಾರವನ್ನು ಪೂರ್ಣವಾಗಿ ಬದಲಾಯಿಸಿಕೊಂಡು ಬಿಟ್ಟಿದ್ದಾರೆ. ಹೆಣ್ಣುಮಕ್ಕಳ ಜಡೆಯಷ್ಟುದ್ದ ಗಡ್ಡ ಬಿಟ್ಟು ಭಯಾನಕ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟು ದಿನ ರೊಮ್ಯಾಂಟಿಕ್ ಪ್ರೇಮಕತೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಶ್ರೀನಗರ ಕಿಟ್ಟಿ, ತಮ್ಮ ಲುಕ್‌ ಜೊತೆಗೆ ಕಥೆಯ ಆಯ್ಕೆಯಲ್ಲೂ ಬದಲಾವಣೆ ಮಾಡಿಕೊಂಡು ಪಕ್ಕಾ ಹಳ್ಳಿ ಆಕ್ಷನ್ ಸಿನಿಮಾದೊಂದಿಗೆ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ. ಸದ್ಯ ಪೋಸ್ಟರ್‌ಗಳ ಮೂಲಕ ಸದ್ದು ಮಾಡುತ್ತಿರುವ ಶ್ರೀನಗರ ಕಿಟ್ಟಿ ಅವರ ಮುಂಬರುವ ಸಿನಿಮಾ ಗೌಳಿ (Gowli Movie) ಇದೀಗ ಯು/ಎ ಪ್ರಮಾಣಪತ್ರದೊಂದಿಗೆ ಸೆನ್ಸಾರ್ ಮಂಡಳಿಯ ಮೂಲಕ ಬಿಡುಗಡೆಗೆ ಅನುಮತಿ ಪಡೆದಿದೆ. ಸೂರ ಅವರ ಚೊಚ್ಚಲ ನಿರ್ದೇಶನದ ಈ ಸಿನಿಮಾವು ಇದೇ ಫೆಬ್ರವರಿ 24 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

ಈಗಾಗಲೇ ಶ್ರೀನಗರ ಕಿಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಗೌಳಿ’ ಸಿನಿಮಾದ ಟೀಸರ್‌ ಬಿಡುಗಡೆ ಆಗಿದ್ದು, ಸಿನಿಮಾದ ಮೇಕಿಂಗ್ ಟೀಸರ್‌ನಲ್ಲಿಯೇ ಗಮನ ಸೆಳೆಯುತ್ತಿದೆ. ಅದರಲ್ಲಿಯೂ ಕಿಟ್ಟಿಯ ಭಯಾನಕ ಅವತಾರವಂತೂ ಸಿನಿ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಹುಟ್ಟಿಸುತ್ತಿದೆ. ನಿರ್ದೇಶಕ ಸೂರ ಮೊದಲ ಬಾರಿಗೆ ಆಕ್ಷನ್ ಥ್ರಿಲ್ಲರ್ ಸಿನಿಮಾನ್ನು ನಿರ್ದೇಶಿಸಿದ್ದು, ನಟ ಕಿಟ್ಟಿಯನ್ನು ವಿಶಿಷ್ಟ ಪಾತ್ರದಲ್ಲಿ ತೋರಿಸಿದ್ದಾರೆ. ಸಿನಿಮಾದಲ್ಲಿ ಪಾವನಾ ಗೌಡ ನಾಯಕಿಯಾಗಿ ನಟಿಸಿದ್ದಾರೆ.

“ಗೌಳಿ” ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ಜೊತೆಗೆ ರಂಗಾಯಣ ರಘು, ಶರತ್ ಲೋಹಿತಾಶ್ವ, ಪಾವನಾ ಗೌಡ, ಯಶ್ ಶೆಟ್ಟಿ, ಸುಧಿ, ಗೋವಿಂದೇಗೌಡ ಇನ್ನೂ ಕೆಲವರು ನಟಿಸಿದ್ದಾರೆ. ಸೋಹನ್ ಫಿಲ್ಮ್ ನಿರ್ಮಾಣ ಸಂಸ್ಥೆಯ ಬ್ಯಾನರ್ ಅಡಿಯಲ್ಲಿ ರಘು ಸಿಂಗಂ ನಿರ್ಮಿಸಿದ ಈ ಸಿನಿಮಾದಲ್ಲಿ ಯಶ್ ಶೆಟ್ಟಿ ಪ್ರತಿನಾಯಕನಾಗಿ ನಟಿಸಿದ್ದಾರೆ. ಇನ್ನು ಟಗರು ಖ್ಯಾತಿಯ ಶರತ್ ಲೋಹಿತಾಶ್ವ ಮತ್ತು ಸುಧಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ : D56 Movie : ನಟ ದರ್ಶನ್‌ ಅಭಿನಯದ ‘D56’ ಸಿನಿಮಾದಲ್ಲಿ ಯಾರಾರು ನಟಿಸಲಿದ್ದಾರೆ ಗೊತ್ತಾ ?

ಇದನ್ನೂ ಓದಿ : ನಟ ದರ್ಶನ್ ಎದೆ ಮೇಲೆ ಅಭಿಮಾನಿಗಳ ಟ್ಯಾಟು : ಇದೇ ರೀತಿ ಟ್ಯಾಟು ಹಾಕಿಸಿಕೊಳ್ಳಬೇಕು ಎಂದಿದ್ರು ಪವರ್ ಸ್ಟಾರ್!

ಇದನ್ನೂ ಓದಿ : “ದರ್ಶನ್ 56” ಕುರಿತು ಹೊಸ ಅಪ್‌ಡೇಟ್ ಕೊಟ್ಟ ರಾಕ್‌ಲೈನ್

ಸಿನಿಮಾಕ್ಕೆ ಶಶಾಂಕ್ ಶೇಷಗಿರಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರಜ್ವಲ್ ಗೌಡ ಅವರ ಛಾಯಾಗ್ರಹಣ ಈ ಸಿನಿಮಾಕ್ಕಿದೆ. ಈ ಸಿನಿಮಾಕ್ಕೆ ಸಂದೀಪ್ ವಲ್ಲುರಿ ಸಿನಿಮಾಟೊಗ್ರಫಿ, ಉಮೇಶ್ ಆರ್‌ಬಿ ಅವರು ಸಂಕಲನ ನೀಡಲಿದ್ದಾರೆ. ಶ್ರೀನಗರ ಕಿಟ್ಟಿಯವರ ಇತರ ಪ್ರಾಜೆಕ್ಟ್‌ಗಳಲ್ಲಿ ವೀರಂ, ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸಿದ್ದಾರೆ. ಅವರು ಸುನಿ ಅವರ ಮುಂಬರುವ ನಿರ್ದೇಶನದ ಅವತಾರ ಪುರುಷ 2ನಲ್ಲಿ ಸಹ ಅಭಿನಯಿಸಲಿದ್ದಾರೆ.

Gowli Movie : Sandalwood starrer Srinagar Kitty “Gowli” release date fixed

Comments are closed.